ಬೆಂಗಳೂರು : RR ನಗರ MLA ಮುನಿರತ್ನ ವಿರುದ್ಧ ಮಂಥ್ಲಿ ವಸೂಲಿ ಆರೋಪ ಕೇಳಿ ಬಂದಿದ್ದು, ಲಂಚ ಕೇಳಿ ಪ್ರಾಣ ಬೆದರಿಕೆ ಒಡ್ಡಿದ್ದಾರೆಂದು ಬಿಬಿಎಂಪಿ ಕಾಂಟ್ರಾಕ್ಟರ್ ಚೆಲುವರಾಜು ಗಂಭೀರ ಆರೋಪ ಮಾಡಿದ್ದಾರೆ. ಇದರ ನಡುವೆ ಮುನಿರತ್ನ ಅವರು ಬೆದರಿಸಿರುವ ಹಾಗೂ ಅವಾಚ್ಯ ಶಬ್ದಗಳಿಂದ ಬೈದಿರುವ ಆಡಿಯೋ ಕೂಡ ಬಿಡುಗಡೆಗೊಳಿಸಿದ ಕಾಂಟ್ರಾಕ್ಟರ್, ಈ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರಿಗೆ ದೂರು ನೀಡಿದ್ದಾರೆ. ಮುನಿರತ್ನ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ನನಗೆ ರಕ್ಷಣೆ ನೀಡಬೇಕೆಂದು ದೂರು ಸಲ್ಲಿಸಿದ್ದಾರೆ.
ಇನ್ನು ಆಡಿಯೋದಲ್ಲಿ ಮುನಿರತ್ನ ಅವರು SC/ST ಜಾತಿ ನಿಂದನೆ ಮಾಡಿ ಹೀಯಾಳಿಸಿದ್ದಾರೆ ಎಂದು ಮಾಜಿ ಕಾರ್ಪೋರೇಟರ್ ವೇಲುನಾಯ್ಕರ್ ಮುನಿರತ್ನ ವಿರುದ್ದ ದೂರು ದಾಖಲಿಸಿದ್ದಾರೆ. ವೇಲು ನಾಯ್ಕರ್ ಆಡಿಯೋ ರೆಕಾರ್ಡ್ ಸಹಿತ ದೂರು ಕೊಟ್ಟಿದ್ದು, ದೂರಿನ ಮೇರೆಗೆ ಮುನಿರತ್ನ ವಿರುದ್ದ FIR ದಾಖಲಾಗಿದೆ. ಈ ಪ್ರಕರಣ ಸಂಬಂಧ ಯಾವುದೇ ಕ್ಷಣದಲ್ಲಿ ಬಿಜೆಪಿ MLA ಮುನಿರತ್ನ ಅರೆಸ್ಟ್ ಆಗುವ ಸಾಧ್ಯತೆಯಿದೆ.
ಮುನಿರತ್ನ ವಿರುದ್ಧಎರಡು FIR ದಾಖಲಾಗಿದ್ದು, ಜಾಮೀನು ರಹಿತ ಸೆಕ್ಷನ್ಗಳಡಿ ಮುನಿರತ್ನ ವಿರುದ್ಧ FIR ದಾಖಲಿಸಲಾಗಿದೆ. SC-ST ಆಟ್ರಾಸಿಟಿ ಪ್ರಿವೆನ್ಷನ್ ಕಾಯ್ದೆಯಡಿ FIR, SC-ST Prevention of Attrocities Act, 1989(U/s-3(1)(r)(s)), IPC 1860 (U/s-153A(1)(a)(b), 509, 504, 153 ಅಡಿ ಕೇಸ್ ದಾಖಲಿಸಲಾಗಿದೆ.
ಕಾಂಟ್ರಾಕ್ಟರ್ ಚಲುವರಾಜು ಅವರ ದೂರಿನ ಮೇರೆಗೆ ಮುನಿರತ್ನ ವಿರುದ್ಧ FIR ದಾಖಲಾಗಿದ್ದು, RR ನಗರ ಕ್ಷೇತ್ರ ವ್ಯಾಪ್ತಿಯ ಕಸದ ಟೆಂಡರ್ ವಿಚಾರದಲ್ಲಿ 30 ಲಕ್ಷ ಲಂಚ ಕೇಳಿ ಕೊಡದ್ದಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಬಗ್ಗೆ ನಿನ್ನೆ ಸುದ್ದಿಗೋಷ್ಟಿ ನಡೆಸಿ ಮುನಿರತ್ನ ವಿರುದ್ಧ ಕಾಂಟ್ರ್ಯಾಕ್ಟರ್ ಆರೋಪಿಸಿದ್ದರು. ನಿನ್ನೆ ತಡ ರಾತ್ರಿ ವೈಯಾಲಿಕಾವಲ್ ಠಾಣೆಯಲ್ಲಿ ವೇಲು ನಾಯ್ಕರ್ ಮತ್ತು ಕಾಂಟ್ರ್ಯಾಕ್ಟರ್ ಬಿಜೆಪಿ MLA ಮುನಿರತ್ನ ವಿರುದ್ದ ದೂರು ದಾಖಲಿಸಿದ್ದರು.
ಇದನ್ನೂ ಓದಿ : ತಾತನ ಸರ್ಕಾರಿ ಗೆಸ್ಟ್ಹೌಸ್ನಲ್ಲಿ ಮೊಮ್ಮಗನ ಕಾಮಕಾಂಡ – 3ನೇ ಚಾರ್ಜ್ಶೀಟ್ನಲ್ಲಿ ಬಯಲಾಯ್ತು ಪ್ರಜ್ವಲ್ನ ಕಾಮಲೀಲೆ..!