Download Our App

Follow us

Home » ರಾಜಕೀಯ » ಪೆನ್​ಡ್ರೈವ್​​​ ಲೀಕ್​ ಮಾಡಿಸಿರೋದೇ ನಿಮ್ಮ ಡಿಸಿಎಂ, ಅವರನ್ನು ವಜಾ ಮಾಡಿ – ಹೆಚ್​.ಡಿ ಕುಮಾರಸ್ವಾಮಿ ಕಿಡಿ..!

ಪೆನ್​ಡ್ರೈವ್​​​ ಲೀಕ್​ ಮಾಡಿಸಿರೋದೇ ನಿಮ್ಮ ಡಿಸಿಎಂ, ಅವರನ್ನು ವಜಾ ಮಾಡಿ – ಹೆಚ್​.ಡಿ ಕುಮಾರಸ್ವಾಮಿ ಕಿಡಿ..!

ಬೆಂಗಳೂರು : ಮುಖ್ಯಮಂತ್ರಿಗಳೇ ಡಿಸಿಎಂ ಡಿಕೆಶಿಯನ್ನು ವಜಾ ಮಾಡಿ, ಪೆನ್​ಡ್ರೈವ್​​​ ಲೀಕ್​ ಮಾಡಿಸಿರೋದೇ ನಿಮ್ಮ ಡಿಸಿಎಂ. ನಿಮಗೆ ನೈತಿಕತೆ ಇದ್ದರೆ ಡಿಕೆಶಿಯನ್ನು ಸಂಪುಟದಿಂದ ಕೈಬಿಡಿ ಎಂದು ಮಾಜಿ ಸಿಎಂ ಹೆಚ್​ಡಿಕೆ ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಹೆಚ್​ಡಿ ಕುಮಾರಸ್ವಾಮಿ ಮಾತನಾಡಿ, ಕಾರ್ತಿಕ್​ ಗೌಡನನ್ನು ವಿದೇಶಕ್ಕೆ ಕಳಿಸಿದ್ದು ಯಾರು..? ಬೆಂಗಳೂರಿನಲ್ಲಿ ದೂರು ಬರೆಸಿಕೊಂಡಿದ್ದು ಯಾರು..? ಸಂತ್ರಸ್ತೆಯರಿಗೆ ದೂರು ಕೊಡಲು ಹಣ ಕೊಟ್ಟವರು ಯಾರು..? ಮಹಾನ್​ ನಾಯಕನ ಕೈವಾಡ ಇಲ್ಲದೇ ಇದೆಲ್ಲಾ ಆಗಿಲ್ಲ..? ಈ ಹಿಂದೆ ಜಾರಕಿಹೊಳಿ ಕೇಸ್​ನಲ್ಲೂ ಇದೇ ನಾಯಕ ಇದ್ರು. ನಮ್ಮ ಕುಟುಂಬ ಸರ್ವನಾಶ ಮಾಡಲು ನಿಮ್ಮ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ಡಿಕೆಶಿ ವಿರುದ್ಧ ಕಿಡಿಕಾರಿದ್ದಾರೆ.

