ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಹಾಸಂಕಷ್ಟ ಎದುರಾಗಿದ್ದು, ಮುಡಾ 14 ಸೈಟು ಅಕ್ರಮ ಹಂಚಿಕೆ ಪ್ರಕರಣ ಸಿಎಂ ಸಿದ್ದುಗೆ ದೊಡ್ಡ ಕಂಟಕವನ್ನೇ ತಂದಿಟ್ಟಿದೆ. ತಮ್ಮ ಸುದೀರ್ಘ 40 ವರ್ಷಗಳ ರಾಜಕೀಯ ಜೀವನದಲ್ಲೇ, ಹಿಂದೆಂದೂ ಎದುರಿಸದ ಇಕ್ಕಟ್ಟಿಗೆ ಈಗ ಸಿದ್ದರಾಮಯ್ಯ ಸಿಲುಕಿದ್ದಾರೆ. ಜೀವನದಲ್ಲಿ ಮೊದಲ ಬಾರಿಗೆ ಪ್ರಕರಣವೊಂದರ ತನಿಖೆ ಎದುರಿಸುತ್ತಿದ್ದಾರೆ.
ಹೌದು.. ಸಿಎಂ ಸಿದ್ದರಾಮಯ್ಯ ನಿಷ್ಕಳಂಕ ರಾಜಕಾರಣಿ ಎಂದೇ ಖ್ಯಾತಿ ಗಳಿಸಿದ್ದರು. ಹೀಗಿದ್ದ ಈ ಹೆಸರಿಗೆ ಸದ್ಯ ಮುಡಾ ಪ್ರಕರಣದ ಕೆಸರು ಮೆತ್ತಿಕೊಂಡಿದೆ. ಮುಖ್ಯಮಂತ್ರಿ ಆಗಿರುವಾಗಲೇ ಲೋಕಾಯುಕ್ತ ತನಿಖೆಗೆ ಕೊರಳೊಡ್ಡಬೇಕಾದ ಅನಿವಾರ್ಯತೆ ಎದುರಾಗಿದೆ.
ಈಗಾಗಲೇ ಮುಡಾ ಕೇಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗಿದೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯ A1 ಆರೋಪಿಯಾಗಿದ್ದಾರೆ. ಇನ್ನು ಸಿಎಂ ಪತ್ನಿ ಪಾರ್ವತಿ A2, ಬಾಮೈದ ಮಲ್ಲಿಕಾರ್ಜುನ್ ಸ್ವಾಮಿ A3 ಹಾಗೂ ಭೂಮಿ ಮಾರಾಟ ಮಾಡಿದ ಮಾಲೀಕ ದೇವರಾಜು A4 ಆರೋಪಿಯಾಗಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಜೀವನದಲ್ಲಿ ದಾಖಲಾದ ಮೊದಲ FIR ಇದಾಗಿದ್ದು, ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕೃತವಾಗಿ ತನಿಖೆ ಆರಂಭಿಸಿದೆ. ತನಿಖೆಯ ಮೊದಲ ಹಂತವಾಗಿ ಮೈಸೂರು SP ಉದೇಶ್ ಅವರು FIR ದಾಖಲಾಸಿದ್ದು, ಈಗ ನೋಟಿಸ್ ಸರಿದಿ.. ಮೊದಲಿಗೆ ಲೋಕಾಯುಕ್ತ ಪೊಲೀಸರು ಸಿಎಂ ವಿರುದ್ಧ ಯಾರು ದೂರು ಕೊಟ್ಟಿದ್ದಾರೋ ಅವರ ಹೇಳಿಕೆ, ಜತೆಗೆ ದಾಖಲೆ ಪಡೆದುಕೊಳ್ತಾರೆ.
ಇಷ್ಟೆ ಅಲ್ಲದೇ 1996ರಿಂದ 2023 ರವರೆಗಿನ ದಾಖಲೆ ಪರಿಶೀಲಿಸ್ತಾರೆ. ಮುಂದುವರೆದು ಜಾಗದ ಮೂಲ ಮಾಲೀಕರು ಮತ್ತು ಅಧಿಕಾರಿಗಳು ಯಾರಿದ್ದಾರೋ ಅವರಿಗೆ ನೋಟಿಸ್ ಕೊಡಲಿದ್ದಾರೆ. ಸಿದ್ದರಾಮಯ್ಯ, ಅವರ ಪತ್ನಿ ಸೇರಿದಂತೆ ಇತರೆ ಆರೋಪಿಗಳು ನೋಟಿಸ್ ಜಾರಿ ಮಾಡಿ, ವಿಚಾರಣೆಗೆ ಕರೆಯಲಾಗುತ್ತೆ. ಸದ್ಯ ಸಿದ್ದು ವಿರುದ್ಧದ ಮುಡಾ ಕೇಸ್ ರಾಜ್ಯದಲ್ಲಿ ಭಾರೀ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ : ಕೊಡಗು : 20 ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದ ಹೆಡ್ ಮಾಸ್ಟರ್..!