Download Our App

Follow us

Home » Uncategorized » ದಾವಣಗೆರೆ ಕಲ್ಲು ತೂರಾಟ ಪ್ರಕರಣ​ – 20ಕ್ಕೂ ಹೆಚ್ಚು ಮಂದಿ ಅರೆಸ್ಟ್..!

ದಾವಣಗೆರೆ ಕಲ್ಲು ತೂರಾಟ ಪ್ರಕರಣ​ – 20ಕ್ಕೂ ಹೆಚ್ಚು ಮಂದಿ ಅರೆಸ್ಟ್..!

ದಾವಣಗೆರೆ : ದಾವಣಗೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 20ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಿಸಿಟಿವಿ  ದೃಶ್ಯಗಳನ್ನು ಆಧರಿಸಿ ಬೇತೂರು ಹಾಗೂ ಆಜಾದ್ ನಗರದ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ಮಧ್ಯರಾತ್ರಿ ಸುಮಾರಿಗೆ ನಡೆದಿದ್ದ ಕಲ್ಲು ತೂರಾಟಕ್ಕೆ ಸಂಬಂಧ ದಾವಣಗೆರೆ RMC ಯಾರ್ಡ್ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಾಗಿತ್ತು. ಶಿವ ಪೆಟ್ರೋಲ್ ಬಂಕ್ ನಿವಾಸಿ ಅಜಯ್​ ಎಂಬುವವರು ದೂರು ನೀಡಿದ್ದರು. ನಿನ್ನೆ ರಾತ್ರಿ 7.30ರ ಸುಮಾರಿಗೆ 15-20 ಜನರ ಗುಂಪಿನಿಂದ ಹಲ್ಲೆ ಮಾಡಿದ್ದರು. ಗುಂಪು ಕಟ್ಟಿಕೊಂಡು ಕೋಲು, ಕಲ್ಲು ಹಿಡಿದು ದಾಳಿ ನಡೆಸಿದ್ದಾರೆ. ಪುಂಡರು
ಮನೆ ಮುಂದೆ ಇದ್ದ ಸ್ವಿಪ್ಟ್ ಕಾರು ಜಖಂಗೊಳಿಸಿದ್ದಾರೆ ಎಂದು ದೂರು ನೀಡಿದ್ದರು. ಮತ್ತೊಂದೆಡೆ ಮಧ್ಯರಾತ್ರಿ ಸುಮಾರಿಗೆ ಕಿಡಿಗೇಡಿಗಳು ಕಲ್ಲು ತೂರಿದ್ದರು. ಕಲ್ಲು ತೂರಾಟದಲ್ಲಿ ಇಬ್ಬರು ಪೊಲೀಸರಿಗೆ ಗಾಯವಾಗಿತ್ತು.

ಇನ್ನು, ಒಂದು ಸಮುದಾಯದ ಮನೆ, ವಾಹನಗಳ ಮೇಲೆ ಕಲ್ಲು ತೂರಿ ಕೆಲವರು ಕ್ರೌರ್ಯ ಮೆರೆದಿದ್ದಾರೆ. ಹಳೆ ದಾವಣಗೆರೆಯ ಆನೆಕೊಂಡ ಪೆಟ್ರೋಲ್ ಬಂಕ್ ಹಿಂಬಾಗ ಕಲ್ಲೂ ತೂರಾಟ ನಡೆದಿದೆ. ಅನ್ಯ ಸಮುದಾಯದ ಯುವಕರು ಮನೆ, ವಾಹನಗಳ ಮೇಲೆ ಕಲ್ಲು ತೂರಿದ್ದರಿಂದ 10ಕ್ಕೂ ಅಧಿಕ ಮನೆ, 8ಕ್ಕೂಹೆಚ್ಚು ವಾಹನ ಜಖಂ ಆಗಿವೆ.

ತಮ್ಮ ಮನೆಗಳ ಮೇಲೆ ಕಲ್ಲು ತೂರಿದ್ದಕ್ಕೆ ಒಂದು ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ. ತಮಗೆ ನ್ಯಾಯ ಕೊಡಿಸುವಂತೆ ಎಸ್ಪಿ ಉಮಾ ಪ್ರಶಾಂತ್​ ಮುಂದೆ ಅಳಲು ತೋಡಿಕೊಂಡಿದೆ. ಬಿಗುವಿನ ವಾತಾವರಣ ನಿರ್ಮಾಣ ಆಗಿದ್ದರಿಂದ ಬೇತೂರ್ ವೃತ್ತ, ಅರಳಿಮರ ವೃತ್ತ, ಎನ್ಆರ್ ರಸ್ತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಪೋಲಿಸರು ಅಂಗಡಿ‌ ಮುಗ್ಗಟ್ಟುಗಳನ್ನು ಮುಚ್ಚಿಸಿದ್ದಾರೆ‌. ಸದ್ಯ ಪಶ್ಚಿಮ ವಲಯ IGP ತ್ಯಾಗರಾಜನ್​​​, SP ಉಮಾ ಪ್ರಶಾಂತ್​​​ , ಹೆಚ್ಚುವರಿ ಎಸ್​ಪಿ, ಡಿವೈಎಸ್​ಪಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ಇದನ್ನೂ ಓದಿ : ರೇಪ್​​​​​ ಕೇಸ್​ನಲ್ಲಿ ಮಾಜಿ ಮಂತ್ರಿ ಮುನಿರತ್ನ ಅರೆಸ್ಟ್..!

Leave a Comment

DG Ad

RELATED LATEST NEWS

Top Headlines

ಮುನಿರತ್ನ ಹನಿ ಗ್ಯಾಂಗ್​​ನ ರಿಂಗ್​​​ ಮಾಸ್ಟರ್ ಇವನೇ – FIRನಲ್ಲಿ ಗನ್​ಮ್ಯಾನ್ ವಿಜಯ್​​ಕುಮಾರ್​ ಕಾಮಕಾಂಡ ಬಯಲು..!

ಬೆಂಗಳೂರು : ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಕೇಸ್​ನಲ್ಲಿ ಮುನಿರತ್ನಗೆ  ಕೋರ್ಟ್​ ಜಾಮೀನು ನೀಡಿತ್ತು. ಆದರೆ ನಿನ್ನೆ ರಾತ್ರಿಯೇ ಅತ್ಯಾಚಾರ ಕೇಸ್​ನಲ್ಲಿ ಬಿಜೆಪಿ ಶಾಸಕ ಮುನಿರತ್ನರನ್ನು ಕಗ್ಗಲೀಪುರ

Live Cricket

Add Your Heading Text Here