ಸೋಶಿಯಲ್ ಮೀಡಿಯಾ ಮೂಲಕ ಖ್ಯಾತಿ ಪಡೆದ ಮಂಗಳೂರಿನ ಧನರಾಜ್ ಆಚಾರ್ ಅವರು ಬಿಗ್ ಬಾಸ್ಗೆ ಎಂಟ್ರಿ ಕೊಟ್ಟಿದ್ದಾರೆ. ಧನರಾಜ್ ಅವರು ಹಾಸ್ಯಮಯ ಮತ್ತು ಸಾಮಾಜಿಕ ಕಳಕಳಿಯ ವಿಡಿಯೋಗಳ ಮೂಲಕ ಅಪಾರ ಜನಪ್ರಿಯತೆ ಪಡೆದಿದ್ದಾರೆ.
ಹೆಂಡತಿ ಹಾಗೂ ಕುಟುಂಬದ ಜೊತೆ ಅವರು ರೀಲ್ಸ್ ಮಾಡುತ್ತಾರೆ. ಕಾಮಿಡಿ ವಿಡಿಯೋಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಅವರು ಈ ಬಾರಿ ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಎಷ್ಟು ನಗಿಸುತ್ತಾರೆ ಎನ್ನುವ ಕುತೂಹಲ ಮೂಡಿದೆ.
‘ಬಿಗ್ ಬಾಸ್’ ಬಗ್ಗೆ ಧನರಾಜ್ ಅವರು ಒಂದು ವಿಡಿಯೋ ಮಾಡಿದ್ದರು. ಜಗಳ ನಡೆಯೋದು ಟಿಆರ್ಪಿಗಾಗಿ ಎಂದು ಅವರು ಹೇಳಿದ್ದರು. ಈ ವಿಡಿಯೋನ ಪ್ಲೇ ಮಾಡಲಾಯಿತು. ಆ ಬಳಿಕ ಸುದೀಪ್ ಗಂಭೀರವಾಗಿ ಕ್ಲಾಸ್ ತೆಗೆದುಕೊಂಡರು. ‘ಹೆಂಗ್ ಕಾಣಿಸ್ತೀವಿ? ನಾನು ತಮಾಷೆ ಮಾಡೋ ಹಾಗೆ ಕಾಣ್ತಾ ಇದೀನಾ. ಜಗಳ ಮಾಡೋದು ಟಿಆರ್ಪಿ ಗಾ? ನಾನು ನೋಡದನ್ನು ಬದಲಾಯಿಸಿಕೊಳ್ಳೋಕೆ ಆಗಲ್ಲ. ಗೌರವ ಇಲ್ಲದ ವ್ಯಕ್ತಿನ ಏಕೆ ಕಳುಹಿಸುತ್ತಿದ್ದೀರಿ’ ಎಂದು ಸುದೀಪ್ ಪ್ರಶ್ನೆ ಮಾಡಿದರು.
‘ನಾನು ಮಾಡಿರೋದು ತಮಾಷೆಗೆ. ಇದನ್ನು ಗಂಭೀರವಾಗಿ ಸ್ವೀಕರಿಸಬೇಡಿ’ ಎಂದು ಧನರಾಜ್ ಕೇಳಿದರು. ಆ ಬಳಿಕ ಸುದೀಪ್ ನಕ್ಕರು. ಆಗ ಧನರಾಜ್ ನಿಟ್ಟುಸಿರು ಬಿಟ್ಟರು. ಈಗ ಧನರಾಜ್ ಆಚಾರ್ ಅವರು ದೊಡ್ಮನೆಗೆ ಬಂದಿರೋದ್ರಿಂದ ಹಾಸ್ಯವನ್ನು ನಿರೀಕ್ಷಿಸಬಹುದು.
ಇದನ್ನೂ ಓದಿ : ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ನಟಿ ಭವ್ಯಾ ಗೌಡ, ಯಮುನಾ ಶ್ರೀನಿಧಿ..!