ಬೆಂಗಳೂರು : ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆ ಒದಗಿಸಿದೆ. ಪೆನ್ಡ್ರೈವ್ ಕೇಸ್ನಲ್ಲಿ ಡಿಕೆಶಿ-ಹೆಚ್ಡಿಕೆ ನಡುವೆ ಬಿಗ್ ಫೈಟ್ ನಡೆದಿದೆ.
ಪೆನ್ಡ್ರೈವ್ ಬಿಟ್ಟಿದ್ದೇ ಹೆಚ್ಡಿಕೆ ಎಂದು ಡಿಕೆ ಬ್ರದರ್ಸ್ ಹೇಳಿದ್ದರು. ಈ ಹೇಳಿಕೆಗೆ ಹೆಚ್ಡಿಕೆ ತಿರುಗೇಟು ಕೊಟ್ಟಿದ್ದಾರೆ. ಪೆನ್ಡ್ರೈವ್ ಬಿಡಲು ನನಗೇನು ಹುಚ್ಚಾ..? ನನ್ನ ಸಂಸ್ಕೃತಿ ಅದಲ್ಲ. ಅಶ್ಲೀಲ ವಿಡಿಯೋ ಮಾಡೋದ್ರಲ್ಲಿ ಯಾರು ಎಕ್ಸ್ಫರ್ಟ್..? ಯಾರು ಎಲ್ಲೆಲ್ಲಿ ಏನ್ ಮಾಡಿದ್ದಾರೆ, ಯಾರನ್ನು ಫಾರಿನ್ಗೆ ಕಳಿಸಿದ್ದಾರೆ. ನನಗೇನೂ ಗೊತ್ತಿಲ್ಲ ಅಂತಾ ತಿಳ್ಕೊಂಡಿರಬಹುದು, ನನ್ನ ಬಳಿಯೂ ದಾಖಲೆ ಇವೆ ಎಂದು ಹೆಚ್ಡಿಕೆ ಕಿಡಿ ಕಾರಿದ್ದಾರೆ.
ಹೆಚ್ಡಿಕೆ ಆರೋಪಕ್ಕೆ ಡಿಕೆಶಿ ತಿರುಗೇಟು ನೀಡಿದ್ದು, ರೇವಣ್ಣನ ಮುಹೂರ್ತ ಇಟ್ಟುಕೊಂಡು ಕ್ಯಾಸೆಟ್ ಬಿಡುಗಡೆ ಮಾಡಲಿ. ಅವ್ರ ತಂದೆ ಹೇಳ್ತಿದ್ರು ಅದ್ಯಾವದೋ ಒಂಬತ್ತು ವರ್ಷದ ಹೆಣ್ಣು ಮಗಳು ಅಂತಾ. ಅದನ್ನೂ ರಿಲೀಸ್ ಮಾಡಲಿ, ಅವ್ರಿಗೆ ಇರೋವಷ್ಟು ತಾಕತ್ ನಮಗಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.
ಇದನ್ನೂ ಓದಿ : ಸಂತ್ರಸ್ತೆ ಕಿಡ್ನಾಪ್ ಕೇಸ್ : ಭವಾನಿ ರೇವಣ್ಣಗೂ ಎಸ್‌ಐಟಿ ನೋಟಿಸ್..!