ಮೈಸೂರು : ಮೈಸೂರಿನ ವಿಜಯನಗರದಲ್ಲಿರುವ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನಕ್ಕೆ ಹೊಸ ವರ್ಷದ ಮೊದಲ ದಿನ ಭಕ್ತಾದಿಗಳ ದಂಡೇ ಹರಿದು ಬಂದಿದೆ. ದೇವರ ದರ್ಶನ ಪಡೆಯಲು ರಾಜ್ಯದ ನಾನಾ ಮೂಲೆಗಳಿಂದ ಬಂದಿರುವ ಸಾವಿರಾರೂ ಭಕ್ತರು, ಕಿಲೋ ಮೀಟರ್ ಗಟ್ಟಲೆ ಕ್ಯೂ ನಿಂತಿದ್ದಾರೆ. ಬಂದಿರುವ ಭಕ್ತರಿಗೆ ಅನ್ನ ಸಂತರ್ಪಣೆ ಹಾಗೂ ತಿರುಪತಿ ಮಾದರಿ ಲಡ್ಡು ವಿತರಣೆ ನಡೆಯಲಿದೆ. ಈ ಹಿನ್ನೆಲೆ ಎರಡು ಲಕ್ಷ ಲಡ್ಡುಗಳನ್ನು ದೇವಸ್ಥಾನದ ಆಡಳಿತ ಮಂಡಳಿ ತಯಾರಿ ಮಾಡಿಕೊಂಡಿದೆ.
ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾದಲ್ಲಿ ಕಳೆದ ಹಲವಾರು ವರ್ಷಗಳಿಂದಲೂ ಹೊಸ ವರ್ಷದ ಮೊದಲ ದಿನ ಲಾಡುಗಳ ವಿತರಣಾ ಕಾರ್ಯ ನಡೆಯುತ್ತಾ ಬಂದಿದೆ. ಕನ್ನಡದ ಮೇರುನಟ ದಿವಂಗತ ಡಾ. ರಾಜಕುಮಾರ್ ಅವರ ಪ್ರೇರಣೆಯಿಂದ ಕಳೆದ 1994ರಲ್ಲಿ ಒಂದು ಸಾವಿರ ಲಾಡುಗಳ ವಿತರಣೆಯೊಂದಿಗೆ ಆರಂಭವಾದ ಸೇವೆ, ವರ್ಷದಿಂದ ವರ್ಷಕ್ಕೆ ಲಾಡುಗಳ ವಿತರಣೆಯಲ್ಲಿ ಹೆಚ್ಚಳ ಕಂಡಿದೆ.
ಹೊಸ ವರ್ಷದ ಮೊದಲ ದಿನ ದೇಗುಲಕ್ಕೆ ಭೇಟಿ ನೀಡುವ ಭಕ್ತಾಧಿಗಳಿಗೆ ವಿತರಿಸಲು ತಿರುಪತಿ ಮಾದರಿಯಲ್ಲಿ ಲಡ್ಡುಗಳನ್ನು ತಯಾರಿ ಮಾಡಲಾಗಿದೆ. ಸುಮಾರು 100 ಮಂದಿ ನುರಿತ ಬಾಣಸಿಗರಿಂದ ಲಡ್ಡುಗಳನ್ನು ತಯಾರಿ ಮಾಡಿದ್ದಾರೆ. 200 ಕ್ವಿಂಟಾಲ್ ಸಕ್ಕರೆ, ಕಡಲೆ ಹಿಟ್ಟು, ಬಾದಾಮಿ, ಪಿಸ್ತಾ, ಏಲಕ್ಕಿ, ದ್ರಾಕ್ಷಿ, ಗೋಡಂಬಿ, ತುಪ್ಪ, ಪಚ್ಚ ಕರ್ಪೂರ ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಮಿಶ್ರಣ ಮಾಡಿ ಲಡ್ಡುಗಳನ್ನು ತಯಾರಿಸಲಾಗಿದೆ.
ಇದನ್ನೂ ಓದಿ : ಪ್ರೇಮಿಗಳ ದಿನದಂದು ಗುರುನಂದನ್ ಅಭಿನಯದ ‘ರಾಜು ಜೇಮ್ಸ್ ಬಾಂಡ್’ ಚಿತ್ರ ತೆರೆಗೆ..!
Post Views: 59