ಹೊಸಪೇಟೆ : ಹೊಸಪೇಟೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಪಿಯುಸಿ ಟಾಪರ್ಗೆ ಸ್ಕೂಟಿ ನೀಡಿ ಸಚಿವ ಜಮೀರ್ ಅಹ್ಮದ್ ಖಾನ್ ಪ್ರೋತ್ಸಾಹಿಸಿದರು.
ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕೂಡ್ಲಿಗಿ ತಾಲೂಕಿನ ಚೌದಾಪುರ ಗ್ರಾಮದ ಪಿಯು ಕಾಲೇಜಿನ ವಿದ್ಯಾರ್ಥಿನಿ ಕವಿತಾ ಬಿ.ವಿ ಅವರಿಗೆ ಸ್ಕೂಟಿಯನ್ನು ಉಡುಗೊರೆಯಾಗಿ ನೀಡಿದರು. ಜೊತೆಗೆ ಈ ವಿದ್ಯಾರ್ಥಿನಿಗೆ ₹1ಲಕ್ಷ ಪ್ರೋತ್ಸಾಹ ಧನ ನೀಡುವುದಾಗಿ ಸಚಿವರು ಕಾರ್ಯಕ್ರಮದಲ್ಲಿ ಘೋಷಿಸಿದರು.
ಕೂಡ್ಲಿಗಿ ತಾಲೂಕಿನ ಚೌದಾಪುರದ ಕೃಷಿಕಾರದ ವೀರಬಸಪ್ಪ ಮತ್ತು ವಿಶಾಲಮ್ಮ ದಂಪತಿಯ ಪುತ್ರಿ ಕವಿತಾ ಅವರು ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 600ಕ್ಕೆ ತಲಾ 596 ಅಂಕ ಪಡೆದಿದ್ದರು. ಈ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದರು.
ಇದನ್ನೂ ಓದಿ : ಸ್ಯಾಂಡಲ್ವುಡ್ಗೆ ಪ್ರಶಸ್ತಿಗಳ ಬಿಗ್ ಬೂಸ್ಟ್ – 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯಲ್ಲಿ ಕನ್ನಡದ ಕಾಂತಾರ, ಕೆಜಿಎಫ್-2 ಕಮಾಲ್..!
Post Views: 138