ಉತ್ತರ ಪ್ರದೇಶ : ಕೆಲ ತಿಂಗಳಿಂದ ಆರೋಗ್ಯ ಇಲಾಖೆ ಆಹಾರದ ಬಗ್ಗೆ ಸಾಕಷ್ಟು ಸುತ್ತೋಲೆಗಳನ್ನು ಹೊರಡಿಸುತ್ತಿದೆ. ಆದರೆ ಇದರ ಬೆನ್ನಲ್ಲೇ ಗರಿಗರಿಯಾದ ಸಮೋಸದಲ್ಲಿ ಸತ್ತ ಕಪ್ಪೆ ಪತ್ತೆಯಾದ ಘಟನೆಯೊಂದು ನಡೆದಿದ್ದು, ಸದ್ಯ ಈ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಗ್ರಾಹಕನೊಬ್ಬ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಅಂಗಡಿಯೊಂದರಲ್ಲಿ ಸಮೋಸಾ ಖರೀದಿಸಿದ್ದಾನೆ. ಈ ವೇಳೆ ಅದನ್ನು ತಿಂದಾಗ ಸಮೋಸದಲ್ಲಿ ಕಪ್ಪು ಬಣ್ಣದ ವಸ್ತುವೊಂದು ಪತ್ತೆಯಾಗಿದೆ. ಬಳಿಕ ಅದನ್ನು ಸರಿಯಾಗಿ ಗಮನಿಸಿದಾಗ ಸತ್ತ ಕಪ್ಪೆ ಎಂಬುದು ಗೊತ್ತಾಗಿದೆ.
ಈ ಘಟನೆಯ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಗೆ ಗ್ರಾಹಕ ಕರೆ ಮಾಡಿ ದೂರು ನೀಡಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಈಗಾಗಲೇ 90 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಹೊರಗಡೆ ತಿನ್ನುವಾಗ ಜಾಗ್ರತೆ ವಹಿಸಿ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ದರ್ಶನ್ ಭೇಟಿಗೆ ಬಳ್ಳಾರಿ ಜೈಲಿಗೆ ಬಂದ ಪತ್ನಿ ವಿಜಯಲಕ್ಷ್ಮಿ..!