ಬೆಂಗಳೂರು : ಬಿಎಂಟಿಸಿ ಕೇಂದ್ರ ಕಚೇರಿಯಲ್ಲೇ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 38 ವರ್ಷದ ಮಹೇಶ್ ನೇಮಕಾತಿ ವಿಭಾಗದಲ್ಲಿ ಕಿರಿಯ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಮೊನ್ನೆ ತಾನೇ ವರ್ಗಾವಣೆಯಾಗಿ ಬಂದಿದ್ದ ಮಹೇಶ್ ಕೆಲಸದ ಒತ್ತಡಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ಬೆಳಗ್ಗೆ 6 ಗಂಟೆಗೆ ಕಚೇರಿಗೆ ಬಂದು ನೇಣಿಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಿಎಂಟಿಸಿ ಕೇಂದ್ರ ಕಚೇರಿಯ 5ನೇ ಮಹಡಿಯ ರೆಕಾರ್ಡ್ ರೂಂ ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭದ್ರತಾ ವೈಫಲ್ಯವೇ ಮಹೇಶ್ ಆತ್ಮಹತ್ಯೆಗೆ ಕಾರಣ ಎಂದು ನೌಕರ ವರ್ಗ ಆಕ್ರೋಶ ಹೊರಹಾಕಿದೆ.
ಇದನ್ನೂ ಓದಿ : ಬಹುನಿರೀಕ್ಷಿತ ಮ್ಯಾಕ್ಸ್ ಚಿತ್ರದ ಟೀಸರ್ ಔಟ್ : ಮಾಸ್-ಗಾಡ್ ಅವತಾರದಲ್ಲಿ ಕಾಣಿಸಿಕೊಂಡ ಕಿಚ್ಚ ಸುದೀಪ್..!
Post Views: 118