Download Our App

Follow us

Home » ಸಿನಿಮಾ » ‘ನಾನು ಮತ್ತು ಗುಂಡ 2’ ಚಿತ್ರಕ್ಕೆ ಡಾಗ್ ಸಿಂಬನಿಂದಲೇ ಡಬ್ಬಿಂಗ್..!

‘ನಾನು ಮತ್ತು ಗುಂಡ 2’ ಚಿತ್ರಕ್ಕೆ ಡಾಗ್ ಸಿಂಬನಿಂದಲೇ ಡಬ್ಬಿಂಗ್..!

‘ನಾನು ಮತ್ತು ಗುಂಡ’ ಚಿತ್ರದ ಸೀಕ್ವೇಲ್ ಆಗಿ ತೆರೆಗೆ ಬರುತ್ತಿರುವ “ನಾನು ಮತ್ತು ಗುಂಡ -‌2” ಚಿತ್ರದಲ್ಲಿ ನಾಯಕ ರಾಕೇಶ್ ಅಡಿಗ ಜೊತೆ ಡಾಗ್ ಸಿಂಬ ಕೂಡ ಪ್ರಮುಖ‌ ಪಾತ್ರದಲ್ಲಿ ಕಾಣಿಸಿಕೊಂಡಿದೆ. ರಘುಹಾಸನ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರ ಕನ್ನಡ, ತೆಲುಗು, ಹಿಂದಿ ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ.

ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದು ಡಬ್ಬಿಂಗ್ ಕೆಲಸ ಈಗಷ್ಟೇ ಶುರುವಾಗಿದೆ. ಇಡೀ ಸಿನಿಮಾದಲ್ಲಿ ಎಲ್ಲಾ ರೀತಿಯ ಎಮೋಷನ್ಸ್ ಇದ್ದು, ವಿಶೇಷವಾಗಿ ಡಾಗ್ ಸಿಂಬಾ ರೆಕಾರ್ಡಿಂಗ್ ಸ್ಟುಡೊಯೋಗೆ ಬಂದು ತನ್ನ ಪಾತ್ರಕ್ಕೆ ತಾನೇ ಡಬ್ ಮಾಡುತ್ತಿದೆ. ವಿಷೇಶವೆಂದರೆ ಇಡೀ ಚಿತ್ರದಲ್ಲಿ ಸಿಂಬಾನ ಒರಿಜಿನಲ್ ಸೌಂಡ್ ಇರುತ್ತದೆ. ಡಬ್ಬಿಂಗ್ ಅಂದ್ರೆ, ಸಿಂಬಾ ಮಾತಾಡೋದಿಲ್ಲ. ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಅದರ ಬೊಗಳೋ ಸೌಂಡ್ ರೆಕಾರ್ಡ್ ಮಾಡಲಾಗುತ್ತಿದೆ.

ಸಿಂಬಾನ ಒರಿಜಿನಲ್ ಸೌಂಡ್‌ ಅನ್ನು ನಾವು ರೆಕಾರ್ಡ್ ಮಾಡುತ್ತಿದ್ದೇವೆ. ಎಮೋಷನಲ್ ಸೀನ್‌ಗಳಲ್ಲೂ ಸಿಂಬಾ ಡಬ್ಬಿಂಗ್ ಮಾಡುತ್ತಿದೆ. ಪ್ರತಿ ಜಾತಿಯ ನಾಯಿಯದೂ ಒಂದೊಂದು ರೀತಿ ಸೌಂಡ್ ಇರುತ್ತದೆ. ಹಾಗಾಗಿಯೇ ನಾವು ನಮ್ಮ ಗುಂಡನ ಪಾತ್ರ ಮಾಡಿರೋ ಸಿಂಬಾನಿಂದಲೇ ಡಬ್ಬಿಂಗ್ ಮಾಡಿಸುತ್ತಿದ್ದೇವೆ. ಡಾಗ್ ಕೈಲಿ ಡಬ್ಬಿಂಗ್ ಮಾಡಿಸುತ್ತಿರುವುದು ನಾವೇ ಮೊದಲೆನ್ನಬಹುದು. ಹಿಂದಿನ ಪಾರ್ಟ್ ಒನ್ ಚಿತ್ರದಲ್ಲೂ ಡಾಗ್‌ನಿಂದಲೇ ಡಬ್ಬಿಂಗ್ ಮಾಡಿಸಿದ್ದೇವೆ. ಆದರೆ, ಅದು ಕೆಲವೇ ಕೆಲವು ದೃಶ್ಯಗಳಲ್ಲಿ ಮಾತ್ರ ಆಗಿತ್ತು. ಪಾರ್ಟ್-2ನ ಇಡೀ ಸಿನಿಮಾದಲ್ಲಿ ಡಾಗ್ ಸಿಂಬಾನೇ ಡಬ್ ಮಾಡುತ್ತಿದೆ. ಇಂಡಿಯಾದಲ್ಲಿ ಇಲ್ಲಿವರೆಗೂ ಯಾರೂ ಈ ಪ್ರಯತ್ನ ಮಾಡಿಲ್ಲ ಎಂದು ನಿರ್ದೇಶಕ ಹಾಗೂ ನಿರ್ಮಾಪಕರೂ ಆದ ರಘು ಹಾಸನ್ ಹೇಳಿದ್ದಾರೆ.

ಡಬ್ಬಿಂಗ್ ಕೆಲಸ ಆದ್ಮೇಲೆ ಚಿತ್ರದ DI ಮತ್ತು RR ಕೆಲಸ ಶುರು ಮಾಡಲಾಗುತ್ತದೆ. ಪೊಯೆಮ್ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ನಾನು ಮತ್ತು ಗುಂಡ-೨ ಚಿತ್ರಕ್ಕೆ ಆರ್.ಪಿ.ಪಟ್ನಾಯಕ್ ಅವರ ಸಂಗೀತ, ರುತ್ವಿಕ್ ಮುರಳೀಧರ್ ಅವರ ಹಿನ್ನೆಲೆ ಸಂಗೀತ, ತನ್ವಿಕ್ ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನ, ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ, ರಾಘು ಅವರ ನೃತ್ಯ ನಿರ್ದೇಶನವಿದೆ.

ಇದನ್ನೂ ಓದಿ :  ‘ಗೋಪಿಲೋಲ’ ಸಿನಿಮಾದ ಎರಡನೇ ಸಾಂಗ್​​​ ರಿಲೀಸ್..!

Leave a Comment

DG Ad

RELATED LATEST NEWS

Top Headlines

ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಡ್ರೆಸ್ ಕೋಡ್ ಜಾರಿ – ದೇವರ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯ..!

ಚಿಕ್ಕಮಗಳೂರು : ಇತ್ತೀಚೆಗೆ ಶೃಂಗೇರಿಯ ಶ್ರೀ ಶಾರದಾಂಬೆ ಸನ್ನಿಧಾನದಲ್ಲಿ ಹಾಗೂ ಸುತ್ತಲಿನ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾಗಿತ್ತು. ಇದೀಗ ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಹೊರನಾಡು ಶ್ರೀ

Live Cricket

Add Your Heading Text Here