ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್‌ಗೆ ಜೈಲುವಾಸ ಫಿಕ್ಸ್ ಆಗಿದೆ. ಕಳೆದ 13 ವರ್ಷಗಳ ಹಿಂದೆ ಕೌಟುಂಬಿಕ ಕಲಹದಿಂದ ಸೆರೆ ಹಿಂದೆ ಸೇರಿದ್ದ ನಟನೀಗ ಮತ್ತೊಮ್ಮೆ ಜೈಲುವಾಸ ಶುರು ಮಾಡಿದ್ದಾರೆ. ಇದೇ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾಗೌಡ ಹಾಗೂ ಇತರರಿಗೆ ಕೆಲ ದಿನಗಳ ಹಿಂದೆಯೇ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
ಇದೀಗ ಈ ಪ್ರಕರಣದ ತನಿಖೆ ವೇಳೆ ಸ್ಪೋಟಕ ಸತ್ಯವೊಂದು ಬಯಲಾಗಿದೆ. FSLನಲ್ಲಿ ಮೊಬೈಲ್ ರಿಟ್ರೀವ್ ವೇಳೆ ಸ್ಪೋಟಕ ಸತ್ಯ ಹೊರಬಿದ್ದಿದ್ದು, ಡಿಗ್ಯಾಂಗ್ ಸುಮಾರು 30ಕ್ಕೂ ಹೆಚ್ಚು ವಾಟ್ಸ್ಆಪ್ ಗ್ರೂಪ್ ಮಾಡಿಕೊಂಡಿತ್ತು. ಈ ಎಲ್ಲಾ ಗ್ರೂಪ್ಗಳನ್ನ ಆರೋಪಿ ನಾಗರಾಜ್ ಹ್ಯಾಂಡಲ್ ಮಾಡ್ತಿದ್ದ. ಎಲ್ಲಾ ಜಿಲ್ಲೆಗಳ ಹೆಸರಲ್ಲಿ ಒಂದೊಂದು ಗ್ರೂಪ್ ಕ್ರಿಯೆಟ್ ಕೂಡ ಮಾಡಲಾಗಿತ್ತು.
ಯಾರು ದರ್ಶನ್ ಬಗ್ಗೆ ಮಾತಾಡ್ತಾರೆ, ಯಾರು ದರ್ಶನ್ ವಿರುದ್ದ ನೆಗೆಟಿವ್ ಕಾಮೆಂಟ್ ಮಾಡ್ತಾರೆ, ಅಂತವರ ಫೋಟೋ ಕಳಿಸಿ ಇವನನ್ನ ಹುಡುಕಿ ಎನ್ನುತ್ತಿದ್ದ ನಾಗರಾಜ್. ಈ ಗ್ರೂಪ್ ಹ್ಯಾಂಡಲ್ ಮಾಡಲು ದರ್ಶನ್ ನಿಂದಲೆ ಫಂಡಿಂಗ್ ಕೂಡ ಹೋಗ್ತಾ ಇತ್ತು. ರೌಡಿ ಆಕ್ಟಿವಿಟಿ ಹುಡುಗರನ್ನೇ ನಾಗರಾಜ್ ಈ ಗ್ರೂಪಲ್ಲಿ ಸೇರಿಸಿದ್ದ. ದರ್ಶನ್ ಹೋದಲ್ಲೆಲ್ಲ ಜನ ಸೇರಿಸಲು ಈ ಗ್ರೂಪ್‌ನಲ್ಲೇ ಮಾಹಿತಿ ರವಾನೆಯಾಗ್ತಿತ್ತು. ಸದ್ಯ ‘ಡಿ’ ವಾಟ್ಸ್ಆಪ್ ಗ್ರೂಪ್ನ ಕಂಪ್ಲೀಟ್ ಮಾಹಿತಿಯನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಹಿಂದೆ ಯಾರನೆಲ್ಲ ಟಾರ್ಗೆಟ್ ಮಾಡಿದ್ರು ಅನ್ನೊ ಮಾಹಿತಿ ಕೂಡ ಪೊಲೀಸರು ಪಡೆದಿದ್ದಾರೆ. ಈ ಬೆನ್ನಲ್ಲೇ ಡಿ-ವಾಟ್ಸ್ಆಪ್ ಗ್ರೂಪ್ ಮೆಂಬರ್ಸ್ಗೆ ನಡುಕ ಶುರುವಾಗಿದೆ.
ಇದನ್ನೂ ಓದಿ : ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಖಂಡಿಸಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರೊಟೆಸ್ಟ್..!