Download Our App

Follow us

Home » Uncategorized » ಕೆಳಗೆ ಕುಳಿತು ಕಾಟೇರ ಚಿತ್ರ ನೋಡಿದ ದರ್ಶನ್..

ಕೆಳಗೆ ಕುಳಿತು ಕಾಟೇರ ಚಿತ್ರ ನೋಡಿದ ದರ್ಶನ್..

ಬಾಕ್ಸಾಫೀಸ್​ನಲ್ಲಿ ಮುನ್ನುಗ್ಗುತ್ತಿರುವ ಕಾಟೇರ ಸಿನಿಮಾ ಸಕ್ಸಸ್​ ಮೀಟ್​ ಬೆನ್ನಲ್ಲೇ ನಿನ್ನೆ ಸೆಲಬ್ರೆಟಿ ಶೋ ನಡೆದಿದೆ. ಕಳೆದ ರಾತ್ರಿ ಒರಾಯನ್ ಮಾಲ್​ನಲ್ಲಿ ಸಿನಿಮಾ ರಂಗದ ಗಣ್ಯರಿಗಾಗಿ ವಿಶೇಷ ಶೋ ಆಯೋಜಿಸಲಾಗಿತ್ತು.

ದರ್ಶನ್​ರ ‘ಕಾಟೇರ’ ಸಿನಿಮಾ ನೋಡಲು ಹಲವು ಗಣ್ಯರು ಆಗಮಿಸಿದ್ದರು. ಈ ವೇಳೆ ನಟ ದರ್ಶನ್ ಅವರು ನೆಲದ ಮೇಲೆ ಕುಳಿತು ಕಾಟೇರ ಸಿನಿಮಾ ನೋಡಿದ್ದಾರೆ.

Darshan Thoogudeepa: ಜನಸಾಮಾನ್ಯರಂತೆ ಮೆಟ್ಟಿಲ ಮೇಲೆ ಕುಳಿತು ‘ಕಾಟೇರ’ ವೀಕ್ಷಿಸಿದ ದರ್ಶನ್

ಉಪೇಂದ್ರ, ರಮೇಶ್​ ಅರವಿಂದ್​, ಅಭಿಷೇಕ್​ ಅಂಬರೀಶ್​, ಡಾಲಿ ಧನಂಜಯ್​​, ಶ್ರೀಮುರುಳಿ, ಧನ್ವೀರ್​​, ಪ್ರಜ್ವಲ್​ ದೇವರಾಜ್​, ಯೋಗರಾಜ್​ ಭಟ್​, ವಸಿಷ್ಠ ಸಿಂಹ, ಪ್ರಿಯಾಂಕ ಉಪೇಂದ್ರ,

ರಕ್ಷಿತಾ ಪ್ರೇಮ್​​, ಸುಮಲತಾ ಅಂಬರೀಶ್​,  ಹರಿಪ್ರಿಯ, ಸಾಧುಕೋಕಿಲ, ಅಜಯ್​ ರಾವ್​​​, ಸತೀಶ್​ ನೀನಾಸಂ, ಎಸ್​.ನಾರಾಯಣ್​​ ಸೇರಿದಂತೆ ಚಿತ್ರರಂಗದ ಹಲವು ನಟ-ನಟಿಯರು ಬಂದಿದ್ದರು.

ಬಂದ ಎಲ್ಲಾ ಕಲಾವಿದರನ್ನು ದರ್ಶನ್ ಪ್ರೀತಿಯಿಂದ ಸ್ವಾಗತಿಸಿದರು. ಆ ಬಳಿಕ ದರ್ಶನ್ ಅವರು ಥಿಯೇಟರ್​ ಒಳಗೆ ತೆರಳಿದರು. ದರ್ಶನ್, ರಾಕ್​ಲೈನ್ ವೆಂಕಟೇಶ್ ಮೆಟ್ಟಿಲ ಮೇಲೆ ಕುಳಿತು ಸಿನಿಮಾ ವೀಕ್ಷಿಸಿದ್ದಾರೆ.

ಈ ಫೋಟೋ ವೈರಲ್​ ಆಗಿದ್ದು, ದರ್ಶನ್ ಯಾವಾಗಲೂ ಸಿಂಪಲ್ ಆಗಿ ಇರೋಕೆ ಇಷ್ಟ ಪಡುತ್ತಾರೆಂದು ಅಭಿಮಾನಿಗಳು  ಹೇಳುತ್ತಿದ್ದಾರೆ.

ಕಾಟೇರ ಸಿನಿಮಾ ಬಿಡುಗಡೆ ಆದ ಮೊದಲನೇ ದಿನವೇ 19.79 ಕೋಟಿ ರೂಪಾಯಿ ಬಾಚಿತ್ತು. ನಂತರ ಅಂದ್ರೆ 2ನೇ ದಿನವೂ ಅಬ್ಬರಿಸಿ 17.35 ಕೋಟಿ ಕಲೆಕ್ಷನ್ ಮಾಡಿತ್ತು.

ಈ ನಡುವೆ 3ನೇ ದಿನ ‘ಕಾಟೇರ’ ಸಿನಿಮಾ ಬರೋಬ್ಬರಿ 20.94 ರೂಪಾಯಿ ಗಳಿಸಿತ್ತು. ಇದೀಗ ಅಂದ್ರೆ 4ನೇ ದಿನ ಧಾಂ ಧೂಂ ಅಂತಾ 18.26 ಕೋಟಿ ರೂಪಾಯಿ ಗಳಿಸಿದೆಯಂತೆ.

5ನೇ ದಿನಕ್ಕೆ 86.84 ಕೋಟಿ ಕಲೆಕ್ಷನ್​ ಮಾಡುವ ಮೂಲಕ 2023-24 ರ ನಂ.1 ಸಿನಿಮಾವಾಗಿ ರಾರಾಜಿಸುತ್ತಿದೆ.

ವಿಶೇಷ ಅಂದ್ರೆ ಕರ್ನಾಟಕದಲ್ಲಿ 50ಕ್ಕೂ ಹೆಚ್ಚು ಚಿತ್ರಮಂದಿರಗಳು ಮುಚ್ಚಿಕೊಂಡಿತ್ತು. ಆದ್ರೆ ಕಾಟೇರ ಸಿನಿಮಾದಿಂದ ಆ ಎಲ್ಲಾ ಚಿತ್ರಮಂದಿರಗಳಿಗೆ ಮರುಜೀವ ಬಂದಿದೆ.

ಮುಂದಿನ ದಿನಗಳಲ್ಲಿ ವಿದೇಶದಲ್ಲಿಯೂ ಕನ್ನಡ ವರ್ಷನ್​ನಲ್ಲಿ ಕಾಟೇರ ಸಿನಿಮಾ ರಿಲೀಸ್​ ಆಗುತ್ತದೆ. ಹಾಗೇ ತಮಿಳು ತೆಲುಗುನಲ್ಲಿಯೂ ಕಾಟೇರ ಸಿನಿಮಾ ಡಬ್​ ಆಗಿ ರಿಲೀಸ್​ ಆಗಲಿದೆ.

ಇದನ್ನೂ ಓದಿ : ಜ.13ಕ್ಕೆ KSET ಪರೀಕ್ಷೆ: ವಸ್ತ್ರ ಸಂಹಿತೆ ಕಡ್ಡಾಯ..

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here