ಬೆಂಗಳೂರು : ಒಂದೇ ಠಾಣೆಯಲ್ಲಿ 5 ವರ್ಷ ಪೂರೈಸಿರೋ ಸಿಬ್ಬಂದಿಗಳಿಗೆ DG-IGP ಅಲೋಕ್ ಮೋಹನ್ ಅವರು ವರ್ಗಾವಣೆಗೆ ಸೂಚನೆ ನೀಡಿದ್ದಾರೆ. ವರ್ಗಾವಣೆ ನಂತರವೂ ಓಓಡಿ ಮೇಲೆ ಅದೇ ಠಾಣೆಯಲ್ಲಿ ಕರ್ತವ್ಯ ನಿರ್ವಸುತ್ತಿದ್ದಾರೆ. ಹಾಗಾಗಿ ಸಿಎಂ ಜೊತೆಗಿನ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ವರ್ಗಾವಣೆಗೆ ಸೂಚನೆ ಕೊಟ್ಟಿದ್ದಾರೆ.
ಕಾನ್ ಸ್ಟೇಬಲ್ನಿಂದ PSI ವರೆಗೆ ಕೂಡಲೇ ಬೇರೆ ಠಾಣೆಗೆ ವರ್ಗಾವಣೆ ಮಾಡುವಂತೆ ಜಿಲ್ಲಾ ಎಸ್ಪಿ ಗಳಿಗೆ DG-IGP ಅಲೋಕ್ ಮೋಹನ್ ಅವರು ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಕೈಗೊಂಡ ಕ್ರಮದ ಮಾಹಿತಿಯನ್ನು 7 ದಿನದ ಒಳಗಡೆ ಪೊಲೀಸ್ ಪ್ರಧಾನ ಕಛೇರಿಗೆ ವರದಿ ನೀಡಲು ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ : ಹಾಸನ : ಮಗುವಿನ ಅನಾರೋಗ್ಯದಿಂದ ಮನನೊಂದು ತಂದೆ ಆತ್ಮಹತ್ಯೆಗೆ ಯತ್ನ..!
Post Views: 165