Download Our App

Follow us

Home » ರಾಷ್ಟ್ರೀಯ » ಉದ್ಯಮ ರತ್ನ ರತನ್ ಟಾಟಾ ಅಂತಿಮ ದರ್ಶನಕ್ಕೆ ವ್ಯವಸ್ಥೆ.. ಅಂತ್ಯಕ್ರಿಯೆ ಎಲ್ಲಿ ನಡೆಯುತ್ತೆ? ಇಲ್ಲಿದೆ ಮಾಹಿತಿ..!

ಉದ್ಯಮ ರತ್ನ ರತನ್ ಟಾಟಾ ಅಂತಿಮ ದರ್ಶನಕ್ಕೆ ವ್ಯವಸ್ಥೆ.. ಅಂತ್ಯಕ್ರಿಯೆ ಎಲ್ಲಿ ನಡೆಯುತ್ತೆ? ಇಲ್ಲಿದೆ ಮಾಹಿತಿ..!

ಭಾರತದ ಹೆಮ್ಮೆಯ ಪುತ್ರ, ಉದ್ಯಮ ರತ್ನ ರತನ್ ಟಾಟಾ ಅವರ ಅಗಲಿಕೆ ಇಡೀ ಭಾರತೀಯರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಸಾಯುವ ಕೊನೆಕ್ಷಣದವರೆಗೂ ಸದಾ ಚಟುವಟಿಕೆಯಿಂದಲೇ ಇದ್ದ ರತನ್ ಟಾಟಾ ಅವರ ಬದುಕು ಅನೇಕರಿಗೆ ಸ್ಪೂರ್ತಿಯಾಗಿದೆ.

ದೇಶದ ಅಪ್ರತಿಮ ಐಕಾನ್​ ರತನ್​ ಟಾಟಾಗೆ ಮಹಾರಾಷ್ಟ್ರ ಸರ್ಕಾರವು ಅಂತಿಮ ವಿಧಿವಿಧಾನವನ್ನು ಸಲ್ಲಿಸಲಿದೆ. ಅವರ ಕುಟುಂಬ ಜೊತೆಯಾಗಿ ನಿಂತು ಕೊನೆಯ ಕಾರ್ಯವನ್ನು ಮಾಡಲಿದೆ. ಪಾರ್ಥಿವ ಶರೀರವನ್ನು ಇಂದು ದಕ್ಷಿಣ ಮುಂಬೈನ ನಾರಿಮನ್ ಪಾಯಿಂಟ್‌ನಲ್ಲಿರುವ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ (NCPA) ತೆಗೆದುಕೊಂಡು ಹೋಗಲಾಗುತ್ತದೆ.

ಅಂತಿಮ ದರ್ಶನಕ್ಕೆ ವ್ಯವಸ್ಥೆ : ಇಂದು ಬೆಳಿಗ್ಗೆ 10.30 ರಿಂದ ಸಂಜೆ 3.30 ರವರೆಗೆ ರತನ್​ ಟಾಟಾ ಅವರ ಅಂತಿಮ ದರ್ಶನ ಪಡೆಯಲು ಜನರಿಗೆ ವ್ಯವಸ್ಥೆ ಮಾಡಲಾಗಿದೆ. 3.30ರ ಬಳಿಕ ಅವರ ಪಾರ್ಥಿವ ಶರೀರವನ್ನು ಅಂತಿಮ ವಿಧಿವಿಧಾನಗಳಿಗಾಗಿ ವರ್ಲಿ ಚಿತಾಗಾರಕ್ಕೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ರತನ್ ಟಾಟಾ ಅವರ ಅಂತ್ಯಕ್ರಿಯೆಯಲ್ಲಿ ನಡೆಯಲಿದೆ.

ಮಹಾರಾಷ್ಟ್ರದಲ್ಲಿ ಗುರುವಾರದಂದು ನಡೆಯಬೇಕಾಗಿದ್ದ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್​ ಶಿಂಧೆಯವರು, ‘ನೈತಿಕತೆ ಮತ್ತು ಉದ್ಯಮಶೀಲತೆಯ ವಿಶಿಷ್ಟ ಮಿಶ್ರಣ’ ಎಂದು ಕರೆಯುವ ಮೂಲಕ ಬೇಸರ ವ್ಯಕ್ತ ಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಸಹ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಉದ್ಯಮ ಸಾಮ್ರಾಜ್ಯದ ಧೀಮಂತ ನಾಯಕ… ರತನ್‌ ಟಾಟಾ ಅಗಲಿಕೆಗೆ ಭಾರತೀಯ ಉದ್ಯಮಿಗಳ ತೀವ್ರ ಸಂತಾಪ..!

Leave a Comment

DG Ad

RELATED LATEST NEWS

Top Headlines

ಅರಣ್ಯ ಇಲಾಖೆಯಲ್ಲಿ ಲಂಚದ ರೇಟ್ ​ಕಾರ್ಡ್.. ಅಪ್ರೈಸಲ್ ಕಮಿಟಿಯಲ್ಲಿ ಲಕ್ಷ ಲಕ್ಷ ಲೂಟಿ..!

ಬೆಂಗಳೂರು : ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ಸ್ಟೇಟ್ ಲೆವೆಲ್ ಎಕ್ಸ್​ಫರ್ಟ್​ ಅಪ್ರೈಸಲ್ ಕಮಿಟಿ ವಿರುದ್ದ ಇದೀಗ ಲಕ್ಷ ಲಕ್ಷ ಹಣ ಸುಲಿಗೆ ಮಾಡುತ್ತಿರುವ ಗಂಭೀರ ಆರೋಪ

Live Cricket

Add Your Heading Text Here