ಬಾಲಿವುಡ್ನ ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ – ರಣವೀರ್ ಸಿಂಗ್ ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೊನೆಯದಾಗಿ ದೀಪಿಕಾ ಕಲ್ಕಿ 2898 ಎಡಿ ಸಿನಿಮಾದಲ್ಲಿ ನಟಿಸಿ, ಸಿನಿಮಾ ರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ ಹೆರಿಗೆ ಬಗ್ಗೆ ಗಾಳಿಸುದ್ದಿ ಹರಿದಾಡುತ್ತಿದೆ.
ದೀಪಿಕಾ ಡೆಲಿವರಿಗಾಗಿ ಲಂಡನ್ಗೆ ಹೋಗ್ತಾರೆ ಅಂತಾ ಸುದ್ದಿ ಹರಿದಾಡ್ತಿತ್ತು. ಆದ್ರೆ, ಈ ಸುದ್ದಿ ಸುಳ್ಳು, ಸೌತ್ ಬಾಂಬೆಯಲ್ಲೇ ಹೆರಿಗೆ ಮಾಡಿಕೊಳ್ಳುತ್ತಿದ್ದಾರಂತೆ ದೀಪಿಕಾ. ಜೊತೆಗೆ ತಾಯಿತನದ ಕ್ಷಣವನ್ನ ಅನುಭವಿಸಲು ಈಗಿನಿಂದಲೇ ಕಾತುರದಿಂದ ಕಾಯ್ತಿದ್ದು, ಹೆರಿಗೆಗಾಗಿ ಲಂಡನ್ಗೆ ಹೋಗ್ತಿರುವ ಸುದ್ದಿ ಸುಳ್ಳಂತೆ. ಇದೇ ಸೆಪ್ಟಂಬರ್ನಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ ರಣವೀರ್ ಹಾಗೂ ದೀಪಿಕಾ ಜೋಡಿ.
2025ರಲ್ಲಿ ದೀಪಿಕಾ ಪಡುಕೋಣೆ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ. ಸದ್ಯ ದೀಪಿಕಾಗಾಗಿ ಕಲ್ಕಿ 2898 ಎಡಿ ಸಿನಿಮಾದ ಸೀಕ್ವೆಲ್ ಪ್ರಾಜೆಕ್ಟ್ ಕಾಯ್ತಾಯಿದೆ. ಮೆಟರ್ನಿಟಿ ರಜೆ ಮುಗಿಯುತ್ತಿದ್ದಂತೆ ಪ್ರಭಾಸ್, ಅಮಿತಾಬ್ ಬಚ್ಚನ್ ನಟನೆಯ ಸಿನಿಮಾದಲ್ಲಿ ದೀಪಿಕಾ ತೊಡಗಿಸಿಕೊಳ್ಳಲಿದ್ದಾರಂತೆ.
ಇದನ್ನೂ ಓದಿ : ಹೇಮಾ ಕಮಿಟಿ ವರದಿಗೆ ಸಮಂತಾ ಮೆಚ್ಚುಗೆ – ಟಾಲಿವುಡ್ ‘ವಾಯ್ಸ್ ಆಫ್ ವುಮನ್’ ವರದಿಗೆ ಒತ್ತಾಯ..!