Download Our App

Follow us

Home » ಜಿಲ್ಲೆ » ಮೈಸೂರಲ್ಲಿ ಕಳೆಗಟ್ಟಿದ ದಸರಾ ಸಂಭ್ರಮ – ತುಂತುರು ಮಳೆಯಲ್ಲೂ ಕಣ್ಮನ ಸೆಳೆದ ದಂಪತಿಗಳ ಟಾಂಗಾ ಸವಾರಿ..!

ಮೈಸೂರಲ್ಲಿ ಕಳೆಗಟ್ಟಿದ ದಸರಾ ಸಂಭ್ರಮ – ತುಂತುರು ಮಳೆಯಲ್ಲೂ ಕಣ್ಮನ ಸೆಳೆದ ದಂಪತಿಗಳ ಟಾಂಗಾ ಸವಾರಿ..!

ಮೈಸೂರು : ನಾಡಿನ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವವು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿದ್ದು, ಶನಿವಾರ ಬೆಳ್ಳಂಬೆಳಗ್ಗೆ ನಡೆದ ಪಾರಂಪರಿಕ ಟಾಂಗಾ ಸವಾರಿ ಪ್ರವಾಸಿಗರ ಕಣ್ಮನ ಸೆಳೆಯಿತು.

ತುಂತುರು ಮಳೆಯಲ್ಲೂ ತಮ್ಮ ವಿವಿಧ ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟ ಹಿರಿಯ ಹಾಗೂ ಕಿರಿಯ‌ ಸುಮಾರು 50 ದಂಪತಿಗಳು 25 ಪಾರಂಪರಿಕ ಟಾಂಗಾಗಳಲ್ಲಿ ನಗರದ ವಿವಿಧ ಬೀದಿಯಲ್ಲಿ ಸವಾರಿ ಮಾಡಿ ಗಮನ ಸೆಳೆದರು. ಟಾನ್ ಹಾಲ್ ಬಳಿಯಿಂದ ಹೊರಟ ಟಾಂಗಾ ಸವಾರಿಯು ನಗರದ ಐತಿಹಾಸಿಕ ರಸ್ತೆಗಳಲ್ಲಿ ಸಾಗಿತು.

ಮೈಸೂರು, ಶಿವಮೊಗ್ಗ, ಹಾಸನ, ಬೆಂಗಳೂರು ಹಾಗೂ ಇನ್ನಿತರೆ ಜಿಲ್ಲೆಗಳಿಂದ ನೋಂದಾಯಿತ 50 ದಂಪತಿಗಳು ಆಯಾ ಜಿಲ್ಲೆಗಳ ಸಾಂಪ್ರದಾಯಿಕ ಉಡುಗೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ ಕೊಡಗು ಹಾಗೂ ಮೈಸೂರಿನ ಪಾರಂಪರಿಕ ಉಡುಗೆ ತೊಟ್ಟ ದಂಪತಿಗಳು ನೋಡುಗರ ಗಮನ ಸಳೆದರು. ಕಿರಿಯ ಮತ್ತು ಹಿರಿಯ ವಯಸ್ಸಿನ ಜೋಡಿಗಳು ಟಾಂಗಾ ಸವಾರಿಯಲ್ಲಿ ಭಾಗವಹಿಸಿದ್ದು ಪ್ರಮುಖವಾಗಿತ್ತು.

ಟಾನ್ ಹಾಲ್ ಬಳಿಯ ರಂಗಾಚಾರ್ಲು ಪುರಭವನದಿಂದ ಪ್ರಾರಂಭವಾದ ಸವಾರಿಯು ದೊಡ್ಡ ಗಡಿಯಾರ ಗೋಪುರ, 10ನೇ ಚಾಮರಾಜೇಂದ್ರ ವೃತ್ತ, ಅಂಬಾ ವಿಲಾಸ ಅರಮನೆ, ನಾಲ್ಮಡಿ ಕೃಷ್ಣರಾಜ ಒಡೆಯರ್ ವೃತ್ತ, ಲ್ಯಾನ್ಸ್‌ಡೌನ್ ಕಟ್ಟಡ, ಜಗನ್ ಮೋಹನ ಅರಮನೆ, ಪರಕಾಲ ಮಠ, ಶೇಷಾದ್ರಿ ಹೌಸ್-ವಾಣಿಜ್ಯ ತೆರಿಗೆ ಕಚೇರಿ, ಹಳೇ ಜಿಲ್ಲಾಧಿಕಾರಿಗಳ ಕಚೇರಿ, ಕ್ರಾಫರ್ಡ್ ಹಾಲ್, ಹೋಟೆಲ್ ಮೆಟ್ರೋಪೋಲ್, ಮೈಸೂರು ರೈಲ್ವೆ ಜಂಕ್ಷನ್, ಕೃಷ್ಣ ರಾಜೇಂದ್ರ ಆಸ್ಪತ್ರೆ ವೃತ್ತ, ಮೈಸೂರು ಮೆಡಿಕಲ್ ಕಾಲೇಜು, ಆಯುರ್ವೇದಿಕ್ ಆಸ್ಪತ್ರೆ, ಕಾವೇರಿ ಎಂಪೋರಿಯಮ್, ಗಾಂಧಿ ವೃತ್ತದ ಮೂಲಕ ಮತ್ತೆ ರಂಗಾಚಾರ್ಲು ಪುರಭವನ (ಟೌನ್‌ಹಾಲ್‌) ಆವರಣದಲ್ಲಿ ಮುಕ್ತಾಯವಾಯಿತು.

ಇದನ್ನೂ ಓದಿ : ಗಣಿ ನಾಡು ಬಳ್ಳಾರಿಯಲ್ಲಿ ಭಾರೀ ಮಳೆ – ನೂರಾರು ಮೈನ್ಸ್ ಲಾರಿಗಳು ಜಲಾವೃತ..!

Leave a Comment

DG Ad

RELATED LATEST NEWS

Top Headlines

ಅಶೋಕ್​ ರಾಜೀನಾಮೆ ಕೊಡಲಿ, ತಪ್ಪು ಮಾಡದ ನನ್ನಿಂದ ರಾಜೀನಾಮೆ ಯಾಕ್ ಕೇಳ್ತಾರೆ – ಸಿಎಂ ಸಿದ್ದು..!

ರಾಯಚೂರು : ನಾನು ತಪ್ಪು ಮಾಡಿದ್ದೀನಿ ಅಂತಾ ಕೋರ್ಟ್​ ಹೇಳಿದೆಯಾ..? ತಪ್ಪು ಮಾಡದೇ ನಾನ್ಯಾಕೆ ರಾಜೀನಾಮೆ ಕೊಡಲಿ, ಅಶೋಕ್​ ಮೊದಲು ರಾಜೀನಾಮೆ ಕೊಡಲಿ ಎಂದು ಸಿಎಂ ಸಿದ್ದರಾಮಯ್ಯ

Live Cricket

Add Your Heading Text Here