ಬೆಂಗಳೂರು : ಮೊದಲ ಕ್ಯಾಬಿನೆಟ್ ಸಭೆಯ ಬಳಿಕ ಸಿಎಂ ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಿದ್ದರಾಮಯ್ಯ, ಹೆಚ್‌ಸಿ ಮಹಾದೇವಪ್ಪ, ಕೆ.ಎನ್ ರಾಜಣ್ಣ ಹಾಗೂ ಪರಮೇಶ್ವರ್ ಅವರು ಡಿನ್ನರ್ ಮೀಟಿಂಗ್ ಸೇರಿದ್ದರು. ಇದಾದ ಬಳಿಕ ಪರಮೇಶ್ವರ್ ಅವರು ಶಾಸಕರುಗಳಿಗೆ ಭೋಜನ ಕೂಟ ಏರ್ಪಡಿಸಿ ಮುಂದೂಡಿದ್ದಾರೆ. ಸದ್ಯ ಕಾಂಗ್ರೆಸ್‌ನಲ್ಲಿ ಡಿನ್ನರ್ ಪಾಲಿಟಿಕ್ಸ್ ತೀವ್ರ ಸದ್ದು ಮಾಡುತ್ತಿದ್ದು, ಎಚ್ಚೆತ್ತುಕೊಂಡಿರುವ ಸಿಎಂ ಜನವರಿ 13ರಂದು ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಡಿನ್ನರ್ ಪಾಲಿಟಿಕ್ಸ್ ಸಂಚಲನ ಸೃಷ್ಟಿಸಿರುವ ಹೊತ್ತಲ್ಲೇ ಸಿಎಂ ಸಿದ್ದರಾಮಯ್ಯ ಜನವರಿ 13ರ ಸಂಜೆ CLP ಮೀಟಿಂಗ್ ಕರೆದಿದ್ದಾರೆ. ಈ ಮೂಲಕ ಬಣ ರಾಜಕೀಯ ತೀವ್ರಗೊಳ್ಳುವ ಮೊದಲೇ ಗುಂಪುಗಾರಿಕೆ ಶಮನ ಮಾಡಲು ಸಿದ್ದರಾಮಯ್ಯ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ಅಧಿವೇಶನದ ವೇಳೆ CLP ಮೀಟಿಂಗ್ ಕರೆಯೋ ವಾಡಿಕೆಯಿದೆ. ಆದರೆ ಇದೀಗ ದಿಢೀರ್ CLP ಮೀಟಿಂಗ್ ಫಿಕ್ಸ್ ಮಾಡಿರೋದು ಭಾರೀ ಕುತೂಹಲಕ್ಕೂ ಕಾರಣವಾಗಿದೆ.
ಸಂಕ್ರಾಂತಿ ವೇಳೆಯೇ CLP ಮೀಟಿಂಗ್ ನಡೀತಿರೋದೇಕೆ? ರಾಜ್ಯ ಸಚಿವ ಸಂಪುಟಕ್ಕೆ ಸರ್ಜರಿ ಆಗುತ್ತಾ? ಎಂಬೆಲ್ಲ ಅನುಮಾನಗಳು ಹುಟ್ಟಿಕೊಂಡಿದೆ. ಭಾರೀ ಕುತೂಹಲ ಕೆರಳಿಸಿದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಡಿನ್ನರ್ ಮೀಟಿಂಗ್, ಅಸಮಾಧಾನ ಸೇರಿ ಹಲವು ವಿಷಯಗಳ ಚರ್ಚೆಗಳು ನಡೆಯುವ ಸಾಧ್ಯತೆಯಿದೆ.
ಇನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಜನವರಿ 21ರಂದು ನಡೆಯುವ ಬೆಳಗಾವಿ ಕಾಂಗ್ರೆಸ್ ಅಧಿವೇಶನ ಕಾರ್ಯಕ್ರಮ, ಸಚಿವರ ಆಕ್ಷನ್ , ರಿಯಾಕ್ಷನ್, ರಾಜ್ಯದ ಹಿರಿಯ ನಾಯಕರನ್ನ ವಿಶ್ವಾಸಕ್ಕೆ ಪಡೆಯದೆ ನೇರವಾಗಿ ಹೈಕಮಾಂಡ್ ಕದ ತಟ್ಟುತ್ತಿರುವ ಡಿಕೆಶಿ ನಡೆ, ಜೊತೆಗೆ ಸರ್ಕಾರದ ಮೇಲಿನ ವಿಪಕ್ಷಗಳ ಆರೋಪ ಕುರಿತು ಗಂಭೀರ ಚರ್ಚೆ ನಡೆಸುವ ಸಾಧ್ಯತೆಯಿದೆ.
ಇದನ್ನೂ ಓದಿ : ಪ್ರಯಾಣಿಕರಿಗೆ ಮತ್ತೊಂದು ಬಿಗ್ ಶಾಕ್ – ಟಿಕೆಟ್ ಬೆನ್ನಲ್ಲೇ ಬಸ್ ಪಾಸ್ ದರವೂ ದುಬಾರಿ.. ಇಲ್ಲಿದೆ ಡೀಟೇಲ್ಸ್!