Download Our App

Follow us

Home » ಸಿನಿಮಾ » ಗ್ರ್ಯಾಂಡ್​ ಫಿನಾಲೆ ಹಂತಕ್ಕೆ ತಲುಪಿದ ದೊಡ್ಮನೆ ಆಟ.. ಉಗ್ರಂ ಮಂಜು-ರಜತ್ ನಡುವೆ ಮತ್ತೆ ಕಿರಿಕ್..!

ಗ್ರ್ಯಾಂಡ್​ ಫಿನಾಲೆ ಹಂತಕ್ಕೆ ತಲುಪಿದ ದೊಡ್ಮನೆ ಆಟ.. ಉಗ್ರಂ ಮಂಜು-ರಜತ್ ನಡುವೆ ಮತ್ತೆ ಕಿರಿಕ್..!

ಕನ್ನಡದ ಜನಪ್ರಿಯ​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11, 101ನೇ ದಿನಕ್ಕೆ ಕಾಲಿಟ್ಟಿದೆ. ಬಿಗ್​ಬಾಸ್​ ಸೀಸನ್ 11 ಗ್ರ್ಯಾಂಡ್ ಫಿನಾಲೆಗೆ ಇನ್ನೂ ವಾರಗಳು ಬಾಕಿ ಉಳಿದಿವೆ. ಸ್ಪರ್ಧಿಗಳಿಗೆ ಈ ಮೂರು ವಾರ ತುಂಬಾನೆ ಮುಖ್ಯವಾಗಿದೆ. ಇಷ್ಟು ವಾರದ ಆಟ ಒಂದು ಲೆಕ್ಕಾವಾದರೆ, ಈಗಿನಿಂದ ಒಂದು ಲೆಕ್ಕಾ ಶುರುವಾಗಿದೆ. ಈ ವಾರದಿಂದ ಮನೆಯಲ್ಲಿರೋ ಸ್ಪರ್ಧಿಗಳಿಗೆ ಆಟ ಸಖತ್‌ ಟಫ್‌ ಆಗಿರಲಿದೆ.

ಅಲ್ಲದೇ 9 ಸ್ಪರ್ಧಿಗಳಲ್ಲಿ ಒಬ್ಬರಿಗೆ ಮಾತ್ರ ಟಿಕೆಟ್‌ ಟು ಫಿನಾಲೆ ಸಿಗಲಿದೆ. ಅಂದರೆ ಒಬ್ಬರಿಗೆ ಮಾತ್ರ ಫಿನಾಲೆಗೆ ನೇರವಾಗಿ ಹೋಗುವ ಅವಕಾಶವನ್ನು ಬಿಗ್​ಬಾಸ್​ ಕಲ್ಪಿಸಿಕೊಟ್ಟಿದ್ದಾರೆ. ಅದರಲ್ಲೂ ಈ ವಾರ ಕ್ಯಾಪ್ಟನ್​ ಆಗಿ ಹೊರ ಹೊಮ್ಮಿದ ರಜತ್​ ಕೈಯಲ್ಲೇ ಸ್ಪರ್ಧಿಗಳ ಮುಂದಿನ ಭವಿಷ್ಯ ನಿರ್ಧಾರ ಆಗಲಿದೆ. ಯಾರು ಫೈನಲ್​ಗೆ ಹೋಗಬೇಕು, ಯಾರು ಮನೆಗೆ ಹೋಗಬೇಕು ಅಂತ ಬಿಗ್​ಬಾಸ್​ ಕ್ಯಾಪ್ಟನ್​ ನಿರ್ಧಾರ ಮಾಡಲಿದ್ದಾರೆ.

ಇನ್ನು, ನಿನ್ನೆಯ ಸಂಚಿಕೆಯಲ್ಲಿ ರಜತ್​ ಅವರು ಯಾರು ನೇರವಾಗಿ ಮನೆಗೆ ಹೋಗಬೇಕು. ಯಾರು ಬಿಗ್​ಬಾಸ್​ ಫಿನಾಲೆಯಲ್ಲಿ ಇರಬೇಕು ಅಂತ ನಿರ್ಧಾರ ಮಾಡಿದ್ದರು. ಹನುಮಂತ, ಚೈತ್ರಾ ಕುಂದಾಪುರ, ಗೌತಮಿ, ಭವ್ಯಾ ಗೌಡ ಹಾಗೂ ಮೋಕ್ಷಿತಾ ಇವರನ್ನೆಲ್ಲ ಟಿಕೆಟ್​ ಟು ಹೋಮ್​ಗೆ ಸೆಲೆಕ್ಟ್ ಮಾಡಿದ್ದರು.

