ನವದೆಹಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪ ಎದುರಿಸುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್ಗೆ ಎಲೆಕ್ಷನ್ ಹೊತ್ತಲ್ಲೇ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ (ED) 120 ಬಿ ಅಡಿ ದಾಖಲಿಸಿದ್ದ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್ ಇದ್ದ ಪೀಠ ರದ್ದುಗೊಳಿಸಿ ಆದೇಶಿಸಿದೆ. ಇದರಿಂದಾಗಿ ಇದೀಗ ಡಿಕೆ ಶಿವಕುಮಾರ್ ಜಾರಿ ನಿರ್ದೇಶನಾಲಯದ ತನಿಖೆಯಿಂದ ನಿರಾಳರಾಗುವಂತಾಗಿದೆ.
ಪ್ರಕರಣ ರದ್ದು ಮಾಡಲು ನಿರಾಕರಿಸಿದ್ದ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದ್ದು, ಈ ಪ್ರಕರಣದಲ್ಲಿ ಇಡಿ- ಡಿಕೆಶಿಯನ್ನು ಬಂಧಿಸಿತ್ತು. ಡಿಕೆಶಿ ಇದೇ ಪ್ರಕರಣದಲ್ಲಿ 45 ದಿನ ಜೈಲಿನಲ್ಲಿದ್ದರು. ಸದ್ಯ ಡಿಕೆಶಿಗೆ 2018ರ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಿಗ್ ರಿಲೀಫ್ ಸಿಕ್ಕಿದೆ. PMLA ಪ್ರಕರಣದ ಅಡಿಗೆ ಈ ಕೇಸ್ ಬರಲ್ಲ. ಕ್ರಿಮಿನಲ್ ಸಂಚಿನ ಆರೋಪದಡಿ ಈ ಪ್ರಕರಣ ಬರಲ್ಲ ಎಂದು ಡಿಸಿಎಂ ಡಿಕೆಶಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಅಕ್ರಮ ಹಣ ವರ್ಗಾವಣೆ ವ್ಯಾಪ್ತಿಗೆ ಇದು ಬರಲ್ಲ ಎಂದು ಸುಪ್ರೀಂಕೋರ್ಟ್ ಆದೇಶದಲ್ಲಿ ನ್ಯಾಯಮೂರ್ತಿಗಳ ಅಭಿಪ್ರಾಯವಾಗಿದೆ.
ಸುಪ್ರೀಂ ಕೋರ್ಟ್ ನಿಂದ ರಿಲೀಫ್ ವಿಚಾರ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಇಲ್ಲಿಂದನೇ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರಿಗೆ ಸಾಷ್ಟಾಂಗ ನಮಸ್ಕಾರ ಮಾಡ್ತೀನಿ. ನನ್ಮ ಮೇಲಿನ ನೋಟಿಸ್, ಕ್ರಮ ತಪ್ಪು ಎಂದು ಸಾಬೀತು ಆಗಿದೆ. ನನ್ನ ಕಷ್ಟದ ಜೀವನದಲ್ಲಿ ಇವತ್ತಿನ ದಿನ ನನಗೆ ಅತ್ಯಂತ ಸಂತೋಷ ದಿನವಾಗಿದೆ.
ನನ್ನ ವಕೀಲರು ಎಲ್ಲರು ಮಾಹಿತಿ ಕಳುಹಿಸಿದ್ದಾರೆ. ಸುಪ್ರೀಂ ಕೋರ್ಟಿನ ತೀರ್ಪಿಗೂ ಅಫೀಲು ಹಾಕೋಕೆ ಪ್ರಯತ್ನ ನಡೆಯುತ್ತಿದೆಯಂತೆ. ನನ್ನ ಮಾರ್ಗ ಯಾವತ್ತಿಗೂ ಕಷ್ಟ ಅನ್ನಿಸಿಲ್ಲ. ಜೈಲಿಗೆ ಹೋದಾಗಲೂ ನಾನು ಆತ್ಮವಿಶ್ವಾಸದಿಂದ ಹೋದೆ. ಎಷ್ಟು ಅವ್ರು ನನಗೆ ತೊಂದರೆ ಕೊಡ್ತಾರೋ ಅಷ್ಟು ನಾನು ರಾಜಕೀಯ ಬಲವಾಗಿ ಬೆಳೆಯತ್ತೇನೆ. ನನ್ನ ಸುತ್ತಮುತ್ತಲಿನವರೆಗೂ ಹರೆಸ್ಮೆಂಟ್ ನಡೀತಿದೆ. ಕೊಡಲಿ, ಅವರಿಗೆಲ್ಲರೂ ಮುಂದೆ ಉತ್ತರ ಕೊಡ್ತೀನಿ. ನನಗೆ ಯಾರು ವಿರೋಧಿಗಳು ಇಲ್ಲ. ಎಲ್ಲ ಪ್ರಕೃತಿ ನಿಯಮ ಅಷ್ಟೇ ಎಂದು ಡಿಕೆಶಿ ಹೇಳಿದ್ದಾರೆ.
ಇದನ್ನೂ ಓದಿ : ಪಾಕ್ ಜಿಂದಾಬಾದ್ ಕೇಸ್ನಲ್ಲಿ ಮೂವರು ಅರೆಸ್ಟ್ : ರಹಸ್ಯ ಸಭೆ ನಡೆಸಿದ ಕಾಂಗ್ರೆಸ್ ನಾಯಕರು..!