Download Our App

Follow us

Home » ರಾಜ್ಯ » ರಾಜ್ಯದಲ್ಲಿ ಹೆಚ್ಚಾಯ್ತು ಡೆಂಗ್ಯೂ ಆರ್ಭಟ : ಡೆಂಗ್ಯೂ ಲಕ್ಷಣ, ಮುನ್ನೆಚ್ಚರಿಕೆ ಕ್ರಮಗಳು ಇಲ್ಲಿದೆ ನೋಡಿ..!

ರಾಜ್ಯದಲ್ಲಿ ಹೆಚ್ಚಾಯ್ತು ಡೆಂಗ್ಯೂ ಆರ್ಭಟ : ಡೆಂಗ್ಯೂ ಲಕ್ಷಣ, ಮುನ್ನೆಚ್ಚರಿಕೆ ಕ್ರಮಗಳು ಇಲ್ಲಿದೆ ನೋಡಿ..!

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ​ ಡೆಂಗ್ಯೂ ಜ್ವರ ಪ್ರಕರಣಗಳು ಹೆಚ್ಚುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಇನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಡೆಂಗ್ಯೂ ಮೂರು ಪಟ್ಟು ಹೆಚ್ಚಾಗಿದೆ ಎಂದು ಹೇಳಲಾಗಿದೆ.

ಇದುವರೆಗೆ ರಾಜ್ಯದಲ್ಲಿ 53,866 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ. ಈ ಪೈಕಿ 7,165 ಮಂದಿಯಲ್ಲಿ ರೋಗ ದೃಢಪಟ್ಟಿದೆ. ಸದ್ಯ 352 ಸಕ್ರಿಯ ಪ್ರಕರಣಗಳಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ ರಾಜ್ಯದಲ್ಲಿ 2432 ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದವು. ಆದ್ರೆ ಯಾವುದೇ ಸಾವು ಸಂಭವಿಸಿರಲಿಲ್ಲ. ಆದ್ರೆ ಈ ಬಾರಿ 8 ಮಂದಿ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾರೆ.

ಡೆಂಗ್ಯೂ ಮಾರಕ ಜ್ವರಕ್ಕೆ ಮೃತಪಡುವವರ ಸಂಖ್ಯೆ ಕೂಡ ಹೆಚ್ಚಳವಾಗುತ್ತಿರುವುದರಿಂದ ಸಾರ್ವಜನಿಕರು ಡೆಂಗ್ಯೂ ಜ್ವರದ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಡೆಂಗ್ಯೂ ಜ್ವರದ ಲಕ್ಷಣಗಳು, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಡೆಂಗ್ಯೂ ಜ್ವರದ ಲಕ್ಷಣಗಳು :

  • ಇದ್ದಕ್ಕಿದ್ದಂತೆ ತೀವ್ರ ಜ್ವರ
  • ಮೂಲವ್ಯಾಧಿ ಸಮಸ್ಯೆ
  • ಕಣ್ಣುಗಳ ಹಿಂಭಾಗದಿಂದ ನೋವು
  • ವಾಂತಿ, ವಾಕರಿಕೆ
  • ದೇಹ ಮತ್ತು ಕೀಲು ನೋವುಗಳು ರಕ್ತದಲ್ಲಿ ಹೆಚ್ಚಿದ ಹೆಮಟೋಕ್ರಿಟ್ (ಹಿಮೋಗ್ಲೋಬಿನ್).
  • ಅದೇ ಸಮಯದಲ್ಲಿ ಪ್ಲೇಟೈಟ್ಗಳು ವೇಗವಾಗಿ ಕುಸಿಯುತ್ತವೆ.
  • ಹೊಟ್ಟೆ ನೋವು, ಆಯಾಸ
  • ಹೊಟ್ಟೆ ಅಥವಾ ಎದೆಯಲ್ಲಿ ನೀರಿನ ಶೇಖರಣೆ ಹಾಗೂ ನಿಲ್ಲದೆ ವಾಂತಿ
  • ಒಸಡುಗಳಂತಹ ಭಾಗಗಳಿಂದ ರಕ್ತಸ್ರಾವ ಚರ್ಮದ ಮೇಲೆ ಕೆಂಪು ಚುಕ್ಕೆಗಳ ಕಲೆಗಳು ರಕ್ತದೊತ್ತಡದಲ್ಲಿ ಇಳಿಕೆ, ಮೂರ್ಛೆ

ಡೆಂಗ್ಯೂ ಸೊಳ್ಳೆಯಿಂದ ನಿಯಂತ್ರಣ ಹೇಗೆ?

