ನೆಲಮಂಗಲ : ಬೆಳ್ಳಂಬೆಳಗ್ಗೆ ರಣಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನೆಲಮಂಗಲದ ರಾಷ್ಟ್ರೀಯ ಹೆದ್ದಾರಿ 48ರ ಎಡೇಹಳ್ಳಿ ಬಳಿ ನಡೆದಿದೆ. ವೀರಣ್ಣ ಎಂಬುವವರು ಮೃತ ದುರ್ದೈವಿ.
ಪ್ಯಾಸೆಂಜರ್ ಆಟೋ ಹಾಗೂ ಕಾರಿನ ಮಧ್ಯೆ ಅಪಘಾತ ಸಂಭವಿಸಿದ್ದು, ಭೀಕರ ಅಪಘಾತಕ್ಕೆ ಪ್ರಯಾಣಿಕರ ದೇಹ ತುಂಡು ತುಂಡಾಗಿ ರಕ್ತ ಸಿಕ್ತವಾಗಿ ಬಿದ್ದಿತ್ತು. ದುರ್ಘಟನೆಯಲ್ಲಿ 10 ಜನರು ಗಂಭೀರ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ನೆಲಮಂಗಲ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ : ಸಂಜು ವೆಡ್ಸ್ ಗೀತಾ-2 ಸಿನಿಮಾಗೆ ಕಿಚ್ಚ ಸಾಥ್ – ಮತ್ತೊಂದು ಹಾಡು ರಿಲೀಸ್!
Post Views: 1,608