Download Our App

Follow us

Home » ರಾಜ್ಯ » ಫೋನ್ ಪೇ, ಗೂಗಲ್ ಪೇನಲ್ಲಿ ಹಣ ವರ್ಗಾವಣೆ ಮಾಡೋರು ಹುಷಾರ್ : ಆನ್​​ಲೈನ್ ಪೇಮೆಂಟ್ ಮೇಲೆ ಚುನಾವಣಾ ಅಧಿಕಾರಿಗಳ ಕಣ್ಣು..!

ಫೋನ್ ಪೇ, ಗೂಗಲ್ ಪೇನಲ್ಲಿ ಹಣ ವರ್ಗಾವಣೆ ಮಾಡೋರು ಹುಷಾರ್ : ಆನ್​​ಲೈನ್ ಪೇಮೆಂಟ್ ಮೇಲೆ ಚುನಾವಣಾ ಅಧಿಕಾರಿಗಳ ಕಣ್ಣು..!

ಬೆಂಗಳೂರು : ಲೋಕಸಭೆ ಚುನಾವಣೆ ಹಿನ್ನೆಲೆ ಇಡೀ ದೇಶಾದ್ಯಂತ ನೀತೆ ಸಂಹಿತೆ ಜಾರಿಯಾಗಿದ್ದು, ಅಲ್ಲಲ್ಲಿ ಚೆಕ್​ಪೋಸ್ಟ್​ಗಳನ್ನು ಹಾಕಿರುವ ಪೊಲೀಸರು ಮತ್ತು ಚುನಾವಣಾಧಿಕಾರಿಗಳು, ಚುನಾವಣಾ ಅಕ್ರಮಗಳನ್ನು ತಡೆಯಲು ಹದ್ದಿನ ಕಣ್ಣಿಟ್ಟಿದ್ದಾರೆ.

ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಕೋಟಿ ಕೋಟಿ ಹಣ, ಮದ್ಯ, ಚಿನ್ನಾಭರಣ ಸೀಜ್​ ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ಆನ್​​ಲೈನ್ ಪೇಮೆಂಟ್ ಮೇಲೆ ಚುನಾವಣಾ ಅಧಿಕಾರಿಗಳ ಕಣ್ಣು ಬಿದ್ದಿದೆ.

ಹೌದು.. ಒಂದು ತಿಂಗಳಿನಿಂದ ಲಕ್ಷಗಟ್ಟಲೆ ಆನ್​​ಲೈನ್ ಪೇಮೆಂಟ್ ಮಾಡುವವರ ಮೇಲೆ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ನಿತ್ಯ 1 ಲಕ್ಷ ದಿಂದ 10 ಲಕ್ಷಕ್ಕೂ ಅಧಿಕ ಹಣ ವರ್ಗಾವಣೆ ಮಾಡುವವರ ಮೇಲೆ ತೀವ್ರ ನಿಗಾ ವಹಿಸಿದ್ದಾರೆ. ಬ್ಯಾಂಕ್ ಹಾಗೂ ಟೆಕ್ನಿಕಲ್ ಎಕ್ಸ್​​ಪರ್ಟ್ ಗಳಿಂದ ದಿನ ನಿತ್ಯ ಮಾಹಿತಿ ಸಂಗ್ರಹವಾಗುತ್ತದೆ. ಅನುಮಾನಸ್ಪದ ವಾಹಿವಾಟು ಕಂಡು ಬಂದ್ರೆ ಸೂಕ್ತ ದಾಖಲೆ ನೀಡುವಂತೆ ಸೂಚನೆ ನೀಡಿದ್ದಾರೆ.

ಅಕ್ರಮ ಹಣ ವರ್ಗಾವಣೆಯನ್ನು ತಡೆಗಟ್ಟಲು ಹಾಗೂ ಪತ್ತೆ ಹಚ್ಚಲು ಪ್ರತಿ ಜಿಲ್ಲೆಯಲ್ಲೂ ಟೆಕ್ನಿಕಲ್ ಎಕ್ಸ್​​ಪರ್ಟ್​ ಗಳನ್ನು ನಿಯೋಜನೆ ಮಾಡಿದ್ದಾರೆ.

ಇದನ್ನೂ ಓದಿ : ಮೇ 1ಕ್ಕೆ ಹಸೆಮಣೆ ಏರಲಿದ್ದಾರೆ ‘ಕೆಂಡಸಂಪಿಗೆ’ ನಟಿ ಮಾನ್ವಿತಾ ಕಾಮತ್..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here