Download Our App

Follow us

Home » ಸಿನಿಮಾ » ಕನ್ನಡ ಚಿತ್ರರಂಗದ ಪ್ರಮುಖರಿಗೆ ‘ಡಾಲಿ’ ಆಮಂತ್ರಣ – ಧನಂಜಯ್​ಗೆ ಮದುವೆಯ ಶುಭಕೋರಿದ ಸ್ಯಾಂಡಲ್​ವುಡ್ ಸ್ಟಾರ್ಸ್​!

ಕನ್ನಡ ಚಿತ್ರರಂಗದ ಪ್ರಮುಖರಿಗೆ ‘ಡಾಲಿ’ ಆಮಂತ್ರಣ – ಧನಂಜಯ್​ಗೆ ಮದುವೆಯ ಶುಭಕೋರಿದ ಸ್ಯಾಂಡಲ್​ವುಡ್ ಸ್ಟಾರ್ಸ್​!

ಬೆಂಗಳೂರು : ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ಸ್ಯಾಂಡಲ್​ವುಡ್​ ನಟ ರಾಕ್ಷಸ ಡಾಲಿ ಧನಂಜಯ ಅವರು ತಮ್ಮ ವಿವಾಹದ ಲಗ್ನಪತ್ರಿಕೆ ಹಂಚುವುದರಲ್ಲಿ  ಬ್ಯುಸಿಯಾಗಿದ್ದಾರೆ.

ಈಗಾಗಲೇ ಹಲವು ರಾಜಕಾರಣಿಗಳು ಹಾಗೂ ಮಠಾಧೀಶರುಗಳಿಗೆ ಮದುವೆಯ ಆಹ್ವಾನ ಪತ್ರಿಕೆ ನೀಡಿರುವ ನಟ ಧನಂಜಯ್‌ ಅವರು ಇದೀಗ ಕನ್ನಡ ಚಿತ್ರರಂಗದ ಹಲವು ನಟ-ನಟಿಯರಿಗೆ ಲಗ್ನಪತ್ರಿಕೆ ನೀಡುವ ಮೂಲಕ ಮದುವೆಗೆ ಆಹ್ವಾನಿಸಿದ್ದಾರೆ.

ಪ್ರಮುಖವಾಗಿ ಸ್ಯಾಂಡಲ್​ವುಡ್​ನ ದೊಡ್ಮನೆ ಹಿರಿಯ ನಟ ರಾಘವೇಂದ್ರ ರಾಜಕುಮಾರ್‌, ಅಶ್ವಿನಿ ಪುನೀತ್ ರಾಜ್​ಕುಮಾರ್​, ರಿಯಲ್‌ ಸ್ಟಾರ್‌ ಉಪೇಂದ್ರ ದಂಪತಿ, ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನ ನಾಗರಾಜ್‌, ನಿರ್ದೇಶಕ ಸಂತೋಷ್​ ಆನಂದರಾಮ್​ ಸೇರಿದಂತೆ ಹಲವು ಸಿನಿಮಾ ಸೆಲೆಬ್ರಿಟಿಗಳಿಗೆ ತಮ್ಮ ಮದುವೆಯ ಆಮಂತ್ರಣ ಪತ್ರಿಕೆ ನೀಡಿ ಮದುವೆಗೆ ಆಹ್ವಾನಿಸಿದ್ದಾರೆ.

 

ಇನ್ನೂ ಫೆಬ್ರವರಿ 15-16 ರಂದು ಮೈಸೂರಿನಲ್ಲಿ ನಟ ಡಾಲಿ ಧನಂಜಯ್ ಅವರು​ ಡಾಕ್ಟರ್‌ ಧನ್ಯತಾ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಈಗಾಗಲೇ ಮದುವೆ ತಯಾರಿ ಕೂಡ ಭರ್ಜರಿಯಾಗಿ ಶುರುವಾಗಿದೆ.

ಇದನ್ನೂ ಓದಿ : ಪ್ರೀತಿ ಒಲ್ಲೆ ಎಂದಿದ್ದಕ್ಕೆ ಆಫೀಸ್​ ಪಾರ್ಕಿಂಗ್​​ನಲ್ಲೇ ಯುವತಿಯ ಬರ್ಬರ ಹತ್ಯೆ – ಸಿಸಿಟಿವಿಯಲ್ಲಿ ಭಯಾನಕ ಕೃತ್ಯ ಸೆರೆ!

Leave a Comment

DG Ad

RELATED LATEST NEWS

Top Headlines

ಕೈಯಲ್ಲಿ ಮಚ್ಚು ಹಿಡಿದು ಮಾಸ್​ ಅವತಾರ ತಾಳಿದ ‘ಅಭಿನಯ ಚತುರ’ – ‘ದಿ ರೈಸ್ ಆಫ್ ಅಶೋಕ’ ಮೋಷನ್ ಪೋಸ್ಟರ್ ರಿಲೀಸ್!

ಬೆಂಗಳೂರು :  ಅಭಿನಯ ಚತುರ ನೀನಾಸಂ ಸತೀಶ್ ನಟಿಸುತ್ತಿರುವ ಅಶೋಕ ಬ್ಲೇಡ್ ಸಿನಿಮಾವೀಗ ಶೀರ್ಷಿಕೆ ಬದಲಾವಣೆಯೊಂದಿಗೆ ಮತ್ತೆ ಶೂಟಿಂಗ್ ಅಖಾಡಕ್ಕೆ ಇಳಿಯುತ್ತಿದೆ. ಅಶೋಕ್ ಬ್ಲೇಡ್ ಬದಲಿಗೆ ‘ದಿ ರೈಸ್

Live Cricket

Add Your Heading Text Here