Download Our App

Follow us

Home » ರಾಜ್ಯ » ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಿತಿಮೀರಿದ ಡೆಂಘೀ ಮಹಾಮಾರಿ ​- ಈವರೆಗೂ 6831 ಡೆಂಘೀ ಪ್ರಕರಣಗಳು ಪತ್ತೆ..!

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಿತಿಮೀರಿದ ಡೆಂಘೀ ಮಹಾಮಾರಿ ​- ಈವರೆಗೂ 6831 ಡೆಂಘೀ ಪ್ರಕರಣಗಳು ಪತ್ತೆ..!

ಬೆಂಗಳೂರು : ರಾಜ್ಯದ ಹಲವೆಡೆ ಡೆಂಘಿ ಮಹಾಮಾರಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಈವರೆಗೂ 6831 ಡೆಂಘೀ ಪ್ರಕರಣಗಳು ಪತ್ತೆಯಾಗಿದೆ.  ಡೆಂಘೀ ಜ್ವರ ಹೆಚ್ಚಾಗಿ ಮಕ್ಕಳಲ್ಲೇ ಕಾಣಿಸಿಕೊಳ್ತಿದೆ. 6831 ಮಂದಿ ಪೈಕಿ 2500ಕ್ಕೂ ಹೆಚ್ಚು ಮಂದಿ 18 ವರ್ಷ ಒಳಗಿನವರು ಎಂದು ತಿಳಿದು ಬಂದಿದೆ.  

ಕಳೆದ 24 ಗಂಟೆಯಲ್ಲಿ 155 ಮಂದಿಯಲ್ಲಿ ಡೆಂಘೀ ಪತ್ತೆಯಾಗಿದೆ. 24 ಗಂಟೆಯಲ್ಲೇ 1 ವರ್ಷದೊಳಗಿನ 4 ಮಕ್ಕಳಿಗೆ ಡೆಂಘೀ ದೃಢವಾಗಿದ್ದು, ಈವರೆಗೆ 1 ವರ್ಷದೊಳಗಿನ 131 ಮಕ್ಕಳಲ್ಲಿ ಡೆಂಘೀ ಪತ್ತೆಯಾಗಿದೆ. 1 ವರ್ಷದಿಂದ 18 ವರ್ಷದೊಳಗಿನ 44 ಮಂದಿಗೆ ಡೆಂಘೀ ಅಟ್ಯಾಕ್ ಆಗಿದ್ದು, ​​ಕಳೆದ 24 ಗಂಟೆಯಲ್ಲಿ 18 ವರ್ಷ ಮೇಲ್ಪಟ್ಟ 107 ಜನರಲ್ಲಿ ಡೆಂಘೀ ಪತ್ತೆಯಾಗಿದೆ. ಇಲ್ಲಿಯವರೆಗೂ 18 ವರ್ಷ ಮೇಲ್ಪಟ್ಟ 4305 ಮಂದಿಗೆ ಡೆಂಘೀ ದೃಢವಾಗಿದೆ.

ಇನ್ನು BBMP ವ್ಯಾಪ್ತಿಯಲ್ಲಿ 1793, ಶಿವಮೊಗ್ಗದಲ್ಲಿ 292, ಹಾಸನ-221 ಕೇಸ್​ ಹಾಗೂ ಚಿಕ್ಕಮಗಳೂರು521, ಉಡುಪಿ-199, ದಕ್ಷಿಣ ಕನ್ನಡ-263, ಹಾವೇರಿ 481 ಕೇಸ್,​ ಚಿತ್ರದುರ್ಗದಲ್ಲಿ 275, ಬೆಳಗಾವಿ 180 ಮಂದಿಯಲ್ಲಿ ಡೆಂಘೀ ಪ್ರಕರಣಗಳು ಕಾಣಿಸಿಕೊಂಡಿದೆ.

ಇದನ್ನೂ ಓದಿ : ರಾಜ್ಯ ಪೊಲೀಸ್​ ಅಧಿಕಾರಿಗಳ ಜೊತೆ ಸಿಎಂ ಸಿದ್ದು ಮೆಗಾ ಮೀಟಿಂಗ್ – ದರ್ಶನ್​​​​​ ಕೇಸ್​​ ಸೇರಿ ಸೂಕ್ಷ್ಮ ಪ್ರಕರಣ ಭೇದಿಸಿದ್ದಕ್ಕೆ ಶಹಬ್ಬಾಸ್​ ಗಿರಿ..!

Leave a Comment

DG Ad

RELATED LATEST NEWS

Top Headlines

ಅಶೋಕ್​ ರಾಜೀನಾಮೆ ಕೊಡಲಿ, ತಪ್ಪು ಮಾಡದ ನನ್ನಿಂದ ರಾಜೀನಾಮೆ ಯಾಕ್ ಕೇಳ್ತಾರೆ – ಸಿಎಂ ಸಿದ್ದು..!

ರಾಯಚೂರು : ನಾನು ತಪ್ಪು ಮಾಡಿದ್ದೀನಿ ಅಂತಾ ಕೋರ್ಟ್​ ಹೇಳಿದೆಯಾ..? ತಪ್ಪು ಮಾಡದೇ ನಾನ್ಯಾಕೆ ರಾಜೀನಾಮೆ ಕೊಡಲಿ, ಅಶೋಕ್​ ಮೊದಲು ರಾಜೀನಾಮೆ ಕೊಡಲಿ ಎಂದು ಸಿಎಂ ಸಿದ್ದರಾಮಯ್ಯ

Live Cricket

Add Your Heading Text Here