ದೇವನಹಳ್ಳಿ : ಬುಲೆಟ್ಗಳು ದೇವನಹಳ್ಳಿ ಜನರ ನಿದ್ದೆಗೆಡಿಸಿದೆ. ಬೆಳಗ್ಗೆಯಾದ್ರೆ ಸಾಕು ಆ ಊರಿನ ಮೇಲೆ ಬುಲೆಟ್ ಮಳೆ ಸುರಿಯುತ್ತದೆ. ಈ ಬುಲೆಟ್ ಮಳೆಯ ವಿರುದ್ಧ ಗ್ರಾಮಸ್ಥರು ಪ್ರತಿಭಟನೆಗೆ ಇಳಿದಿದ್ದಾರೆ.
ದೇವನಹಳ್ಳಿ ಪಟ್ಟಣದ ನೀಲೇರಿ ವಾರ್ಡ್ಗೆ ಬುಲೆಟ್ ಕಿರಿಕ್ ಶುರುವಾಗಿದ್ದು, ಇದು ಪೊಲೀಸ್ ಟ್ರೈನಿಂಗ್ ಸೆಂಟರ್ನಲ್ಲಿ ಬಳಕೆ ಮಾಡ್ತಿರುವ ಬುಲೆಟ್ಗಳಾಗಿದೆ. ಪೋಲಿಸ್ ತರಬೇತಿ ಕೇಂದ್ರ ಆವತಿ ಗ್ರಾಮದ ಬಳಿಯಿದ್ದು, ತರಬೇತಿ ವೇಳೆ ಬಳಸಿದ ಗುಂಡುಗಳು ಹಾರಿ ಬರ್ತಿವೆ. ಮನೆಗಳ ಶೀಟ್ ಮೇಲೆ, ಮನೆ ಮುಂದೆ ನಿಲ್ಲಿಸಿದ ಕಾರ್ ಮೇಲೆ ಬೀಳ್ತಿವೆ.
ಬುಲೆಟ್ಗಳು 2 ಕಿಮೀ ದೂರದ ಊರುಗಳಿಗೆ ಬಂದು ಬೀಳ್ತಿದೆ. ಪೋಲಿಸ್ ಇಲಾಖೆಗೆ ದೂರು ಕೊಟ್ಟರೂ ಸಮಸ್ಯೆ ಬಗೆ ಹರಿದಿಲ್ಲ, ಜಿಲ್ಲಾಡಳಿತ ಕೂಡಾ ನೆರವಿಗೆ ಬಂದಿಲ್ಲ ಎಂದು ಸ್ಥಳೀಯರ ಆಕ್ರೋಶ ಹೊರಹಾಕಿದ್ದಾರೆ. ಪೋಲಿಸ್ ತರಬೇತಿ ಕೇಂದ್ರ ಬೇರೆಡೆ ಶಿಫ್ಟ್ ಮಾಡುವಂತೆ ಗ್ರಾಮಸ್ಥರ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್ : ಆರೋಪಿ ತುಮಕೂರು ಮೂಲಕ ಬಳ್ಳಾರಿಗೆ ಹೋಗಿರೋ ಶಂಕೆ..!