Download Our App

Follow us

Home » ಸಿನಿಮಾ » ಐಶ್ವರ್ಯಾ ರೈ ಜಿಮ್​ಗೆ ಭೇಟಿ ನೀಡಿದ್ದರಿಂದ ನಮ್ಮ ಮಧ್ಯೆ ಬ್ರೇಕಪ್ ಆಯ್ತು – ಸಲ್ಮಾನ್ ಖಾನ್ ಮಾಜಿ ಪ್ರೇಯಸಿ..!

ಐಶ್ವರ್ಯಾ ರೈ ಜಿಮ್​ಗೆ ಭೇಟಿ ನೀಡಿದ್ದರಿಂದ ನಮ್ಮ ಮಧ್ಯೆ ಬ್ರೇಕಪ್ ಆಯ್ತು – ಸಲ್ಮಾನ್ ಖಾನ್ ಮಾಜಿ ಪ್ರೇಯಸಿ..!

ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ 1990 ರ ದಶಕದ ಬಾಲಿವುಡ್‌ನ ಜನಪ್ರಿಯ ಜೋಡಿ. ಈ ಜೋಡಿ ಹಮ್ ದಿಲ್ ದೇ ಚುಕೆ ಸನಮ್ ಸೆಟ್‌ನಲ್ಲಿ ಭೇಟಿಯಾದ ಬಳಿಕ ಪ್ರೀತಿಯಲ್ಲಿ ಬಿದ್ದರು. ಆದರೆ ಆ ವೇಳೆಗಾಗಲೇ ಸಲ್ಮಾನ್ ಖಾನ್ ಸೋಮಿ ಅಲಿ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ಇಂಗ್ಲೀಷ್‌ ಮಾಧ್ಯಮವೊಂದರ ಜೊತೆ ನಡೆಸಿದ ಸಂದರ್ಶನದಲ್ಲಿ ಹಮ್ ದಿಲ್ ದೇ ಚುಕೆ ಸನಮ್ ಸೆಟ್‌ನಲ್ಲಿ ನಡೆದ ಒಂದು ಘಟನೆಯ ಬಗ್ಗೆ ಸೋಮಿ ಹೇಳಿದ್ದರು.

ಸಂದರ್ಶನದಲ್ಲಿ ಸೋಮಿ, ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಮಧ್ಯೆ ಬೆಳೆಯುತ್ತಿರುವ ರೋಮಾನ್ಸ್ ಬಗ್ಗೆ ಹೇಳಿಕೊಂಡಿದ್ದರು. ಇದು ಅವರ ಬ್ರೇಕಾಪ್‌ಗೆ ಕಾರಣವಾಗಿತ್ತು. ಹಮ್ ದಿಲ್ ದೇ ಚುಕೆ ಸನಮ್ ಶೂಟಿಂಗ್ ನಡೆಯುತ್ತಿದ್ದ ವೇಳೆ ಸಲ್ಮಾನ್‌ ಖಾನ್‌ಗೆ ಸೋಮಿ ಅಲಿ ಖಾನ್ ಕರೆ ಮಾಡಿದ್ದರು. ಆದರೆ ಅವರು ಕರೆ ಸ್ವೀಕರಿಸಿಲ್ಲ, ಹೀಗಾಗಿ ಸೋಮಿ ಸಿನಿಮಾದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರಿಗೆ ಕರೆ ಮಾಡಿದರು. ಕರೆ ಸ್ವೀಕರಿಸಿದ ಸಂಜಯ್ ಲೀಲಾ ಬನ್ಸಾಲಿ ಅವರು ಸಲ್ಮಾನ್ ಖಾನ್ ಶೂಟಿಂಗ್‌ನಲ್ಲಿದ್ದಾನೆ ಹಾಗೆ ಕರೆ ಸ್ವೀಕರಿಸುತ್ತಿಲ್ಲ ಎಂದು ಹೇಳಿದರು. ಆತ ಶೂಟಿಂಗ್‌ನಲ್ಲಿದ್ದರೆ ನಿರ್ದೇಶಕರಾಗಿ ನೀವು ಹೇಗೆ ನನ್ನ ಜೊತೆ ಮಾತನಾಡಲು ಸಾಧ್ಯವಾಗುತ್ತದೆ ಎಂದು ನಾನು ಕೇಳಿದ್ದೆ ಎಂದು ಹೇಳಿದ್ದರು.

