ದುಬೈ: ಡಿವೋರ್ಸ್ ಬಳಿಕ ಗಂಡ ಹೆಂಡತಿ ಬೇರೆ ಬೇರೆಯಾಗಿ ಅವರವರು ತಮ್ಮ ಜೀವನ ನೋಡಿಕೊಳ್ತಾರೆ. ಆದರೆ ಬಾಲಿವುಡ್ನ ಸ್ಟಾರ್ ನಟ ಹೃತಿಕ್ ರೋಷನ್ ತಮ್ಮ ಮಾಜಿ ಹೆಂಡತಿ ಹಾಗೂ ಆಕೆಯ ಬಾಯ್ಫ್ರೆಂಡ್ ಜೊತೆಗೆ ದುಬೈ ಟ್ರಿಪ್ ಹೋಗಿದ್ದಾರೆ. ಪ್ರವಾಸದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅದನ್ನು ನೋಡಿದ ನೆಟ್ಟಿಗರು ಅಯ್ಯಯ್ಯೋ.. ಇದೇನಿದು..? ಡಿವೋರ್ಸ್ ನಂತರ ಹಿಂಗೂ ಇರಬಹುದಾ ಅಂತ ಕಮೆಂಟ್ಗಳ ಸುರಿಮಳೆಗೆಯ್ಯುತ್ತಿದ್ದಾರೆ.
2025 ಸ್ವಾಗತಿಸಲು ನಟ, ನಟಿಯರು ಸಖತ್ ಆಗಿಯೇ ರೆಡಿಯಾಗಿದ್ದಾರೆ. ಸ್ಟಾರ್ ನಟ ಹೃತಿಕ್ ರೋಷನ್ ಅವರು ಮಾಜಿ ಪತ್ನಿ ಸುಸ್ಸಾನ್ ಖಾನ್ ಮತ್ತು ಆಕೆಯ ಗೆಳೆಯ ಅರ್ಸ್ಲಾನ್ ಗೋನಿ ಜೊತೆ ದುಬೈನಲ್ಲಿ ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ. ಹೃತಿಕ್ ಮಾಜಿ ಪತ್ನಿಯ ಸಹೋದರ ಜಾಯೆದ್ ಖಾನ್, ಅವರ ಮಕ್ಕಳು, ಹೃತಿಕ್ ರೋಷನ್ ಮತ್ತು ಅವರ ಮಗ ಹೃದಯಾನ್, ಕೆಲವು ಆಪ್ತ ಸ್ನೇಹಿತರ ಜೊತೆಗೆ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ. ಹೃತಿಕ್ ರೋಷನ್ ಗೆಳತಿ ಸಾಬಾ ಆಜಾದ್ ಜೊತೆಗಿದ್ದರು. ಹೊಳೆಯುವದೆಲ್ಲ ಚಿನ್ನಕ್ಕಿಂತ ಮಿಗಿಲು…ಕುಟುಂಬ ಸಂಬಂಧಗಳು.. ಎಂಬ ಕ್ಯಾಪ್ಶನ್ ಜೊತೆ ಅವರು ಫೋಟೋಸ್ ಶೇರ್ ಮಾಡಿದ್ದಾರೆ.
ಇವರೊಂದಿಗೆ ನಟಿ ನರ್ಗೀಸ್ ಫಕ್ರಿ, ಆಕೆಯ ರೂಮರ್ಡ್ ಬಾಯ್ಫ್ರೆಂಡ್ ಟೋನಿ ಬೇಗ್ ಮತ್ತು ನಟ ಉದಯ್ ಚೋಪ್ರಾ ಕೂಡ ಇದ್ದರು. ಸುಸೇನ್ ಸೋಷಿಯಲ್ ಮೀಡಿಯಾದಲ್ಲಿ ಫೋಟೋಸ್ ಅಪ್ಲೋಡ್ ಮಾಡಿದ್ದಾರೆ. ಉದಯ್ ಚೋಪ್ರಾ ಮತ್ತು ನರ್ಗಿಸ್ ಫಕ್ರಿ ಅವರು ಬ್ರೇಕಪ್ ಆಗುವ ಮೊದಲು ಐದು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದರು. ಹಾಗಾಗಿ ಇಬ್ಬರೂ ಒಂದೇ ಕಡೇ ಇರೋದನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಹೃತಿಕ್ ಸದ್ಯ ಸಬಾ ಆಜಾದ್ ಅವರೊಂದಿಗೆ ರಿಲೇಶನ್’ಶಿಪ್ ನಲ್ಲಿದ್ದಾರೆ, ಸುಸೇನ್ ಅರ್ಸ್ಲಾನ್ ಗೋನಿಯೊಂದಿಗೆ ಡೇಟ್ ಮಾಡುತ್ತಿದ್ದಾರೆ. ಈ ಮಾಜಿ ಜೋಡಿ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರರ ಪೋಸ್ಟ್‌ಗಳಲ್ಲಿ ಕಮೆಂಟ್ ಮಾಡುತ್ತಿರುತ್ತಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ಹೊಸ ವರ್ಷದ ಅವಾಂತರ – ಎಣ್ಣೆ ಏಟಲ್ಲಿ ಡಿವೈಡರ್ ಮೇಲೆ ಕಾರು ಹತ್ತಿಸಿದ ಭೂಪ!