ಬೆಂಗಳೂರು : ನಕಲಿ ಡೇಟ್ ಆಫ್ ಬರ್ತ್ ನೀಡಿ ಸರ್ಕಾರಿ ಕೆಲಸಕ್ಕೆ ಸೇರಿದ ಆರೋಪದ ಮೇಲೆ ಬ್ಯಾಡರಹಳ್ಳಿ ಠಾಣೆ PSI ಕಾಶಿಗೌಡ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ವಿಧಾನಸೌಧ ಪೊಲೀಸ್ ಠಾಣೆಗೆ ಕಮಿಷನರ್ ಕಚೇರಿ ಅಧಿಕಾರಿ ಚಂದ್ರಶೇಖರ್ ನೀಡಿದ್ದ ದೂರು ಆಧರಿಸಿ FIR ದಾಖಲು ಮಾಡಲಾಗಿದೆ.
2017/18ರ ಸಾಲಿನಲ್ಲಿ ಕಾಶಿಗೌಡ PSI ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಹುದ್ದೆಗೆ ಅರ್ಜಿ ಸಲ್ಲಿಸಲು 30 ವರ್ಷ ಮೀರಿರಬಾರದು ಅಂತಾ ಸರ್ಕಾರದ ಅಧಿಸೂಚನೆ ಇತ್ತು. ಆದ್ರೆ ಕಾಶಿಗೌಡ ಹುಟ್ಟಿದ ದಿನಾಂಕ 15-04-1987 ಆಗಿದ್ದು, ಅವರು 15-04 -1988 ಅಂತಾ ಸುಳ್ಳು ದಾಖಲೆ ನೀಡಿದ ಆರೋಪ ಕೇಳಿಬಂದಿದೆ.
ನಕಲಿ ದಾಖಲೆ ನೀಡಿ PSI ಹುದ್ದೆಗೆ ಸೇರಿದ ಆರೋಪ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಶಿಗೌಡ ಡೇಟ್ ಆಫ್ ಬರ್ತ್ ಬಗ್ಗೆ ವಕೀಲ ರಾಘವೇಂದ್ರ ಇಟಗಿ ಎಂಬುವವರು ದೂರು ನೀಡಿದ್ದರು. ರಾಘವೇಂದ್ರ ಇಟಗಿ ದೂರು ಪರಿಶೀಲಿಸಿ, ಅಧಿಕಾರಿಗಳು FIR ದಾಖಲಿಸಿದ್ದಾರೆ.
ಇದನ್ನೂ ಓದಿ : ಉಡುಪಿಯಲ್ಲಿ ಗಾಂಜಾ, MDMA ಮಾರಾಟಕ್ಕೆ ಯತ್ನ – ನಾಲ್ವರು ಅರೆಸ್ಟ್..!