ಅಲ್ಲದೇ ಧನರಾಜ್, ತ್ರಿವಿಕ್ರಮ್​ ಹಾಗೂ ಉಗ್ರಂ ಮಂಜು ಅವರನ್ನು ಟಿಕೆಟ್ ಟು ಫಿನಾಲೆಗೆ ಹೆಸರನ್ನು ತೆಗೆದುಕೊಂಡಿದ್ದಾರೆ. ಇದೇ ಆಧಾರದ ಮೇಲೆ ಬಿಗ್​ಬಾಸ್ ರಜತ್​ ​ಟಿಕೆಟ್​ ಟು ಹೋಮ್​ಗೆ ಸೆಲೆಕ್ಟ್ ಮಾಡಿದ್ದ ಸ್ಪರ್ಧಿಗಳಿಗೆ ಟಾಸ್ಕ್​ವೊಂದನ್ನು ಕೊಟ್ಟಿದ್ದರು. ಅದೇ ಟಾಸ್ಕ್​ನಲ್ಲಿ ಬಿಗ್​ಬಾಸ್​ ಕಾಲ ಕಾಲಕ್ಕೆ ಬಾಲ್​ಗಳ ಸುರಿಮಳೆ ಗೈಯುತ್ತಾರೆ. ಆಗ ಸ್ಪರ್ಧಿಗಳನ್ನು ಅದನ್ನು ಬುಟ್ಟಿಯಲ್ಲಿ ಹಿಡಿದಿಟ್ಟು ಕೊಳ್ಳಬೇಕಿತ್ತು. ಯಾವ ಸ್ಪರ್ಧಿ ಅತಿ ಹೆಚ್ಚು ಬಾಲ್​ಗಳನ್ನು ಸಂಗ್ರಹ ಮಾಡುತ್ತಾರೋ ಅವರನ್ನು ಹಂತ ಹಂತವಾಗಿ ಟಿಕೆಟ್​ ಟು ಫಿನಾಲೆ ಜಾಗಕ್ಕೆ ಕಳುಹಿಸಬೇಕಿತ್ತು. ಜೊತೆಗೆ ಧನರಾಜ್, ತ್ರಿವಿಕ್ರಮ್​ ಹಾಗೂ ಉಗ್ರಂ ಮಂಜು ಪೈಕಿ ಒಬ್ಬರು ಆಚೆ ಬರಬೇಕಿತ್ತು.

ಅದರಂತೆ ಧನರಾಜ್, ತ್ರಿವಿಕ್ರಮ್​ ಹಾಗೂ ಉಗ್ರಂ ಮಂಜು ಒಮ್ಮತದಿಂದ ಯಾರು ಬಾಲ್​ ಟಾಸ್ಕ್​ ಆಡಲು ಹೋಗಬೇಕು ಅಂತ ನಿರ್ಧಾರ ಮಾಡಬೇಕಿತ್ತು. ಆಗ ಇದೇ ವೇಳೆ ರಜತ್ ಉಗ್ರಂ ಮಂಜು ಕಳೆದ 4 ವಾರಗಳಿಂದ ಡಲ್​ ಆಗಿದ್ದರು ಅಂತ ಹೇಳಿದ್ದರು. ಇದಕ್ಕೆ ಕೋಪಗೊಂಡ ಮಂಜು ಅವರು ಏಕಾಏಕಿ ರಜತ್ ಮೇಲೆ ಕೂಗಾಡಿದ್ದಾರೆ. ಅದರಲ್ಲೂ ಏಕವಚನದಲ್ಲಿ ಮಾತಾಡಿದ್ದಾರೆ. ಆ ಕೂಡಲೇ ತ್ರಿವಿಕ್ರಮ್ ಧನ್​ರಾಜ್​​ ರಜತ್​ ಹಾಗೂ ಮಂಜು ಅವರನ್ನು ಸಮಾಧಾನ ಮಾಡಿದ್ದಾರೆ.

ಇದನ್ನೂ ಓದಿ : ಅನಾವರಣವಾಯ್ತು ‘ಅಪಾಯವಿದೆ ಎಚ್ಚರಿಕೆ’ ಚಿತ್ರದ ಟೀಸರ್.. ಪ್ರೇಕ್ಷಕರು ಫಿದಾ..!

Leave a Comment

DG Ad

RELATED LATEST NEWS

Top Headlines

“ರಾವಣಾಪುರ” ಟ್ರೇಲರ್ ರಿಲೀಸ್ – ಜ.17ಕ್ಕೆ ಸಿನಿಮಾ ರಿಲೀಸ್..!

ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಸಾಹಸಗಳು ನಡೆಯುತ್ತಲೇ ಇವೆ. ಆ ಪ್ರಯತ್ನಗಳು ಸೋತ್ರು ಗೆದ್ರು ಹೊಸಬರು ತಮ್ಮ ಪ್ರಯತ್ನ ನಿಲ್ಲಿಸುವುದಿಲ್ಲ. ಅದರಂತೆ ಈಗ ಹೊಸ ತಂಡವೊಂದು ಸೇರಿಕೊಂಡು

Live Cricket

Add Your Heading Text Here