ಬೆಂಗಳೂರು : ಬೆಂಗಳೂರಿನಲ್ಲಿ ಓವರ್ ನೈಟ್ ಎಣ್ಣೆ ಪಾರ್ಟಿಗೆ ಅವಕಾಶ ಮಾಡಿಕೊಡುತ್ತಿದ್ದ ಪಬ್ಗಳಿಗೆ ಇದೀಗ ಕೇಂದ್ರ ವಿಭಾಗದ ಪೊಲೀಸರು ಶಾಕ್ ಕೊಟ್ಟಿದ್ದಾರೆ. ವೀಕೆಂಡ್ ಮೂಡ್ನಲ್ಲಿದ್ದ ಪಬ್ಗಳ ಮೇಲೆ ಕೇಂದ್ರ ವಿಭಾಗ ಡಿಸಿಪಿ ಶೇಖರ್ ಹೆಚ್ ಟೆಕ್ಕನಣ್ಣವರ್ ನೇತೃತ್ವದಲ್ಲಿ ರೇಡ್ ಮಾಡಿದ್ದಾರೆ.
ಎಂಜಿ. ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ನಲ್ಲಿ ಪೊಲೀಸರು ಸ್ಪೇಷಲ್ ಡ್ರೈವ್ ಮಾಡಿ, ಅವಧಿ ಮೀರಿ ಪಾರ್ಟಿ ಅವಕಾಶ ಮಾಡಿಕೊಡುತ್ತಿದ್ದ ಪಬ್ ಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಪಬ್ಗಳಲ್ಲಿ ಅತಿಯಾದ ಸೌಂಡ್, ಓವರ್ ನೈಟ್ ಪಾರ್ಟಿಯಿಂದ ಜನ ಕಂಗೆಟ್ಟಿದ್ದರು. ಹೀಗಾಗಿ ಪೊಲೀಸರಿಗೆ ಸಾಕಷ್ಟು ದೂರುಗಳು ಬಂದಿತ್ತಿದ್ದ ಕಾರಣ ಡಿಸಿಪಿ ಶೇಖರ್ ಅವರು 1ಗಂಟೆಗೆ ಪಬ್, ಬಾರ್ ಬಂದ್ ಮಾಡಿಸಿದ್ದಾರೆ.
ಪೊಲೀಸರ ದಿಢೀರ್ ಎಂಟ್ರಿಯಿಂದ ಪಬ್ ಸಿಬ್ಬಂದಿ ದಿಕ್ಕೆಟ್ಟಿದ್ದರು. ಈ ವೇಳೆ ಅವಧಿ ಮೀರಿ ಪಬ್, ನಡೆಸದಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಅವಧಿ ಮೀರಿ ಪಬ್, ಬಾರ್ ನಡೆಸುತ್ತಿದ್ದ 15 ಪಬ್ಗಳ ವಿರುದ್ಧ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ‘ಫಾರೆಸ್ಟ್’ ಚಿತ್ರದ ಸಾಂಗ್ಗೆ ಅಭಿಮಾನಿಗಳು ಫಿದಾ..!