Download Our App

Follow us

Home » ರಾಜಕೀಯ » ಜಮ್ಮುಕಾಶ್ಮೀರ, ಮಹಾರಾಷ್ಟ್ರ, ಹರಿಯಾಣ ವಿಧಾನಸಭೆ ಚುನಾವಣೆ ಇಂದು ಪ್ರಕಟ ಸಾಧ್ಯತೆ..!

ಜಮ್ಮುಕಾಶ್ಮೀರ, ಮಹಾರಾಷ್ಟ್ರ, ಹರಿಯಾಣ ವಿಧಾನಸಭೆ ಚುನಾವಣೆ ಇಂದು ಪ್ರಕಟ ಸಾಧ್ಯತೆ..!

ನವದೆಹಲಿ : ಚುನಾವಣೆ ಆಯೋಗವು ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ವೇಳಾಪಟ್ಟಿಯನ್ನು ಇಂದು ಘೋಷಣೆ ಮಾಡುವ ಸಾದ್ಯತೆಯಿದೆ. ಕೇಂದ್ರ ಚುನಾವಣಾ ಆಯೋಗ ಮಧ್ಯಾಹ್ನ 3 ಗಂಟೆಗೆ ಸುದ್ದಿಗೋಷ್ಠಿ ನಡೆಸಲಿದೆ.

ಈ ವೇಳೆ ಜಮ್ಮು-ಕಾಶ್ಮೀರ, ಹರಿಯಾಣ, ಜಾರ್ಖಂಡ್​ಕ್ಕೆ ದಿನಾಂಕ ಘೋಷಣೆ ಸಾಧ್ಯತೆಯಿದ್ದು, ಇದರೊಂದಿಗೆ ಮಹಾರಾಷ್ಟ್ರ ವಿಧಾನಸಭೆಗೂ ಎಲೆಕ್ಷನ್​​ ಘೋಷಣೆ ಮಾಡುವ ಸಾಧ್ಯತೆಯಿದೆ.  ಆರ್ಟಿಕಲ್​​ 370 ರದ್ದಾದ ನಂತರ ನಡೆಯುವ ಮೊದಲ ಎಲೆಕ್ಷನ್​ ಇದು.

ಸುಪ್ರೀಂಕೋರ್ಟ್ ವಿಧಿಸಿರುವ ಗಡುವಿನ ಪ್ರಕಾರ ಸೆಪ್ಪೆಂಬರ್​​ 30ರ ಒಳಗೆ ಜಮ್ಮು-ಕಾಶ್ಮೀರಕ್ಕೆ ಎಲೆಕ್ಷನ್​​ ನಡೆಸಬೇಕು. ಇದರೊಂದಿಗೆ ನವೆಂಬರ್​​​​ 3ಕ್ಕೆ ಹರ್ಯಾಣ, ನವೆಂಬರ್​ 26ಕ್ಕೆ ಮಹಾರಾಷ್ಟ್ರ ಅವಧಿ ಅಂತ್ಯವಾಗಲಿದೆ. ಹೀಗಾಗಿ ಸುಪ್ರೀಂಕೋರ್ಟ್​ ನಿರ್ದೇಶನ ಹಿನ್ನೆಲೆಯಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದೆ.

ಇನ್ನು ಹೆಚ್​.ಡಿ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಹಾಗೂ ಇ ತುಕಾರಾಂ ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರಿಂದ ತೆರವಾಗಿರುವ ಕ್ಷೇತ್ರಕ್ಕೆ ಬೈಎಲೆಕ್ಷನ್​ ನಡೆಯಲಿದೆ. ಈ ಹಿನ್ನಲೆಯಲ್ಲಿ ಕರ್ನಾಟಕದಿಂದ ಚನ್ನಪ್ಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ದಿನಾಂಕ ಘೋಷಣೆ ಮಾಡುವ ಸಾಧ್ಯತೆಯಿದ್ದು, ಇಂದೇ ಈ ಕ್ಷೇತ್ರಗಳ ಎಲೆಕ್ಷನ್​​ಗೆ ಡೇಟ್​​ ಅನೌನ್ಸ್​​ ಆಗುತ್ತ ಎಂದು ಕಾದುನೋಡಬೇಕಾಗಿದೆ. ​​

ಇದನ್ನೂ ಓದಿ : ವರಮಹಾಲಕ್ಷ್ಮಿ ಹಬ್ಬದಂದೇ ಮನೆ ಮಾಲೀಕರ ಕೈ ಸೇರಿತು ಕಳುವಾಗಿದ್ದ ಚಿನ್ನಾಭರಣ – ನಾಲ್ವರು ಆರೋಪಿಗಳು ಅರೆಸ್ಟ್​..!

Leave a Comment

DG Ad

RELATED LATEST NEWS

Top Headlines

ಸರ್ಜರಿ ಬಳಿಕ ನಟ ಶಿವಣ್ಣ ರಿಲ್ಯಾಕ್ಸ್ – ಸಮುದ್ರ ತಟದಲ್ಲಿ ಪತ್ನಿ ಜೊತೆ ಜಾಲಿ ರೌಂಡ್ಸ್​​!

ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಅವರು ಸರ್ಜರಿ ಬಳಿಕ ಅಮೆರಿಕಾದಲ್ಲಿ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ. ಶಸ್ತ್ರಚಿಕಿತ್ಸೆ ನಂತ್ರ ಚೇತರಿಕೆ ಕಂಡಿರುವ ಹ್ಯಾಟ್ರಿಕ್ ಹೀರೋ ಪತ್ನಿ ಜೊತೆ ಅಮೆರಿಕದ ಕಡಲ

Live Cricket

Add Your Heading Text Here