ಬೆಂಗಳೂರು : ರೌಡಿಶೀಟರ್ ಗಳ ಗ್ಯಾಂಗ್ ಕಟ್ಟಿಕೊಂಡು ಬಿಲ್ಡರ್ ಗಳ ಬಳಿ ಹಣ ವಸೂಲಿ ಮಾಡುತ್ತಿದ್ದ ನಕಲಿ RTI ಕಾರ್ಯಕರ್ತ ದೀಪಕ್ ಗೌಡ ಹಾಗೂ ರೌಡಿಶೀಟರ್ ರಕ್ಷಿತ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಜೈಹಿಂದ್ ಸಂಘಟನೆ ಮುಖ್ಯಸ್ಥ ಎಂದು ಹೇಳಿಕೊಳ್ತಿದ್ದ ದೀಪಕ್ ಗೌಡ, ನಕಲಿ RTI ಕಾರ್ಯಕರ್ತನಾಗಿದ್ದ. ರೌಡಿ ಪಟಾಲಂ ಮಾಡಿಕೊಂಡು ನಗರದ ಅನೇಕ ಬಿಲ್ಡರ್ ಗಳಿಗೆ ಬೆದರಿಕೆ ಹಾಕುತ್ತಿದ್ದ. ಬಿಲ್ಡಿಂಗ್ ಸರಿ ಇಲ್ಲ, ರೂಲ್ಸ್ ಪ್ರಕಾರ ಕಟ್ಟಿಲ್ಲ, ಇದನ್ನೆಲ್ಲ ಬಹಿರಂಗ ಮಾಡ್ತೀವಿ ಅಂತ ಬೆದರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದ.
ಅದೇ ರೀತಿ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಬಿಂದು ವೆಂಚರ್ಸ್ ಮಾಲೀಕರಿಗೆ ಬೆದರಿಸಿ 80 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ. ಸದ್ಯ ಸಿಸಿಬಿಯಿಂದ ನಕಲಿ RTI ಕಾರ್ಯಕರ್ತ ದೀಪಕ್ ಗೌಡ ಮತ್ತು ರೌಡಿಶೀಟರ್ ರಕ್ಷಿತ್ ಬಂಧನವಾಗಿದೆ. ರಕ್ಷಿತ್ ತಾವರೆಕೆರೆ ಪೊಲೀಸ್ ಠಾಣೆ ರೌಡಿಶೀಟರ್ ಆಗಿದ್ದ. ರಕ್ಷಿತ್, ಈ ಹಿಂದೆ RTI ಕಾರ್ಯಕರ್ತ ವೆಂಕಟೇಶ್ ಎಂಬುವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಇನ್ನೊಬ್ಬರ ಆರೋಪಿ ಶ್ರೀರಾಂಪುರ ಪೊಲೀಸ್ ಠಾಣೆ ರೌಡಿಶೀಟರ್ ಅಜಯ್ ಕುಮಾರ್ ಎಸ್ಕೇಪ್ ಆಗಿದ್ದಾನೆ. ಈ ಬಗ್ಗೆ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಚಂದ್ರಗುಪ್ತ ಪ್ರತಿಕ್ರಿಯಿಸಿ, ರಾಜಾಜಿನಗರದ ಇಂಡಸ್ಟ್ರಿ ಯಲ್ ಬಿಲ್ಡರ್ ಗೆ ಅರೋಪಿಗಳು ಬೆದರಿಕೆ ಹಾಕಿದ್ರು. ಈ ಸಂಬಂಧ ಆರ್ ಟಿ ಐ ಕಾರ್ಯಕರ್ತ ಮತ್ತು ರೌಡಿ ಶೀಡರ್ ಬಂಧಿಸಿದ್ದೇವೆ ಎಂದು ಹೇಳಿದ್ದಾರೆ. ಬಿಲ್ಡಿಂಗ್ ದಾಖಲೆಗಳನ್ನ ಪರಿಶೀಲಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ರು. ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ಆಗಿದೆ. ಕಟ್ಟಡ ನಿರ್ಮಾಣ ವೇಳೆ ಎಂಟ್ರಿ, ಯಾವುದಾದ್ರು ಅಂಶ ಉಲ್ಲಂಘನೆ ಮಾಡಿದ್ದಾರೆ ಅಂತ ಹೇಳಿ ಬೆದರಿಕೆ ಹಾಕಿದ್ದರು. ೮೫ ಲಕ್ಷ ಬೇಡಿಕೆ ಇಟ್ಟಿದ್ರು, ಈ ಬಗ್ಗೆ ಬಿಲ್ಡರ್ ದೂರು ಕೊಟ್ಟಿದ್ದರು. ಸದ್ಯ ಈ ಬಗ್ಗೆ ವಿಚಾರಣೆ ಮುಂದುವರಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ರಾಜ್ಯಾದ್ಯಂತ ಲೋಕಾಯುಕ್ತ ದಾಳಿ : ಹತ್ತು ಅಧಿಕಾರಿಗಳ ಬಳಿ ಕೋಟಿ ಕೋಟಿ ಮೌಲ್ಯದ ಆಸ್ತಿ ಪತ್ತೆ.. ಏನೆಲ್ಲಾ ವಶಕ್ಕೆ? ಇಲ್ಲಿದೆ ವಿವರ..!