ತುಮಕೂರು : DySP ರಾಮಚಂದ್ರನ ‘ಕಾಮ’ಗಾರಿಯ ಪುರಾಣ ಬಗೆದಷ್ಟು ಬಯಲಾಗ್ತಿದೆ. ಸದ್ಯ ಪೊಲೀಸ್ ಕಚೇರಿಯ ಶೌಚಾಲಯದಲ್ಲೇ ಮಹಿಳೆಗೆ ಲೈಂಗಿಕ ದೌರ್ಜನ್ಯ ನೀಡಿದ ಪ್ರಕರಣದಲ್ಲಿ ರಾಮಚಂದ್ರ 14 ದಿನ ನ್ಯಾಯಾಂಗ ಬಂಧನದಲ್ಲಿದ್ದಾರೆ.
DySP ರಾಮಚಂದ್ರ ಅರೆಸ್ಟ್ ಆಗ್ತಿದ್ದಂತೆಯೇ ಒಬ್ಬೊಬ್ಬರೇ ಸಂತ್ರಸ್ಥೆಯರು ಹೊರಬರ್ತಿದ್ದಾರೆ. ಬಿಟಿವಿ ಬಳಿ ಬಂದು ಮತ್ತೊಬ್ಬ ಸಂತ್ರಸ್ಥೆ ರಾಮಚಂದ್ರನ ಟಾರ್ಚರ್ ಬಗ್ಗೆ ಬಿಟ್ಟಿಟ್ಟಿದ್ದಾರೆ. ಮಧುಗಿರಿಯಲ್ಲಿ ಇನ್ನೆಷ್ಟು ಜನ ಸಂತ್ರಸ್ಥೆಯರಿದ್ದಾರೋ ಗೊತ್ತಿಲ್ಲ, ಆದರೆ ಇದೀಗ 10ಕ್ಕೂ ಹೆಚ್ಚು ಸಂತ್ರಸ್ಥೆಯರು ರಾಮಚಂದ್ರ ವಿರುದ್ಧ ಕಂಪ್ಲೇಂಟ್ ಮಾಡಲು ರೆಡಿಯಾಗಿದ್ದಾರೆ. ಸೈಟ್ ಕೇಸ್ ಸಂಬಂಧ ಕಚೇರಿಗೆ ಕರೆಸಿ ಮತ್ತೊಬ್ಬಾಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ.
ಸೈಟ್ ಕೇಸ್ ಸಂಬಂಧ ಮಾಹಿತಿ ಪಡೆಯುವ ನೆಪದಲ್ಲಿ ತಮ್ಮ ಚೇಂಬರ್ಗೆ ಕರೆಸಿಕೊಂಡಿದ್ದ ಡಿವೈಎಸ್ಪಿ ರಾಮಚಂದ್ರಪ್ಪ, ಏನಾಯ್ತು ಹೇಳಮ್ಮ ಎಂದು ಕೇಳಿದ್ದರಂತೆ. ನನಗೆ ನ್ಯಾಯ ಕೊಡಿಸಿ ಎಂದು ಕಾಲಿಗೆ ಬಿದ್ದಿದ್ದ ಸಂತ್ರಸ್ತ ಮಹಿಳೆಯನ್ನು ಮೇಲೆತ್ತುವ ನೆಪದಲ್ಲಿ ಮೈ-ಕೈ ಮುಟ್ಟಿ ಅನುಚಿತವಾಗಿ ವರ್ತನೆ ಮಾಡಿದ್ದಾನೆ. ಮುತ್ತು ಕೊಟ್ಟು ಲೈಂಗಿಕವಾಗಿ ಬಳಸಿಕೊಳ್ಳಲು ರಾಮಚಂದ್ರಪ್ಪ ಯತ್ನಿಸಿದ್ದಾನಂತೆ.
ಕಣ್ಣೀರು ಒರೆಸುವ ನೆಪದಲ್ಲಿ DySP ಮಹಿಳೆಯ ಮುದ್ದಾಡಿದ್ದ. ತಂದೆ ಸಮಾನ ಎಂದು ಬೇಡಿಕೊಂಡರೂ ರಾಮಚಂದ್ರ ಬಿಡಲಿಲ್ವಂತೆ. ಭಯ ಬಿದ್ದು ಓಡಿ ಹೋಗಲು ಯತ್ನಿಸಿದರೂ ಬಿಡದೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಕೊನೆಗೆ 500 ರೂಪಾಯಿ ನೀಡಿ ಯಾರಿಗೂ ಹೇಳದಂತೆ ವಾರ್ನಿಂಗ್ ಕೊಟ್ಟಿದ್ದಾನೆ, ಪೊಲೀಸ್ ಕಚೇರಿಯಿಂದ ಅಳುತ್ತಲೇ ಆಚೆಗೆ ಬಂದ ಸಂತ್ರಸ್ತೆ ಮಾರನೆಯ ದಿನ ಪತಿಗೆ ವಿಷಯ ತಿಳಿಸಿದ್ದಾರೆ.
