ತುಮಕೂರು : ಪೊಲೀಸ್ ಕಚೇರಿಯಲ್ಲೇ ಮಹಿಳೆ ಜೊತೆ ಖುಲ್ಲಾಂಖುಲ್ಲಾ ರಾಸಲೀಲೆ ನಡೆಸಿ ಅರೆಸ್ಟ್ ಆಗಿರುವ ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಪ್ಪ ತನ್ನ ಚಾಟಿ ಬಿಟ್ಟಂತೆ ಕಾಣುತ್ತಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ವೇಳೆ ಹೆಣ್ಣುಬಾಕ ರಾಮಚಂದ್ರಪ್ಪ ಬಿಂದಾಸ್ ಆಗಿ ತನ್ನ ಪಾಡಿಗೆ ತಾನು ಫೋನ್ನಲ್ಲಿ ಮಾತನಾಡುತ್ತಾ ಆರಾಮಾಗಿ ಟೈಂ ಪಾಸ್ ಮಾಡುತ್ತಿದ್ದಾರೆ.
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನವಾಗಿರುವ ಡಿವೈಎಸ್‌ಪಿ ರಾಮಚಂದ್ರಪ್ಪ ಈಗಾಗಲೇ ಸೇವೆಯಿಂದ ಅಮಾನತು ಮಾಡಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಅವರು ಆದೇಶ ಹೊರಡಿಸಿದ್ದರು. ಇದರ ಬೆನ್ನಲ್ಲೇ ರಾಮಚಂದ್ರಪ್ಪನನ್ನು ಪೊಲೀಸರು ಕೂಡ ಬಂಧಿಸಿದ್ದರು. ಇದೀಗ ಮೆಡಿಕಲ್ ಚೆಕಪ್ ವೇಳೆ ಸರ್ಕಾರಿ ಆಸ್ಪತ್ರೆಯಲ್ಲಿ ಮೊಬೈಲ್ನಲ್ಲಿ ಮಾತನಾಡುತ್ತಾ ಕಾಲ ಕಳೆಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಇನ್ನೂ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ದೂರು ನೀಡಲು ಬಂದ ಮಹಿಳೆಯನ್ನು ಪುಸಲಾಯಿಸಿ ಶೌಚಾಲಯದಲ್ಲಿ ರಾಸಲೀಲೆ ನಡೆಸಿದ ಆರೋಪದ ಮೇಲೆ ಡಿವೈಎಸ್‌ಪಿ ರಾಮಚಂದ್ರಪ್ಪ ಮೇಲೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ. ಗೃಹ ಸಚಿವರ ತವರಿನಲ್ಲೇ ನಡೆದಿದ್ದ ಪೊಲೀಸಪ್ಪನ ಕಾಮಪುರಾಣ ಇಡೀ ಪೊಲೀಸ್ ಇಲಾಖೆಯನ್ನು ತಲೆ ತಗ್ಗಿಸುವಂತೆ ಮಾಡಿತ್ತು.
BTVಯು ನಿರಂತರವಾಗಿ Dysp ರಾಮಚಂದ್ರಪ್ಪ ಕಾಮಲೀಲೆ ಸುದ್ದಿಯನ್ನು ಪ್ರಸಾರ ಮಾಡಿತ್ತು. ಬಳಿಕ ಸಾಮಾಜಿಕ ಜಾಲತಾಣ ಸೇರಿ ರಾಜ್ಯಾದ್ಯಂತ ರಾಸಲೀಲೆ ಸುದ್ದಿ ಭಾರೀ ಸದ್ದು ಮಾಡಿತ್ತು.
ಇದನ್ನೂ ಓದಿ : ರೂಟ್ ಚೇಂಜ್ ಮಾಡಿದ್ದ ಡ್ರೈವರ್ ಅರೆಸ್ಟ್ – ಆಟೋದಿಂದ ಜಿಗಿದಿದ್ದ ಮಹಿಳೆ ಕೇಸ್ಗೆ ಟ್ವಿಸ್ಟ್.. ಡಿಸಿಪಿ ಹೇಳಿದ್ದೇನು?