ಕೊಡಗು : KSRTC ಬಸ್ ಚಾಲಕ ಗಾಳಿಯಲ್ಲಿ ಗುಂಡು ಹಾರಿಸಿ ಕಂಡಕ್ಟರ್ಗೆ ಬೆದರಿಕೆ ಹಾಕಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಕಂಡಕ್ಟರ್ ರೂಪೇಶ್ಗೆ ಚಾಲಕ ವೇಣುಗೋಪಾಲ್ ಬೆದರಿಕೆ ಹಾಕಿದ್ದಾನೆ.
ಚಾಲಕ ವೇಣುಗೋಪಾಲ್ ನಿತ್ಯ ಮೊಬೈಲ್ ನೋಡಿಕೊಂಡು ಬಸ್ ಡ್ರೈವಿಂಗ್ ಮಾಡುತ್ತಿದ್ದ, ಈತ ಮದ್ಯಸೇವನೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರು. ಬಳಿಕ ಅಧಿಕಾರಿಗಳು ಚಾಲಕನಿಗೆ ಮಾರ್ಗ ಬದಲಾವಣೆಗೆ ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದರು.
ಮಾರ್ಗ ಬದಲಿಸಲು ಕಂಡಕ್ಟರ್ ರೂಪೇಶ್ ಕಾರಣ ಎಂದು ಚಾಲಕ ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಸಿದ್ದಾನೆ. ಈ ಸಂಬಂಧ ಕಂಡಕ್ಟರ್ ರೂಪೇಶ್ ಪೊಲೀಸರಿಗೆ ದೂರು ನೀಡಿದ್ದು ಚಾಲಕನನ್ನು ಬಂಧಿಸಲಾಗಿದೆ.
ಇದನ್ನೂ ಓದಿ : ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ – ಮಾಜಿ ಸಿಎಂ ಎಸ್.ಎಂ ಕೃಷ್ಣ ಪಂಚಭೂತಗಳಲ್ಲಿ ಲೀನ..!
Post Views: 175