ಡಿವೈಎಸ್ಪಿ ಕಚೇರಿಯಲ್ಲಿ ನಡೆದಿದ್ದ ಕೃತ್ಯವನ್ನು ಸಂತ್ರಸ್ಥೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಪೊಲೀಸ್ ಕಚೇರಿಗೆ ಹೋದಾಗ ಒಳಗೆ ಬಾರಮ್ಮ, ಏನ್ ನಡೀತು ಎಲ್ಲಾ ಕರೆಕ್ಟ್ ಆಗಿ ಎಕ್ಸ್ಪ್ಲೈನ್ ಮಾಡು. ಮಹಿಳಾ ಆಯೋಗಕ್ಕೆ ಕಂಪ್ಲೇಂಟ್ ಕೊಟ್ಟಿದ್ರಿಂದ ಕರೀತಾರೆ ಅಂದ್ಕೊಂಡೆ, ನಾನು ಅವರ ಚೇಂಬರ್ಗೆ ಹೋಗಿ ನಡೆದ ಎಲ್ಲಾ ಘಟನೆ ಹೇಳ್ಕೊಂಡೆ. ನಾನು ಎಲ್ಲಾ ಹೇಳಿಕೊಂಡು ಅಳೋಕ್ಕೆ ಸ್ಟಾರ್ಟ್ ಮಾಡಿದೆ. ನ್ಯಾಯ ಕೊಡಿಸಿ ಸಾರ್ ಅಂತ ನಾನು ಅವ್ರ ಕಾಲಿಗೆ ಬಿದ್ದೆ, ಕಾಲು ಹಿಡಿದಾಗ ಅವ್ರು ನನ್ನ ಭುಜ ಎತ್ತಿ ಹಿಡಿದರು. ನನ್ನ ಕಣ್ಣೀರೆಲ್ಲಾ ಒರೆಸಿದ್ರು.. ನಾನು ತಂದೆ ಏಜ್ ಅವ್ರಲ್ಲ ಅಂದ್ಕೊಂಡೆ.
ಆಮೇಲೆ ಕಣ್ಣೀರು ಒರೆಸುತ್ತಾ ಎದೆಯೆಲ್ಲಾ ಪುಶ್ ಮಾಡಿದ್ರು, ನನ್ನನ್ನು ಹಗ್ ಮಾಡೋಕ್ಕೆ ಬಂದ್ರು, ಕಿಸ್ ಎಲ್ಲಾ ಮಾಡಿದ್ರು. ನಂಗೆ ಆವಾಗ ತುಂಬಾ ನೋವಾಯ್ತು.. ಭಯ ಆಗ್ಬಿಡ್ತು. ಸರ್.. ಇದೇನ್ ಸರ್.. ಅಂತ ನಾನು ಹೊರಗೆ ಓಡಲು ಟ್ರೈ ಮಾಡ್ದೆ, ಆಗ ನಂಗೆ ಭಯದಲ್ಲಿ ಯೂರಿನ್ ಕೂಡಾ ಬಂದ್ಬಿಡ್ತು. ಏನೂ ಆಗಲ್ಲ, ಇದೇನೂ ಆಗಲ್ಲ.. ನಾನಿದ್ದೀನಿ ಅಂತ ಹೇಳ್ತಿದ್ರು, ಬೇಡ ಬೇಡ ಅಂದ್ರೂ ಪರ್ಸ್ನಿಂದ 500 ರೂಪಾಯಿ ಕೊಟ್ರು. ಹೊರಗೆ ಬಂದಾಗ ನನ್ನ ಸ್ಥಿತಿ ನೋಡಿ ಪತಿ ಕೂಡಾ ಗಾಬರಿಯಾದ್ರು, ನನಗೆ ಶಾಕ್ ಆಗಿತ್ತು, ಅವತ್ತು ಅವರಿಗೆ ಏನೂ ಹೇಳಿಲ್ಲ, ಮರುದಿನ ಹೇಳಿದೆ ಎಂದು ಸಂತ್ರಸ್ಥೆ ಹೇಳಿದ್ದಾರೆ.
ಇದನ್ನೂ ಓದಿ : ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆಗೆ ಇನ್ನೆಷ್ಟು ದಿನ ಬಾಕಿ ಇದೆ? – ಸುಳಿವು ಬಿಟ್ಟುಕೊಟ್ಟ ಕಿಚ್ಚ ಸುದೀಪ್..!