Download Our App

Follow us

Home » ಸಿನಿಮಾ » ಸ್ಯಾಂಡಲ್‌ವುಡ್‌ನ ಖ್ಯಾತ ನಟಿಯ ಜೊತೆ ನಿರ್ದೇಶಕ ತರುಣ್‌ ಸುಧೀರ್‌ ಮದುವೆ? ಆ ನಟಿ ಯಾರು?

ಸ್ಯಾಂಡಲ್‌ವುಡ್‌ನ ಖ್ಯಾತ ನಟಿಯ ಜೊತೆ ನಿರ್ದೇಶಕ ತರುಣ್‌ ಸುಧೀರ್‌ ಮದುವೆ? ಆ ನಟಿ ಯಾರು?

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ತರುಣ್‌ ಸುಧೀರ್‌ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಅನ್ನೊ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ನಟರಾಗಿದ್ದ ತರುಣ್‌ ಸುಧೀರ್‌ ಚೌಕ ಚಿತ್ರದ ಮೂಲಕ ನಿರ್ದೇಶಕರಾದರು. ಚೌಕ ಸೂಪರ್‌ ಹಿಟ್‌ ಆದ ಬಳಿಕ ನಟ ದರ್ಶನ್ ಜೊತೆ ಬ್ಯಾಕ್ ಟು ಬ್ಯಾಕ್ ಎರಡು ಹಿಟ್ ಸಿನಿಮಾಗಳನ್ನು ನೀಡಿದ್ದು, ಕಾಟೇರ ಚಿತ್ರ ಸೂಪರ್‌ ಡೂಪರ್‌ ಹಿಟ್‌ ಕೂಡ ಆಗಿತ್ತು.

ಸಾಲು ಸಾಲು ಸಿನಿಮಾಗಳ ಯಶಸ್ಸಿನ ಬಳಿಕ ಸದ್ಯ 4ನೇ ಸಿನಿಮಾದ ತಯಾರಿಯಲ್ಲಿರುವ ತರುಣ್ ಸುಧೀರ್ ಮದುವೆಗೂ ಕೂಡ ತಯಾರಿ ನಡೆಸುತ್ತಿದ್ದಾರೆ ಎನ್ನುವ ಮಾತು ಹರಿದಾಡುತ್ತಿದೆ. ಇದೀಗ ತರುಣ್ ಸುಧೀರ್ 40ರ ವಯಸ್ಸಿನ ಗಡಿಯಲ್ಲಿದ್ದು, ಈ ಹಿಂದೆ ತರುಣ್ ಸುಧೀರ್ ಮದುವೆ ಬಗ್ಗೆ ಮಾತನಾಡಿ, ಸದ್ಯಕ್ಕೆ ಮದುವೆ ಬಗ್ಗೆ ಆಲೋಚನೆ ಇಲ್ಲ, ಮದುವೆ ಆಗದೇ ನೆಮ್ಮದಿಯಾಗಿ ಇದ್ದೇನೆ ಎಂದು ಹೇಳಿದ್ದರು.

ಆದರೆ ಇದೀಗ ಮತ್ತೆ ತರುಣ್ ಸುಧೀರ್ ಮದುವೆ ಸುದ್ದಿ ಮುನ್ನೆಲೆಗೆ ಬಂದಿದ್ದು, ತೆರೆಮರೆಯಲ್ಲಿ ಮದುವೆ ಸಿದ್ಧತೆಗಳು ಕೂಡ ಶುರುವಾಗಿದೆ ಎನ್ನುವ ವದಂತಿ ಹಬ್ಬಿದೆ. ಇನ್ನೆರಡು ತಿಂಗಳಲ್ಲಿ ತರುಣ್‌ ಸುಧೀರ್ ಒಬ್ಬರು ಖ್ಯಾತ ನಟಿಯ ಜೊತೆ ಹಸೆಮಣೆ ಏರಲಿದ್ದಾರೆ ಎನ್ನಲಾಗಿದೆ. ಮದುವೆನೇ ಬೇಡ ಎನ್ನುತ್ತಿದ್ದ ತರುಣ್‌ ಈಗ ಒಬ್ಬರು ಖ್ಯಾತ ನಟಿಯ ಕೈ ಹಿಡಿಯಲಿದ್ದಾರಂತೆ. 

ಹೌದು ನಟ, ನಿರ್ದೇಶಕ ತರುಣ್ ಸುಧೀರ್ ಕನ್ನಡ ಚಿತ್ರರಂಗದ ಖ್ಯಾತ ನಟಿ ಸೋನಾಲ್ ಮೊಂತೆರೊ ಅವರ ಕೈ ಹಿಡಿಯಲಿದ್ದಾರೆ ಎನ್ನುವ ಸುದ್ದಿ ಜೋರಾಗಿಯೇ ಕೇಳಿ ಬರುತ್ತಿದೆ. ರಾಬರ್ಟ್‌ ಚಿತ್ರದಲ್ಲಿ ವಿನೋದ್‌ ಪ್ರಭಾಕರ್‌ ಜೋಡಿಯಾಗಿ ಕಾಣಿಸಿಕೊಂಡಿದ್ದ ಸೋನಾಲ್ ಮೊಂತೆರೊ, ಝೈದ್‌ ಖಾನ್‌ ಅಭಿನಯದ ಬನರಾಸ್‌ ಚಿತ್ರದಲ್ಲಿ ಮತ್ತಷ್ಟು ಮಿಂಚಿದ್ದರು.

ಇದನ್ನೂ ಓದಿ : ಟ್ರೇಲರ್​ನಲ್ಲೇ ಕುತೂಹಲ ಮೂಡಿಸಿರುವ “ಜಿಗರ್” ಚಿತ್ರ ಜುಲೈ 5ರಂದು ರಿಲೀಸ್​..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here