Download Our App

Follow us

Home » ಸಿನಿಮಾ » ‘ಚೌಕಿದಾರ್’ ಸಿನಿಮಾದಲ್ಲಿ ಪೃಥ್ವಿ ಅಂಬಾರ್​​ಗೆ ಜೋಡಿಯಾದ ದೊಡ್ಮನೆ ಬ್ಯೂಟಿ ಧನ್ಯ ರಾಮ್​​ಕುಮಾರ್..!

‘ಚೌಕಿದಾರ್’ ಸಿನಿಮಾದಲ್ಲಿ ಪೃಥ್ವಿ ಅಂಬಾರ್​​ಗೆ ಜೋಡಿಯಾದ ದೊಡ್ಮನೆ ಬ್ಯೂಟಿ ಧನ್ಯ ರಾಮ್​​ಕುಮಾರ್..!

ಪೃಥ್ವಿ ಅಂಬಾರ್ ನಾಯಕನಾಗಿ ನಟಿಸುತ್ತಿರುವ ಚೌಕಿದಾರ್ ಹೊಸ ಸಿನಿಮಾವನ್ನ ರಥಾವರ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ಅವರು ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಡೈಲಾಗ್ ಕಿಂಗ್ ಸಾಯಿಕುಮಾರ್ ಈ ಚಿತ್ರತಂಡಕ್ಕೆ ಸೇರಿಕೊಂಡಿದ್ದರು. ಇದೀಗ ಚೌಕಿದಾರ್​​ಗೆ ನಾಯಕಿ ಸಿಕ್ಕಿದ್ದಾಳೆ. ದೊಡ್ಮನೆ ಬ್ಯೂಟಿ ಧನ್ಯರಾಮ್ ಕುಮಾರ್ ಪೃಥ್ವಿ ಅಂಬಾರ್​​ಗೆ ಜೋಡಿಯಾಗಿ ನಟಿಸುತ್ತಿದ್ದಾರೆ.

ಪೃಥ್ವಿ ಅಂಬಾರ್ ನಾಯಕನಾಗಿ ನಟಿಸುತ್ತಿರುವ ಚೌಕಿದಾರ್ ಸಿನಿಮಾದಲ್ಲಿ ಧನ್ಯರಾಮ್ ಕುಮಾರ್ ಹೀರೋಯಿನ್ ಆಗಿ ಬಣ್ಣ ಹಚ್ಚುತ್ತಿದ್ದಾರೆ. ನಿನ್ನ ಸನಿಹಕೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿತರಾಗಿದ್ದ ಧನ್ಯ ಇತ್ತೀಚೆಗಷ್ಟೇ ಜಡ್ಜಮೆಂಟ್ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬಂದಿದ್ದರು. ಸದ್ಯ ಕಾಲಪತ್ತರ್ ರಿಲೀಸ್​​ಗೆ ಎದುರು ನೋಡುತ್ತಿರುವ ದೊಡ್ಮನೆ ಸುಂದರಿ ಈಗ ಚೌಕಿದಾರ್ ತಂಡವನ್ನ ಸೇರಿಕೊಂಡಿದ್ದಾರೆ.

ಚೌಕಿದಾರ್ ಚಿತ್ರ ಬಹುಭಾಷೆಯಲ್ಲಿ ಮೂಡಿ ಬರ್ತಿದೆ. ಕನ್ನಡದ ಜೊತೆಗೆ ಹಲವು ಭಾಷೆಯಲ್ಲಿ ಚಿತ್ರ ತಯಾರಾಗುತ್ತಿದೆ. ಈವರೆಗೆ ಸಿನಿಮಾದಲ್ಲಿ ಲವರ್‌ ಬಾಯ್‌ನಂತೆ ಕಾಣಿಸಿಕೊಂಡಿರುವ ಪೃಥ್ವಿ ಅಂಬಾರ್‌ ಈ ಚಿತ್ರದಲ್ಲಿ ಆಕ್ಷನ್ ಸೀಕ್ವೆನ್ಸ್ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ, ಹಾಗಂತ ಚೌಕಿದಾರ್ ಕಂಪ್ಲೀಟ್ ಆಕ್ಷನ್ ಸಿನಿಮಾವಲ್ಲ. ಪಕ್ಕ ಫ್ಯಾಮಿಲಿ ಎಂಟರ್ ಟೈನರ್.

ವಿದ್ಯಾ ಶೇಖರ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಡಾ.ಕಲ್ಲಹಳ್ಳಿ ಚಂದ್ರಶೇಖರ್ ಚೌಕಿದಾರ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್‌ ಬಸ್ರೂರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದು, ವಿ. ನಾಗೇಂದ್ರ ಪ್ರಸಾದ್‌, ಪ್ರಮೋದ್‌ ಮರವಂತೆ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ. ಜುಲೈ ಮೂರನೇ ತಾರೀಖಿನಂದು ಬಂಡಿ ಮಹಾಕಾಳಿ ದೇಗುಲದಲ್ಲಿ ಚೌಕಿದಾರ್ ಸಿನಿಮಾ ಮುಹೂರ್ತ ನೆರವೇರಿಸಲು ಚಿತ್ರತಂಡ ಯೋಜನೆ ಹಾಕಿದೆ.

ಇದನ್ನೂ ಓದಿ : ಗೋಬಿ, ಕಬಾಬ್​ ಬಳಿಕ ಪಾನಿಪುರಿಯಲ್ಲೂ ವಿಷಬಣ್ಣ ಪತ್ತೆ – ರಾಜ್ಯದಲ್ಲಿ ಬ್ಯಾನ್​ ಆಗುತ್ತಾ ಪಾನಿಪುರಿ?

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here