ಇದೇ ವೇಳೆ ಮಾತನಾಡಿ, SIT ತನಿಖೆ ಮೇಲೆ ನನಗೆ ನಂಬಿಕೆ ಇಲ್ಲ, CBI ತನಿಖೆಗೆ ಕೊಡಲು ನಿಮಗೂ ಮನಸ್ಸಿಲ್ಲ. ಪೆನ್​​ಡ್ರೈವ್​​ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ, ಸುಪ್ರೀಂಕೋರ್ಟ್​ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಿ. SIT ಕೇವಲ ಪ್ರಜ್ವಲ್​​​, ಹೆಚ್​.ಡಿ.ರೇವಣ್ಣ ಕೇಸ್ ತನಿಖೆ ಮಾಡ್ತಿದೆಯಾ..? ಪೆನ್​ಡ್ರೈವ್​​ ಲೀಕ್​ ಮಾಡಿದವರ ವಿರುದ್ಧ ಯಾಕೆ ತನಿಖೆ ಮಾಡ್ತಿಲ್ಲ..?ಹಾಸನದಲ್ಲಿ ನವೀನ್​ಗೌಡ ಸೇರಿ ಐವರು ಮೇಲೆ ದೂರು ದಾಖಲಾಗಿದೆ. ಆ ಐವರ ಕೇಸನ್ನು ಯಾಕೆ SITಗೆ ವರ್ಗಾವಣೆ ಮಾಡಿಲ್ಲ, ಕಾರ್ತಿಕ್​​ಗೌಡ ಎಲ್ಲಿದ್ದಾನೆ..? SIT ಕಾರ್ತಿಕ್​​ನನ್ನು ಯಾಕೆ ಅರೆಸ್ಟ್​ ಮಾಡಿಲ್ಲ ಎಂದು ಹೆಚ್​ಡಿಕೆ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ಹಾಗೆಯೇ, ಪೆನ್​​​ಡ್ರೈವ್​​ ಬಗ್ಗೆ ನನಗೆ ಪ್ರಜ್ವಲ್​​ಗೆ ಗೊತ್ತಿದ್ರೆ ಟಿಕೆಟ್​ ಕೊಡ್ತಿರಲಿಲ್ಲ, ದೇವೇಗೌಡರೇ ಹೇಳಿದ್ರೂ ಹಾಸನದಿಂದ ನಿಲ್ಲಿಸುತ್ತಿರಲಿಲ್ಲ. ಪೆನ್​ಡ್ರೈವ್​​​​​​ ನಾನು ನೋಡಿಲ್ಲ. ನೋಡೋ ಆಸಕ್ತಿಯೂ ಇಲ್ಲ, ಈ ಸರ್ಕಾರಕ್ಕೆ ನಮ್ಮ ಪೋಲ್​ ಏಜೆಂಟ್​ ದೂರು ಕೊಟ್ಟಿರಲಿಲ್ಲವೇ..? ಆಗಲೇ ಯಾಕೆ ನವೀನ್​ಗೌಡ ಸೇರಿ ಐವರನ್ನು ಅರೆಸ್ಟ್ ಮಾಡಲಿಲ್ಲ. ಈ ಸರ್ಕಾರಕ್ಕೆ ಸಂತ್ರಸ್ತೆಯರ ರಕ್ಷಣೆ ಬೇಕಾಗಿರಲಿಲ್ಲ, ದೇವೇಗೌಡರ ಕುಟುಂಬವನ್ನು ಮುಗಿಸುವ ಹುನ್ನಾರ ಇತ್ತು..? ದೇವರಾಜೇಗೌಡ ನನಗೆ ಪೆನ್​ಡ್ರೈವ್​​ ತಂದು ಕೊಟ್ಟಿಲ್ಲ. ನನಗೆ ಪೆನ್​ಡ್ರೈವ್​​ ಬಗ್ಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಪೆನ್​​ಡ್ರೈವ್ ಕೇಸ್ : ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಜೆಡಿಎಸ್ ಪ್ರತಿಭಟನೆ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಲ್ಲಿ ಕಾರು-ಆಟೋ ನಡುವೆ ಭೀಕರ ಅಪಘಾತ – ಆಟೋ ಸವಾರ ದುರ್ಮರಣ..!

ಬೆಂಗಳೂರು : ನಗರದಲ್ಲಿ ತಡರಾತ್ರಿ ಕಾರು ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆಟೋ ಸವಾರ ಸಾವನ್ನಪಿರುವ ಘಟನೆ ಜ್ಞಾನಭಾರತಿಯ ಮುದ್ದಿನಪಾಳ್ಯದಲ್ಲಿ ನಡೆದಿದೆ. ಕಿರಣ್ 32 ವರ್ಷ ಅಪಘಾತದಲ್ಲಿ

Live Cricket

Add Your Heading Text Here