Download Our App

Follow us

Home » ಅಪರಾಧ » ನಟ ದರ್ಶನ್​​​ಗೆ ಜೈಲೂಟವೇ ಫಿಕ್ಸ್​​ – ದರ್ಶನ್​​​ ಪರ ವಕೀಲರಿಂದ ಅರ್ಜಿ ವಾಪಸ್​​​ಗೆ ನಿರ್ಧಾರ..!

ನಟ ದರ್ಶನ್​​​ಗೆ ಜೈಲೂಟವೇ ಫಿಕ್ಸ್​​ – ದರ್ಶನ್​​​ ಪರ ವಕೀಲರಿಂದ ಅರ್ಜಿ ವಾಪಸ್​​​ಗೆ ನಿರ್ಧಾರ..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್​ ಅವರು ಮನೆಯೂಟ ಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್​ನಲ್ಲಿ ಈ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ನಟ ದರ್ಶನ್ ಪರ ವಕೀಲರು ವಾಪಸ್ ಪಡೆಯಲು ನಿರ್ಧರಿಸಿದ್ದಾರೆ.

ಅರ್ಜಿ ವಾಪಸ್​ ಪಡೆಯೋದಾಗಿ ದರ್ಶನ್ ಪರ ವಕೀಲರು ಹೈಕೋರ್ಟ್​ಗೆ ಮೆಮೋ ಸಲ್ಲಿಸಿದ್ದಾರೆ. ಈಗಾಗ್ಲೇ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆಯಾಗಿತ್ತು, ನಂತರ ದರ್ಶನ್ ಮನೆಯೂಟ ಅರ್ಜಿಯನ್ನು ಹೈಕೋರ್ಟ್ ಮಾಡಿ,​ ಮ್ಯಾಸಿಸ್ಟ್ರೇಟ್​​​​ ಕೋರ್ಟ್​ಗೆ ಹೋಗುವಂತೆ ಸೂಚಿಸಿತ್ತು. ಈಗ ಅದೇ ಅರ್ಜಿಯನ್ನು ವಾಪಸ್​​ ಪಡೆಯಲು ದರ್ಶನ್​ ಪರ ವಕೀಲ ನಿರ್ಧರಿಸಿದ್ದಾರೆ. ಸದ್ಯಕ್ಕೆ ನಟ ದರ್ಶನ್​ಗೆ ಜೈಲೂಟವೇ ಗತಿ ಆಗಿದೆ.

ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ ಹಲವು ದಿನಗಳೇ ಕಳೆದು ಹೋಗಿದೆ. ಜೈಲು ಊಟ ಒಗ್ಗುತ್ತಿಲ್ಲ, ನೆಲದ ಮೇಲೆ ನಿದ್ದೆ ಬರ್ತಿಲ್ಲ ಎಂದು ಮನೆಯವರ ಮುಂದೆ ಗೋಳು ತೋಡಿದ್ದರು. ಬಳಿಕ ದರ್ಶನ್​ ಪರ ವಕೀಲರು ಮನೆಯೂಟಕ್ಕಾಗಿ ಅರ್ಜಿ ಸಲ್ಲಿಸಿದ್ರು. ಇದೀಗ ಅರ್ಜಿಯನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ : ‘ವಿಡಮುಯಾರ್ಚಿ’ಯಲ್ಲಿ ಅರ್ಜುನ್ ಸರ್ಜಾ ಲುಕ್ ರಿಲೀಸ್ – ಸ್ಟೈಲೀಶ್ ಅವತಾರದಲ್ಲಿ ಆಕ್ಷನ್ ಕಿಂಗ್..!

Leave a Comment

DG Ad

RELATED LATEST NEWS

Top Headlines

ಶಕ್ತಿ ಯೋಜನೆ ಪರಿಷ್ಕರಣೆ ಮಾಡುವ ಪ್ರಶ್ನೆ ಇಲ್ಲವೇ ಇಲ್ಲ – ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ..!

ಬೆಂಗಳೂರು : ರಾಜ್ಯದಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿರುವ ರಾಜ್ಯ ಸರ್ಕಾರದ ಶಕ್ತಿ ಯೋಜನೆ ಸ್ಥಗಿತವಾಗುತ್ತದೆಯೇ ಎಂಬ ಸುದ್ದಿಗಳು ಹರಿದಾಡುತ್ತಿವೆ, ಇದರ ಬೆನ್ನಲ್ಲಿಯೇ ಸಿಎಂ ಸಿದ್ದರಾಮಯ್ಯ

Live Cricket

Add Your Heading Text Here