Download Our App

Follow us

Home » ರಾಜ್ಯ » ಚುನಾವಣೋತ್ತರ ಸಮೀಕ್ಷೆ : ಹರಿಯಾಣ, ಜಮ್ಮು-ಕಾಶ್ಮೀರದಲ್ಲಿ ಯಾರಿಗೆ ಅಧಿಕಾರ ಗೊತ್ತಾ?

ಚುನಾವಣೋತ್ತರ ಸಮೀಕ್ಷೆ : ಹರಿಯಾಣ, ಜಮ್ಮು-ಕಾಶ್ಮೀರದಲ್ಲಿ ಯಾರಿಗೆ ಅಧಿಕಾರ ಗೊತ್ತಾ?

ಹೊಸದಿಲ್ಲಿ : ಲೋಕಸಭಾ ಚುನಾವಣೆಯ ನಂತರ, ಎರಡು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಹಂತದಲ್ಲಿ ಈಗಾಗಲೇ ಚುನಾವಣೆ ಮುಕ್ತಾಯಗೊಂಡಿದೆ. ಹರಿಯಾಣದ ಚುನಾವಣೆ ಇಂದು ನಡೆದಿದೆ. ಮತಚಲಾವಣೆಯ ಅವಧಿಯ ಮುಗಿಯುತ್ತದ್ದಂತೆ ವಿವಿಧ ವಿದ್ಯುನ್ಮಾನ ಮಾಧ್ಯಮಗಳು ನಡೆಸಿದ ಮತಗಟ್ಟೆ ಸಮೀಕ್ಷೆ ಪ್ರಕಟಗೊಂಡಿವೆ.

ಸಮೀಕ್ಷೆಗಳ ಪ್ರಕಾರ, ಹರಿಯಾಣದಲ್ಲಿ ಕಾಂಗ್ರೆಸ್​​ಗೆ ಸರಳ ಬಹುಮತ ಬಂದಿದೆ. 90 ಸ್ಥಾನಗಳ ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್​ ಕನಸು ಭಗ್ನವಾಗಿದ್ದು, ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್​ ಅಧಿಕಾರ ಬರಲಿದೆ ಎಂದು ತಿಳಿಸಿದೆ. ಮ್ಯಾಟ್ರಿಜ್​​ ಸಮೀಕ್ಷೆ ಪ್ರಕಾರ 90 ಸ್ಥಾನಗಳಲ್ಲಿ ಕಾಂಗ್ರೆಸ್​​ಗೆ​​ 55-62, ಬಿಜೆಪಿ 18-24, INLD 03-06, JJP-00-03, ಇತರೆ 02-05 ಎಂದು ವರದಿ ಮಾಡಿದೆ.

ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಹಂತಗಳಲ್ಲಿ ಶಾಂತಿಯುವಾಗಿ ಚುನಾವಣೆ ನಡೆದಿದ್ದು, ಆರ್ಟಿಕಲ್ 370 ರದ್ದಾದ ಬಳಿಕ ನಡೆದ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ. ಸಮೀಕ್ಷೆಗಳ ಪ್ರಕಾರ, ಜಮ್ಮು-ಕಾಶ್ಮೀರದಲ್ಲಿ CONG +NC 46-50, ಬಿಜೆಪಿಗೆ 23-27, PDP 07-11, ಇತರೆ 04-06 ಎಂದು ಚುನಾವಣೋತ್ತರ ಸಮೀಕ್ಷೆ ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರದ ‘ಪೀಪಲ್ ಪಲ್ಸ್’ ಎಕ್ಸಿಟ್ ಪೋಲ್ ಬಿಡುಗಡೆ ಆಗಿದೆ. ಇಲ್ಲಿ ಕಾಂಗ್ರೆಸ್ 46 ರಿಂದ 50 ಸ್ಥಾನ, ಬಿಜೆಪಿ ಕೇವಲ 23 ರಿಂದ 27, ಪಿಡಿಪಿ 07 ರಿಂದ 11 ಸೀಟುಗಳು ಗೆದ್ದರೆ, ಇತರೆ ಪಾರ್ಟಿಗಳು 4ರಿಂದ 6 ಸೀಟು ಗೆಲ್ಲುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಜಮ್ಮು ಮತ್ತು ಕಾಶ್ಮೀರ ಮತಗಟ್ಟೆ ಸಮೀಕ್ಷೆ : 

ಗುಲಿಸ್ತಾನ್​ ನ್ಯೂಸ್​
ಒಟ್ಟು ಸ್ಥಾನ 90
ಮ್ಯಾಜಿಕ್​ ನಂ. 46
CONG+ – 34
BJP – 29
PDP – 06
OTH – 21

ಪೀಪಲ್ಸ್​ ಪಲ್ಸ್​
ಒಟ್ಟು ಸ್ಥಾನ 90
ಮ್ಯಾಜಿಕ್​ ನಂ. 46
CONG+ – 48
BJP – 25
PDP – 09
OTH -08

ಪೋಲ್​ ಆಫ್​ ಪೋಲ್​
CONG + NC -46
BJP- 28,
PDP – 09,
OTH- 07

ಹರಿಯಾಣ ಮತಗಟ್ಟೆ ಸಮೀಕ್ಷೆ : 

ಹರಿಯಾಣ
ಒಟ್ಟು ಸ್ಥಾನ -90
ಮ್ಯಾಜಿಕ್​ ನಂ – 46

ಪೀಪಲ್ಸ್​ ಪಲ್ಸ್​
CONG+-​​​​ 49
BJP- 24
JJP- 01
OTH- 16

P – MARQ -CONG+-​​​​ 56
BJP- 31
JJP- 00
OTH- 03

DHRUV- CONG+-​​​​ 57
BJP- 27
JJP- 00
OTH- 06

ಇದನ್ನೂ ಓದಿ : ಬಿಗ್‌ಬಾಸ್‌ ಶೋ ಹಾಳು ಮಾಡೋಕೆ ನಿಮ್ಮಪ್ಪನಾಣೆ ಸಾಧ್ಯವಿಲ್ಲ – ಲಾಯರ್ ಜಗದೀಶ್​​ ಬೆವರಿಳಿಸಿದ ಕಿಚ್ಚ..!

Leave a Comment

DG Ad

RELATED LATEST NEWS

Top Headlines

ಲಾಯರ್ ಜಗದೀಶ್​ ಅವರು ಹೆಣ್ಮಕ್ಕಳು ಮುಂದೆ ಡ್ರೆಸ್ ಚೇಂಜ್ ಮಾಡ್ತಾರೆ – ದೊಡ್ಮನೆ ನಾರಿಯರು ಗರಂ..!

ಬಿಗ್ ಬಾಸ್ ಮನೆಯಲ್ಲಿ 17 ಸ್ಪರ್ಧಿಗಳು ಒಂದು ವಾರ ಕಳೆದಿದ್ದಾರೆ. ಆರಂಭದ ದಿನಗಳಲ್ಲೇ ಸ್ಪರ್ಧಿಗಳು ಅಬ್ಬರಿಸಿದ್ದಾರೆ. ಕೆಲವರು ರೂಲ್ಸ್ ಬ್ರೇಕ್ ಮಾಡಿದ್ರೆ ಇನ್ನು ಕೆಲವರು ಜಗಳ ಮಧ್ಯೆ

Live Cricket

Add Your Heading Text Here