ಮಂಡ್ಯ : ಜೆಡಿಎಸ್ MLA ಹೆಚ್ಟಿ ಮಂಜು ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಖುದ್ದು ಕೆ.ಆರ್ ಪೇಟೆ MLA ಹೆಚ್.ಟಿ ಮಂಜು ಅವರೇ ಆಡಿಯೋ ಸಮೇತ ಮಂಡ್ಯ ಎಸ್ಪಿಗೆ ದೂರು ನೀಡಿದ್ದಾರೆ. JDS ಮುಖಂಡ, ಹಾಲಿ ಮನ್ಮುಲ್ ನಿರ್ದೇಶಕ ಕೆ.ರವಿ ವಿರುದ್ಧ ದೂರು ದಾಖಲಿಸಿದ್ದಾರೆ.
ಕೆ.ರವಿ ವಿರುದ್ಧ ಮನ್ಮುಲ್ ಚುನಾವಣೆ ಗೆಲ್ಲಲು ಗೂಂಡಾಗಿರಿ, ಕೊಲೆ ಬೆದರಿಕೆ ಹಾಕಿರೋ ಆರೋಪ ಕೇಳಿ ಬಂದಿದ್ದು, ಶಾಸಕ ಮಂಜು ಬೆಂಬಲಿಗರನ್ನ ಕೆ.ರವಿ ಅವರು ಮನೆಗೆ ಕರೆಸಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಚಾವಡಘಟ್ಟ ಡೈರಿ ಅಧ್ಯಕ್ಷೆ ಜ್ಯೋತಿ ಪತಿ ಮಹೇಶ್, ಕಾರ್ಯದರ್ಶಿ ಚೈತ್ರ ಪತಿ ವಿಜಯ್ ಕುಮಾರ್ ಮುಂದೆ ಕೊಲೆ ಬೆದರಿಕೆ ಹಾಕಲಾಗಿದ್ದು, ಶಾಸಕ, ಶಾಸಕನ ಸಹೋದರ ಹಾಗೂ ಬೆಂಬಲಿಗರಿಗೂ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಶಾಸಕ ಮಂಜು ಬೆಂಬಲಿಗರು ಮೊಬೈಲ್ನಲ್ಲಿ ರವಿ ಬೆದರಿಕೆ ಹಾಕ್ತಿರೋ ಆಡಿಯೋವನ್ನು ರೆಕಾರ್ಡ್ ಮಾಡಿದ್ದು, ಆಡಿಯೋದಲ್ಲಿ ‘ಮಗನೆ ಸುಮ್ಮನೆ ಬಿಡಲ್ಲ, ನಿನ್ನನ್ನ ಕೊಲೆ ಮಾಡ್ತೀನಿ. ಶಾಸಕ ಮಂಜುವನ್ನೂ ಹೊಡೆಸಿ ಹಾಕ್ತೀನಿ ಎಂದು ರವಿ ಆವಾಜ್ ಹಾಕಿದ್ದಾರೆ ಎನ್ನಲಾಗಿದೆ. ಮನ್ಮುಲ್ ನಿರ್ದೇಶಕ ಸ್ಥಾನದ ಚುನಾವಣೆಗೆ ಪ್ರತಿನಿಧಿ ಆಯ್ಕೆ ವಿಚಾರಕ್ಕೆ ಬೆದರಿಕೆ ಹಾಕಲಾಗಿದ್ದು, ಚಾವಡಘಟ್ಟ ಡೈರಿಯಿಂದ ಗಗನ ಎಂಬವರನ್ನು ಆಯ್ಕೆ ಮಾಡುವಂತೆ ರವಿ ಧಮ್ಕಿ ಹಾಕಿದ್ದಾರೆ.
ಇದೀಗ ರವಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಶಾಸಕ ಮಂಜು ಒತ್ತಾಯ ಮಾಡಿದ್ದು, 25 ನಿಮಿಷ 42 ಸೆಕೆಂಡ್ ಆಡಿಯೋ ಸಹಿತ ಶಾಸಕರು ಮಂಡ್ಯ ಎಸ್ಪಿಗೆ ದೂರು ನೀಡಿದ್ದಾರೆ. ಮಂಡ್ಯ ಉಸ್ತುವಾರಿ, ಸಹಕಾರ ಸಚಿವ, ಡಿಸಿ ಸಹಕಾರ ಸಂಘಗಳ ನಿಬಂಧಕರಿಗೂ ದೂರು ನೀಡಲಾಗಿದೆ.
ಇದನ್ನೂ ಓದಿ : ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ ಸಾಬೀತು – ಚಾರ್ಜ್ಶೀಟ್ನಲ್ಲಿ ಸ್ಫೋಟಕ ಸಂಗತಿಗಳು ಬಯಲು..!