Download Our App

Follow us

Home » ರಾಜಕೀಯ » ಪೋಸ್ಟಲ್​​​ ವೋಟ್ ಗೊಂದಲಕ್ಕೆ ತೆರೆ ಎಳೆದ ಚುನಾವಣಾ ಆಯೋಗ..!

ಪೋಸ್ಟಲ್​​​ ವೋಟ್ ಗೊಂದಲಕ್ಕೆ ತೆರೆ ಎಳೆದ ಚುನಾವಣಾ ಆಯೋಗ..!

ದೆಹಲಿ : ಅಂಚೆ ಮತ ಎಣಿಕೆ ನಿಯಮವನ್ನ ಬದಲಿಸಿರೋದಾಗಿ ಕಾಂಗ್ರೆಸ್ ಆರೋಪ ಮಾಡಿತ್ತು.​ ಇದೀಗ ಕಾಂಗ್ರೆಸ್​ ಅನುಮಾನಕ್ಕೆ ಚುನಾವಣಾ ಆಯೋಗ ತೆರೆ ಎಳೆದಿದೆ. ಪೋಸ್ಟಲ್​​​ ವೋಟ್​ ಬಗ್ಗೆ ಇರೋ ಗೊಂದಲಕ್ಕೆ ಚುನಾವಣಾ ಆಯೋಗ ಪರಿಹಾರ ನೀಡಿದೆ.

ಕೇಂದ್ರ ಗೃಹ ಸಚಿವರು 150ಕ್ಕೂ ಹೆಚ್ಚು ಡಿಸಿಗಳಿಗೆ ಕರೆ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಕಾಂಗ್ರೆಸ್​ ಆರೋಪಿಸಿತ್ತು. ಎಲೆಕ್ಷನ್​​ ಕಮಿಷನ್​ ನಾಪತ್ತೆಯಾಗಿದೆಯಾ ಎಂದು ಕಾಂಗ್ರೆಸ್​ ಪ್ರಶ್ನಿಸಿತ್ತು. ಇದೀಗ ಕಾಂಗ್ರೆಸ್​ ಆರೋಪಕ್ಕೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್​ಕುಮಾರ್ ಉತ್ತರ ನೀಡಿದ್ದಾರೆ.

ಈ ಬಗ್ಗೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್​ಕುಮಾರ್ ಮಾತನಾಡಿ, ನಾವು ಅತ್ಯಂತ ಕಟ್ಟುನಿಟ್ಟಿನ ಎಲೆಕ್ಷನ್​ ಮಾಡಿದ್ದೇವೆ, ಈ ಬಾರಿ ನಡೆದ ಎಲೆಕ್ಷನ್​​ ಗಿನ್ನೆಸ್ ದಾಖಲೆ ಬರೆದಿದೆ. 64 ಕೋಟಿ ಮತದಾರರು ಈ ಬಾರಿ ಮತ ಚಲಾವಣೆ ಮಾಡಿದ್ದಾರೆ, ಈ ಬಾರಿ 10,000 ಕೋಟಿಯಷ್ಟು ಅಕ್ರಮ ಹಣ, ವಸ್ತುಗಳು ಸೀಜ್​ ಆಗಿವೆ. 2019ರ ಎಲೆಕ್ಷನ್​​ಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚು ಸೀಜ್​ ಆಗಿದೆ, ಈ ಎಲೆಕ್ಷನ್​ನಲ್ಲಿ ಯಾವುದೇ ದೊಡ್ಡ ಹಿಂಸಾಚಾರಗಳು ನಡೆದಿಲ್ಲ ಎಂದಿದ್ದಾರೆ.

ಕಟ್ಟುನಿಟ್ಟಿನ ಎಲೆಕ್ಷನ್​ ಮಾಡಲು 2 ವರ್ಷ ಸತತ ಪ್ರಯತ್ನ ಮಾಡಿದ್ದೆವು, ನಾಳೆ ಚುನಾವಣಾ ಮತ ಎಣಿಕೆಗೂ ಎಲ್ಲ ತಯಾರಿ ಮಾಡಿದ್ದೇವೆ. ಅಂಚೆ ಮತ ಎಣಿಕೆಯ ಯಾವ ನಿಯಮವೂ ಬದಲಾಗೋದಿಲ್ಲ, ಮೊದಲೇ ಅಂಚೆ ಮತ ಎಣಿಕೆ ಮಾಡುತ್ತೇವೆ ಎಂದು ಆಯೋಗ ಸ್ಪಷ್ಟನೆ ನೀಡಿದೆ. ಈ ವೇಳೆ ಚುನಾವಣಾ ಆಯುಕ್ತರಾದ ಜ್ಞಾನೇಶ್​ಕುಮಾರ್​, ಸುಖಬೀರ್​ ಸಂದು ಸಾಥ್​​ ನೀಡಿದ್ದಾರೆ.

ಇದನ್ನೂ ಓದಿ : ವಿಧಾನಪರಿಷತ್​​ ಚುನಾವಣೆ : ಜವರಾಯಿಗೌಡಗೆ ಜೆಡಿಎಸ್​ MLC ಟಿಕೆಟ್​..!

Leave a Comment

DG Ad

RELATED LATEST NEWS

Top Headlines

ಕಾಂಗ್ರೆಸ್​ ಸೇರಿದ ಯೋಗೇಶ್ವರ್​​ ಅಭ್ಯರ್ಥಿ ಆಗೋದು ಫಿಕ್ಸ್​.. ಡಿಕೆಶಿ ಚೆಕ್​ಮೇಟ್​ಗೆ ಹೆಚ್​ಡಿಕೆ ರಣತಂತ್ರ ಏನು..?

ಬೆಂಗಳೂರು : ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್​​ ಸಮ್ಮುಖದಲ್ಲಿ ಸಿ.ಪಿ.ಯೋಗೇಶ್ವರ್​ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿದರು. ಈ ಮೂಲಕ

Live Cricket

Add Your Heading Text Here