ಬೆಳಗಾವಿ : ಬಸ್ ಸೀಟ್‌ಗಾಗಿ ಶುರುವಾದ ಜಗಳ ವಿಕೋಪಕ್ಕೆ ತಿರುಗಿ ಗಂಡ-ಹೆಂಡತಿಗೆ ಯುವಕರು ಮನಸೋ ಇಚ್ಛೆ ಥಳಿಸಿದ ಘಟನೆ ಜಿಲ್ಲೆ ಹುಕ್ಕೇರಿ ತಾಲೂಕಿನ ಮಸರಗುಪ್ಪಿ ಕ್ರಾಸ್ ಬಳಿ ನಡೆದಿದೆ. ಪರಪ್ಪ ಶಿವಪ್ಪ ನಾಸಿಪುಡಿ, ಸುನಿತಾ ಹಲ್ಲೆಗೊಳಗಾದವರು.
ಗರ್ಭಿಣಿ ಅನ್ನೋದನ್ನೂ ನೋಡದೇ ಯುವಕರು ಥಳಿಸಿದ ಆರೋಪ ಕೇಳಿಬಂದಿದೆ. ಪತಿಗೆ ಹೊಡೆಯುತ್ತಿದ್ದವರನ್ನು ಬಿಡಿಸಲು ಹೋಗಿದ್ದ ಪತ್ನಿಗೂ ಯುವಕರು ಥಳಿಸಿದ್ದಾರೆ ಎನ್ನಲಾಗಿದೆ.
ಸಂಕೇಶ್ವರದಿಂದ ಗೋಕಾಕ್ಗೆ ಹೊರಟಿದ್ದ ಬಸ್ನಲ್ಲಿ ಸೀಟ್‌ಗಾಗಿ ಜಗಳ ಶುರುವಾಗಿತ್ತು. ಈ ಬಗ್ಗೆ ಸಿಂಧಿಕುರಬೇಟ ಗ್ರಾಮದ ಮಹಿಳೆಯರು ಮನೆಯವರಿಗೆ ಹೇಳಿದ್ರು. ಆ ಬಳಿಕ ಫಿಲ್ಮಿ ಸ್ಟೈಲ್ನಲ್ಲಿ ಬಂದ 10ಕ್ಕೂ ಹೆಚ್ಚು ಯುವಕರು ಗಂಡ-ಹೆಂಡತಿ ಹಲ್ಲೆ ಮಾಡಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಯುವಕರ ವಿರುದ್ಧ ಕೇಸ್ ದಾಖಲಾಗಿದೆ.
ಇದನ್ನೂ ಓದಿ : ಸೈಕ್ಲೋನ್ ಎಫೆಕ್ಟ್ – ಚಾಮುಂಡಿ ಬೆಟ್ಟದಲ್ಲಿ ಉರುಳಿದ ಬೃಹತ್ ಬಂಡೆ.. ಬಸ್ ಜಸ್ಟ್ ಮಿಸ್..!
Post Views: 656