ಬೆಂಗಳೂರು : ಮಹಿಳೆಯೊಬ್ಬರ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ನಿನ್ನೆ ಬೆಳಿಗ್ಗೆ ಬಿಡುಗಡೆಯಾಗಿದ್ದರು. 20ಕ್ಕೂ ಹೆಚ್ಚು ದಿನಗಳಿಂದ ಜೈಲಿನಲ್ಲಿದ್ದ ಶಾಸಕರು ಬಿಡುಗಡೆಯಾಗಿ, ಜೈಲಿನಿಂದ ನೇರವಾಗಿ ತಮ್ಮ ನಿವಾಸದ ಕಡೆ ತೆರಳಿದ್ದಾರೆ.
ಆದ್ರೆ ಇದೀಗ ಮಾಜಿ ಮಂತ್ರಿ ಮುನಿರತ್ನಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, 2018ರ ನಕಲಿ ಓಟರ್ ಐಡಿ ಪ್ರಕರಣ ಮುನಿರತ್ನ ಅವರಿಗೆ ಕಂಟಕವಾಗಿ ಪರಿಣಮಿಸಿದೆ. ಬಿಜೆಪಿ ಶಾಸಕ ಮುನಿರತ್ನ ವಿರುದ್ದ ಬಿಜೆಪಿ MLC ಮುನಿರಾಜ್ ಗೌಡ ಅವರೇ ಸಮರ ಸಾರಿದ್ದಾರೆ. MLC ತುಳಸಿ ಮುನಿರಾಜ್ ಅವರು ಈ ಪ್ರಕರಣ ಸಂಬಂಧ ಮುನಿರತ್ನ ವಿರುದ್ದ ಖಾಸಗಿ ದೂರು ದಾಖಲಿಸಿದ್ದಾರೆ.
2018ರಲ್ಲಿ ಮುನಿರತ್ನ ವಿರುದ್ದ ಎರಡು ಪ್ರಕರಣ ದಾಖಲಾಗಿತ್ತು. ಮುನಿರತ್ನ ವಿರುದ್ದ ದಾಖಲಾಗಿದ್ದ ಪ್ರಕರಣ ಜನಪ್ರತಿನಿಧಿಗಳ ಕೋರ್ಟ್ ಗೆ ವರ್ಗಹಿಸುವಂತೆ ಅರ್ಜಿ ಸಲ್ಲಿಸಲಾಗಿದೆ. ಎರಡು ಪ್ರಕರಣದಲ್ಲಿ ಒಂದು ಪ್ರಕರಣ ಮಾತ್ರ 1ನೇ ಎಸಿಎಂಎಂ ಕೋರ್ಟ್ ಗೆ ಪೊಲೀಸರು ವರ್ಗವಣೆ ಮಾಡಿದ್ದರು. ಮುನಿರತ್ನ ವಿರುದ್ದ ದಾಖಲಾಗಿದ್ದ ಪ್ರಕರಣದಲ್ಲಿ ಡಮ್ಮಿ ಜಾರ್ಜ್ ಶೀಟ್ ಸಲ್ಲಿಸಿದ್ದ ಆರೋಪ ಕೇಳಿ ಬಂದಿತ್ತು. ಮುನಿರತ್ನ ಅವರಿಗೆ ಅನುಕೂಲ ಆಗುವಂತೆ ಜಾಲಹಳ್ಳಿ ಪೊಲೀಸರು ಚಾರ್ಜ್ ಶೀಟ್ ನೀಡಿದ್ದರು.
ಇದೀಗ ಪೊಲೀಸರ ವಿರುದ್ದ ಆರೋಪ ಮಾಡಿ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಪೊಲೀಸರು ಸಲ್ಲಿಸಿರುವ ವರದಿಯನ್ನು ತುಳಸಿ ಮುನಿರಾಜ್ ಗೌಡ ಅವರು ಚಾಲೆಂಜ್ ಮಾಡಿದ್ದಾರೆ. ತುಳಸಿ ಮುನಿರಾಜ್ ಪರ ಹಿರಿಯ ವಕೀಲ ಧರಣೇಶ್ ಅವರು ವಾದ ಮಂಡಿಸಿದ್ದಾರೆ. ಮುನಿರಾಜ್ ಗೌಡ ಅವರು 2018ರಲ್ಲಿ ಮುನಿರತ್ನ ವಿರುದ್ದ ಸ್ಪರ್ಧೆ ಮಾಡಿದ್ದರು. ಬಿಜೆಪಿ ಶಾಸಕನ ವಿರುದ್ದ ಬಿಜೆಪಿ MLC ಕೋರ್ಟ್ ಮೆಟ್ಟಿಲೇರಿರುವ ಅಪರೂಪದ ಪ್ರಕರಣ ಇದಾಗಿದೆ.
ಇದನ್ನೂ ಓದಿ : ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ..!