ಸೋಮಿ ಅಲಿ ಅವರು ಸಲ್ಮಾನ್‌ ಖಾನ್ ಅವರೊಟ್ಟಿಗೆ ವಾಸಿಸುತ್ತಿರುವಾಗಲೇ ಐಶ್ವರ್ಯಾ ರೈ ಸಲ್ಮಾನ್ ಖಾನ್ ಅವರ ಜಿಮ್‌ಗೆ ಭೇಟಿ ನೀಡುತ್ತಿದ್ದರು ಎಂದು ಸೋಮಿ ಹೇಳಿದ್ದರು. ಸೋಮಿ ಮತ್ತು ಸಲ್ಮಾನ್ ಮನೆ ಗ್ಯಾಲಕ್ಸಿಯ ನೆಲ ಮಹಡಿಯಲ್ಲಿ ವಾಸಿಸುತ್ತಿದ್ದರು, ಅಲ್ಲಿ ಜಿಮ್ ಕೂಡ ಇತ್ತು. ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಸಲ್ಮಾನ್ ಮತ್ತು ಐಶ್ ಪ್ರೀತಿಯಲ್ಲಿ ಬಿದ್ದರೆ ಎಂದು ಕೇಳಿದಾಗ, ಹಮ್ ದಿಲ್ ದೇ ಚುಕೆ ಸನಮ್ ಚಿತ್ರೀಕರಣದ ಸಮಯದಲ್ಲಿ ಅವರಿಬ್ಬರ ಮಧ್ಯೆ ಪ್ರೀತಿ ಶುರುವಾಯ್ತು ಎಂದು ಸೋಮಿ ಹೇಳಿದ್ದಾರೆ.

ಸಿನಿಮಾ ಸೆಟ್‌ನಲ್ಲಿ ನನ್ನ ಪರವಾಗಿದ್ದ ಕೆಲಸಗಾರರಿಂದ ನಾನು ಮಾಹಿತಿಯನ್ನು ಸಂಗ್ರಹಿಸುತ್ತಿದ್ದೆ. ಹೀಗಾಗಿ ಅವರಿಬ್ಬರ ಮಧ್ಯೆ ಸಂಪರ್ಕ ಬೆಳೆಯುತ್ತಿದೆ ಎಂದು ನನಗೆ ಅನಿಸಿತು ಹಾಗೂ ನಾನು ಹೊರಡುವ ಸಮಯ ಬಂದಿದೆ ಎಂದು ನನಗೆ ಅರಿವಾಗಿತ್ತು ಎಂದು ನಟಿ ವಿವರಿಸಿದರು. ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ಸಲ್ಮಾನ್ ಮತ್ತು ಐಶ್ವರ್ಯಾ 2002 ರಲ್ಲಿ ಬೇರೆಯಾದರು.

ಇದನ್ನೂ ಓದಿ : ಸಿನಿ ಪ್ರಿಯರೇ ಮಿಸ್​ ಮಾಡ್ಬೇಡಿ : ಮಲ್ಟಿಫ್ಲೆಕ್ಸ್​​ಗಳಲ್ಲಿ ಕೇವಲ 99 ರೂಪಾಯಿಗೆ ಸಿನಿಮಾ ನೋಡುವ ಅವಕಾಶ – ಯಾವಾಗ ಗೊತ್ತಾ?

Leave a Comment

DG Ad

RELATED LATEST NEWS

Top Headlines

ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಡ್ರೆಸ್ ಕೋಡ್ ಜಾರಿ – ದೇವರ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯ..!

ಚಿಕ್ಕಮಗಳೂರು : ಇತ್ತೀಚೆಗೆ ಶೃಂಗೇರಿಯ ಶ್ರೀ ಶಾರದಾಂಬೆ ಸನ್ನಿಧಾನದಲ್ಲಿ ಹಾಗೂ ಸುತ್ತಲಿನ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾಗಿತ್ತು. ಇದೀಗ ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಹೊರನಾಡು ಶ್ರೀ

Live Cricket

Add Your Heading Text Here