ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಜೈಲಿನಲ್ಲಿ ತೀವ್ರ ಬೆನ್ನು ನೋವಿನಿಂದ ನರಳುತ್ತಿದ್ದ ದರ್ಶನ್ ಚಿಕಿತ್ಸೆ ಪಡೆಯಲೆಂದು ಕುಟುಂಬಸ್ಥರ ಜೊತೆ ಬೆಂಗಳೂರಿನ ಕೆಂಗೇರಿಯಲ್ಲಿರುವ ಬಿಜಿಎಸ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಇದೀಗ ಕೆಂಗೇರಿಯಲ್ಲಿರುವ ಬಿಜಿಎಸ್ ಆಸ್ಪತ್ರೆ ಬಂದ ದರ್ಶನ್ಗೆ ಟೆಸ್ಟಿಂಗ್ ಶುರುವಾಗಿದೆ. ಬಿಪಿ, ಶುಗರ್, ಇಜಿಸಿ ಟೆಸ್ಟ್ ಮಾಡಿದ ತಜ್ಞ ವೈದ್ಯರು, ಕೆಲವೇ ಕ್ಷಣಗಳಲ್ಲಿ ದರ್ಶನ್ನನ್ನು MRI ಸ್ಕ್ಯಾನಿಂಗ್ಗೆ ಒಳಪಡಿಸಲಿದ್ದಾರೆ.
ಇನ್ನು ದರ್ಶನ್ಗಾಗಿ ಆಸ್ಪತ್ರೆಯಲ್ಲಿ ಸೂಟ್ ರೂಮ್ ಬುಕ್ ಮಾಡಲಾಗಿದೆ. ಸ್ಪೆಷಲ್ ವಾರ್ಡ್ಗಿಂತಲೂ ಹೈಟೆಕ್ ಆಗಿರೋ ಸೂಟ್ ರೂಮ್ ಬುಕ್ ಮಾಡಲಾಗಿದ್ದು, ಫ್ಯಾಮಿಲಿ ಸಹಿತ ಉಳಿದುಕೊಳ್ಳಬಹುದಾದ ಸಪರೇಟ್ ಸೂಟ್ ಇದಾಗಿದೆ.
ಇದನ್ನೂ ಓದಿ : ಬೆನ್ನುನೋವಿನ ಚಿಕಿತ್ಸೆಗಾಗಿ BGS ಆಸ್ಪತ್ರೆಗೆ ಬಂದ ದರ್ಶನ್ – ಆಸ್ಪತ್ರೆ ಸುತ್ತಲೂ ಬಿಗಿ ಭದ್ರತೆ..!
Post Views: 89