  • ಪ್ರತಿ ದಿನ ಹಳೆಯದಾದ ಟಯರ್‌ಗಳು, ತೆಂಗಿನ ಚಿಪ್ಪು, ಘನ ತ್ಯಾಜ್ಯಗಳಾದ ಪ್ಲಾಸ್ಟಿಕ್‌ ಬಾಟಲ್‌, ಹೊಡೆದು ಹೋದ ಮಡಕೆ ಸೇರಿ ಮಳೆ ನೀರು ನಿಲ್ಲುವ ಎಲ್ಲಾ ವಸ್ತುಗಳನ್ನು ವಿಲೇವಾರಿ ಮಾಡಬೇಕು.
  • ನಾವು ವಾಸಿಸುವ ಮನೆಯ ನೆರೆಹೊರೆಯಲ್ಲಿ ಖಾಲಿ ತೆಂಗಿನಕಾಯಿ ಚಿಪ್ಪು, ಹಳೆಯ ಟಯರ್‌, ಹೂವಿನ ಕುಂಡ, ಪ್ಲಾಸ್ಟಿಕ್‌ ಕವರ್‌ನಂತಹ ವಸ್ತುಗಳಲ್ಲಿ ಹೆಚ್ಚು ದಿನಗಳ ಕಾಲ ನೀರು ನಿಲ್ಲುವುದರಿಂದ ಸೊಳ್ಳೆಗಳ ಸಂತಾನ ವೃದ್ಧಿಯಾಗದಂತೆ ನೋಡಿಕೊಳ್ಳಬೇಕು.
  • ಸೊಳ್ಳೆಗಳ ಲಾರ್ವಾಗಳು ಉತ್ಪತ್ತಿಯಾಗುವ ಲಕ್ಷಣಗಳಿದ್ದಲ್ಲಿ ಸೊಳ್ಳೆಗಳನ್ನು ತಿನ್ನಬಲ್ಲಗಪ್ಪಿ ಪ್ರಭೇದದ ಮೀನು ಮರಿಗಳನ್ನು ನೀರಿನ ತೊಟ್ಟಿ, ಸಂಪ್‌ನಲ್ಲಿ ಬಿಡಬೇಕು.
  • ವಾರಕ್ಕೊಮ್ಮೆ ನಿಮ್ಮ ಮನೆಯ ಸುತ್ತ ಕೀಟನಾಶಕಗಳನ್ನು ಸಿಂಪಡಿಸಿ

ಯಾವ ಜಿಲ್ಲೆಯಲ್ಲಿ ಎಷ್ಟು ಡೆಂಗ್ಯೂ ಪ್ರಕರಣ? ಡೆಂಗ್ಯೂ ಕೇಸ್‌ಗಳು ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚು ಹೆಚ್ಚು ವರದಿಯಾಗುತ್ತಿವೆ. ಸಿಲಿಕಾನ್​ ಸಿಟಿಯಲ್ಲಿ ಈವರೆಗೂ 1,908 ಡೆಂಗ್ಯೂ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಇದು ರಾಜ್ಯದಲ್ಲಿ ಅತಿ ಹೆಚ್ಚು. ಚಿಕ್ಕಮಗಳೂರು ಜಿಲ್ಲೆಯಲ್ಲಿ 521ರಷ್ಟು ಪ್ರಕರಣಗಳು ವರದಿಯಾಗಿವೆ. ಮೈಸೂರಿನಲ್ಲಿ 496 ಪ್ರಕರಣಗಳು, ಹಾವೇರಿಯಲ್ಲಿ 481 ಪ್ರಕರಣ, ಧಾರವಾಡದಲ್ಲಿ 289 ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಚಿತ್ರದುರ್ಗದಲ್ಲಿ ಇದುವರೆಗೆ 275 ಪ್ರಕರಣಗಳು ದಾಖಲಾಗಿವೆ. ಶಿವಮೊಗ್ಗ ಜಿಲ್ಲೆಯಲ್ಲಿ 292, ಮಂಡ್ಯ ಜಿಲ್ಲೆಯಲ್ಲಿ 215, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 263 ಪ್ರಕರಣಗಳೊಂದಿಗೆ ಇತರ ಜಿಲ್ಲೆಗಳಲ್ಲಿ ಡೆಂಗ್ಯೂ ಸೋಂಕುಗಳು ಹೆಚ್ಚಾಗುತ್ತಿವೆ.

ಇದನ್ನೂ ಓದಿ : ನಿಗೂಢವಾಗಿ ನಾಪತ್ತೆಯಾಗಿದ್ದ ಯುವತಿ ಶವವಾಗಿ ಪತ್ತೆ – ಕೊಲೆ ಮಾಡಿ ಆಗುಂಬೆ ಅರಣ್ಯದಲ್ಲಿ ಮೃತದೇಹ ಎಸೆದ ಪ್ರಿಯಕರ..!

 

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here