Download Our App

Follow us

Home » ಅಪರಾಧ » ಛಿದ್ರ ಛಿದ್ರವಾಗಿ ಹೋಯ್ತು ‘ಡಿ ಗ್ಯಾಂಗ್’ ​​​​​​- ಒಬ್ಬೊಬ್ಬ ಆರೋಪಿಯೂ ಒಂದೊಂದು ಜೈಲಿಗೆ ಶಿಫ್ಟ್..!

ಛಿದ್ರ ಛಿದ್ರವಾಗಿ ಹೋಯ್ತು ‘ಡಿ ಗ್ಯಾಂಗ್’ ​​​​​​- ಒಬ್ಬೊಬ್ಬ ಆರೋಪಿಯೂ ಒಂದೊಂದು ಜೈಲಿಗೆ ಶಿಫ್ಟ್..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಹಾಗೂ ಗ್ಯಾಂಗ್‌ ಹಾಗೂ ಸಹಚರ ಖೈದಿಗಳನ್ನು ಇಂದು ಬೆಳಗ್ಗೆ 4.30ಕ್ಕೆ ಪರಪ್ಪನ ಅಗ್ರಹಾರದಿಂದ ಶಿಫ್ಟ್ ಮಾಡಿದ್ದಾರೆ. ರಾಜಾತಿಥ್ಯದ ಫೋಟೋ ಬಳಿಕ ಡಿ ಗ್ಯಾಂಗ್ ಅಕ್ಷರಶಃ ಕಂಗಾಲಾಗಿ ಹೋಗಿದ್ದು, ಇದೀಗ ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಶಿಫ್ಟ್ ಆಗ್ತಿದ್ದಾರೆ.

ಆರೋಪಿಗಳಿಗೆ ರಾಜಾತಿಥ್ಯ ಸಿಗುತ್ತಿರುವ ಒಂದಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡ ಕರ್ನಾಟಕ ಗೃಹ ಇಲಾಖೆ ಹಾಗೂ ಪೊಲೀಸರು ನ್ಯಾಯಾಲಯದ ಆದೇಶ ಪಡೆದು, ಇಂದು ರಾಜ್ಯದ ವಿವಿಧ ಜೈಲುಗಳಿಗೆ ಆರೋಪಿಗಳ್ನು ಸ್ಥಳಾಂತರ ಮಾಡಿದ್ದಾರೆ.

ಒಬ್ಬೊಬ್ಬ ಆರೋಪಿಯನ್ನೂ ಒಂದೊಂದು ಜೈಲಿಗೆ ಶಿಫ್ಟ್​​ ಮಾಡಿದ್ದಾರೆ. 17 ಮಂದಿ ಆರೋಪಿಗಳ ಪೈಕಿ ನಟ ದರ್ಶನ್​​ನ ಬಳ್ಳಾರಿ ಕಾರಾಗೃಹಕ್ಕೆ ಸ್ಥಳಾಂತರಿಸಿದ್ದಾರೆ. A3 ಪವನ್​, A4 ರಾಘವೇಂದ್ರ ಮೈಸೂರು ಜೈಲಿಗೆ, A6 ಜಗದೀಶ್​​, A12 ಲಕ್ಷ್ಮಣ್ ಶಿವಮೊಗ್ಗ ಜೈಲಿಗೆ, A9 ಧನರಾಜ್​ ಶಿಫ್ಟ್ ಧಾರವಾಡ ಜೈಲಿಗೆ, A9 ವಿನಯ್ ವಿಜಯಪುರ ಜೈಲಿಗೆ​​, A11 ನಾಗರಾಜ್ ಕಲಬುರಗಿ ಜೈಲಿಗೆ, ​​ A14 ಪ್ರದೂಷ್​ನ್ನು ಬೆಳಗಾವಿ ಜೈಲಿಗೆ​ ಶಿಫ್ಟ್​​​ ಮಾಡಿದ್ದಾರೆ.

ಆದರೆ, ಇನ್ನು ಮೂವರು ಆರೋಪಿಗಳು ಮಾತ್ರ ಪರಪ್ಪನ ಅಗ್ರಹಾರದಲ್ಲೇ ಇದ್ದಾರೆ. ರೇಣುಕಾಸ್ವಾಮಿ ಕೊಲೆಯ ಮೂಲವಾಗಿರುವ ಪವಿತ್ರಾಗೌಡನನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಿಲ್ಲ. ಪವಿತ್ರಾಗೌಡ ಜೊತೆ A 13 ದೀಪಕ್​ ಹಾಗೂ A 17 ಅನುಕುಮಾರ್​​ನ್ನು ಪರಪ್ಪನ ಅಗ್ರಹಾರದಲ್ಲೇ ಉಳಿಸಿಕೊಳ್ಳಲಾಗಿದೆ. ಹೀಗಾಗಿ ಈಗ ಡಿ ಗ್ಯಾಂಗ್ ಛಿದ್ರ ಛಿದ್ರವಾಗಿ ಹೋಗಿದೆ.

ಇದನ್ನೂ ಓದಿ : ಪರಪ್ಪನ ಅಗ್ರಹಾರದಿಂದ ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ – ದರ್ಶನ್ ಕರೆದೊಯ್ದ ಪೊಲೀಸರು..!

Leave a Comment

DG Ad

RELATED LATEST NEWS

Top Headlines

ಬೆಳ್ಳಂಬೆಳಗ್ಗೆ ನೇಪಾಳದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ – ಬಿಹಾರ, ದೆಹಲಿ, ಪಂಜಾಬ್​ನಲ್ಲೂ ನಡುಗಿದ ಭೂಮಿ..!

ದೆಹಲಿ : ಇಂದು ಮುಂಜಾನೆ ನೇಪಾಳದಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 7.1ರಷ್ಟು ದಾಖಲಾಗಿದೆ. ಭಾರತದ ಹಲವು ರಾಜ್ಯಗಳಲ್ಲೂ ಭೂಕಂಪನದ ಅನುಭವವಾಗಿದ್ದು, ಬಿಹಾರ,

Live Cricket

Add Your Heading Text Here