ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದ ನಟ ದರ್ಶನ್ ಮೆಡಿಕಲ್ ಗ್ರೌಂಡ್ಸ್ನಲ್ಲಿ ಮಧ್ಯಂತರ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ನಟನಿಗೆ ಕೆಂಗೇರಿ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರ ನಡುವೆ ಆರೋಪಿ ವಿನಯ್ ಮೊಬೈಲ್ನಲ್ಲಿ ಪತ್ತೆಯಾಗಿದ್ದ ಫೋಟೋ ದರ್ಶನ್ಗೆ ಟರ್ನಿಂಗ್ ಪಾಯಿಂಟ್ ಕೊಡುತ್ತಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಪಟ್ಟಣಗೆರೆ ಶೆಡ್‌ಗೆ ರೇಣುಕಾಸ್ವಾಮಿಯನ್ನು ಕರೆತಂದ ಆರೋಪಿಗಳು ಅಕ್ಷರಶಃ ರಾಕ್ಷಸರಂತೆ ಹಲ್ಲೆ ಮಾಡಿದ್ದರು. ಆರೋಪಿ ವಿನಯ್ ಮೊಬೈಲ್ ರಿಟ್ರೀವ್ ಮಾಡಿದ್ದ ವೇಳೆ ಗಾಯಗೊಂಡ ರೇಣುಕಾಸ್ವಾಮಿ ತನ್ನ ಬಿಟ್ಟು ಬಿಡುವಂತೆ ಅಂಗಲಾಚುತ್ತಿದ್ದರು. ತಪ್ಪಾಯ್ತು ನನ್ನ ಬಿಡಿ ಅಂತಾ ಅಳುತ್ತಾ ಬೇಡಿಕೊಂಡ ಪೋಟೋ ಸಿಕ್ಕಿತ್ತು.
ರೇಣುಕಾಸ್ವಾಮಿ ಅಳುತ್ತಾ ಕೈ ಮುಗಿಯುತ್ತಿದ್ದ ಫೋಟೋದ ಬಗ್ಗೆ ದರ್ಶನ್ ಪರ ವಕೀಲರು ಅನುಮಾನ ವ್ಯಕ್ತಪಡಿಸಿದ್ದರು. ಹೀಗಾಗಿ ಕೋರ್ಟ್ ಪರ್ಮಿಷನ್ ತಗೊಂಡು ಫೋಟೋ ಮತ್ತೆ FSLಗೆ ಕಳಿಸಲಾಗಿತ್ತು. ಅದು AI ಜನರೇಟೆಡ್ ಫೋಟೋನಾ ಅಲ್ವಾ ಅನ್ನೋ ಬಗ್ಗೆ ಪರೀಕ್ಷೆ ನಡೆಸಲು FSLಗೆ ಕಳುಹಿಸಲಾಗಿತ್ತು.
ಆದ್ರೆ ಫೋಟೋ ಕಳಿಸಿ ಎರಡು ತಿಂಗಳಾದ್ರೂ FSL ರಿಪೋರ್ಟ್ ಬಂದಿಲ್ಲ. ಇನ್ನು ಫೋಟೋ ಸಂಬಂಧ FSL ರಿಪೋರ್ಟ್ಗಾಗಿ ಪೊಲೀಸರು ಕಾಯುತ್ತಿದ್ದಾರೆ. ಒಂದ್ವೇಳೆ ರಿಪೋರ್ಟ್ನಲ್ಲಿ ಅದು AI ಜನರೇಟೆಡ್ ಫೋಟೋ ಅಂತ ಬಂದ್ರೆ ಕೇಸ್ಗೆ ಮೇಜರ್ ಟ್ವಿಸ್ಟ್ ಸಿಗಲಿದೆ. ಒರಿಜಿನಲ್ ಫೋಟೋ ಅಂತ ಬಂದ್ರೆ ದರ್ಶನ್ಗೆ ಬಹುತೇಕ ಸಂಕಷ್ಟ ಫಿಕ್ಸ್ ಆಗಿಲಿದೆ. ಸದ್ಯ FSL ರಿಪೋರ್ಟ್ಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಇದನ್ನೂ ಓದಿ : ಬಗೆದಷ್ಟೂ ಬಯಲಾಗ್ತಿದೆ ಮುಡಾ ಕರ್ಮಕಾಂಡ.. ಹಣದಾಸೆಗೆ ಸತ್ತ ವ್ಯಕ್ತಿಯನ್ನೇ ಬದುಕಿಸಿದ ಅಧಿಕಾರಿಗಳ ಅಕ್ರಮ ಬಟಾಬಯಲು..!