ಬೆಂಗಳೂರು : ಡಿಕೆಶಿ ಗಂಡಸ್ತನದ ರಾಜಕಾರಣ ಮಾಡಲಿ. ನನ್ನ ಕುಟುಂಬದ ಬಗ್ಗೆ ಮಾತನಾಡಿದ್ರೆ ಸುಮ್ಮನಿರಲ್ಲ ಎಂದು ಹೆಚ್ಡಿಕೆ ಹೇಳಿಕೆ ನೀಡಿದ್ದರು. ಇದೀಗ ಹೆಚ್.ಡಿ. ಕುಮಾರಸ್ವಾಮಿ ಗಂಡಸ್ತನದ ಸವಾಲ್ಗೆ ಡಿಸಿಎಂ ಡಿಕೆ ಶಿವಕುಮಾರ್ ಟಕ್ಕರ್ ಕೊಟ್ಟಿದ್ದಾರೆ.
ನಾವು ಗಂಡಸರಲ್ಲ, ಅವರೊಬ್ಬರೇ ಗಂಡಸರು ಅಂತಾ ಟ್ರಿಗರ್ ಆದ ಡಿಕೆ ಶಿವಕುಮಾರ್ ಅವರು ಹೆಚ್ಡಿಕೆಗೆ ಏಕವಚನದಲ್ಲೇ ಎದಿರೇಟು ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಹೆಚ್.ಡಿಕೆ ವಿರುದ್ದ ಗುಡುಗಿದ ಡಿ.ಕೆ. ಶಿವಕುಮಾರ್ ಅವರು, ಇವನು ಸಿಎಂ ಆಗಿದ್ದಾಗ ನಮ್ಮ ಮೇಲೆ ಸುಳ್ಳು ಕೇಸ್ ಹಾಕ್ಸಿದ್ದ. ಮಗ ಸೋತ ಅಂತಾ ನನ್ನ ಮೇಲೆ ಗದಾಪ್ರಹಾರ ಮಾಡಿದವನು. ನಾನು ಯೂಟರ್ನ್ ಮಾಡಿದವನಲ್ಲ, ಸ್ಟ್ರೈಟ್ ಯುದ್ದ ಮಾಡಿದವನು ಎಂದು ಗುಡುಗಿದ್ದಾರೆ.
ಇನ್ನು ಮಿಲಿಟರಿಯವರು ಬಂದು ಜೈಲಿಗೆ ಕರ್ಕೊಂಡ್ ಹೋಗ್ತಾರೆ ಅಂದಿದ್ದಾರೆ. ನಾನು ಜೈಲು ನೋಡಿರೋನು, ಜೈಲಲ್ಲಿ ನಂಗೆಷ್ಟಿತ್ತು ಶಕ್ತಿ ಅನ್ನೋದನ್ನ ನೋಡಿದ್ದಾನೆ ಎಂದು ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿ ಹೆಚ್ಡಿಕೆ ವಿರುದ್ಧ ಹರಿಹಾಯ್ದಿದ್ದಾರೆ.
ಇದನ್ನೂ ಓದಿ : ಯುವತಿ ಹ*ತ್ಯೆ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ – ನಗರದ ಪಿಜಿಗಳಿಗೆ ಹೊಸ ಮಾರ್ಗಸೂಚಿ ಜಾರಿ..!