ಬೆಂಗಳೂರು : ನಟ ದರ್ಶನ್ಗೆ ಮತ್ತೊಂದು ಸಂಕಷ್ಟ ಶುರುವಾಗಿದೆ. ಇಷ್ಟು ದಿನಗಳ ಕಾಲ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ತೀವ್ರ ವಿಚಾರಣೆ ಎದುರಿಸಿದ್ದಾರೆ. ಆದರೆ ಇದೀಗ ದರ್ಶನ್ಗೆ ಹೊಸದೊಂದು ತಲೆಬಿಸಿ ಎದುರಾಗಿದೆ.
ಹೌದು.. ಐಟಿ ಅಧಿಕಾರಿಗಳು ದರ್ಶನ್ ಮನೆ ಮೇಲೆ ದಾಳಿ ಮಾಡಲು ತಯಾರಿ ನಡೆಸಿದ್ದಾರೆ. ಇದು ಕೂಡ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮುಂದುವರಿದ ಭಾಗ. ಅಂದರೆ, ಈ ಪ್ರಕರಣದಲ್ಲಿ 84 ಲಕ್ಷ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದರು. ಆ ಹಣದ ಮೂಲ ಏನು ಎಂಬುದನ್ನು ತಿಳಿಯುವ ಉದ್ದೇಶದಿಂದ ಐಟಿ ಅಧಿಕಾರಿಗಳು ತನಿಖೆ ಮಾಡಲು ಮುಂದಾಗಿದ್ದಾರೆ. ಹಣದ ಬಗ್ಗೆ ಐಟಿ ಅಧಿಕಾರಿಗಳಿಗೆ ಪೊಲೀಸರು ಮಾಹಿತಿ ನೀಡಿದ್ದರು. ಇದೀಗ ಹಣದ ಮೂಲ ಪತ್ತೆ ಮಾಡಲು ಐಟಿ ಅಧಿಕಾರಿಗಳು ದರ್ಶನ್ ವಿಚಾರಣೆಗೆ ಕೋರ್ಟ್ನಿಂದ ಅನುಮತಿ ಪಡೆದಿದ್ದಾರೆ.
ಒಂದೆಡೆ ದರ್ಶನ್ ಅವರು ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇನ್ನೊಂದೆಡೆ ಅವರಿಗೆ ಮತ್ತೆ ಕಾನೂನಿನ ಸಂಕಷ್ಟ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಅಕ್ರಮ ಹಣ ವರ್ಗಾವಣೆ ಆಗಿದ್ದು ಕಂಡುಬಂದರೆ ಐಟಿ ಅಧಿಕಾರಿಗಳು ಹೆಚ್ಚಿನ ತನಿಖೆ ಮಾಡಬೇಕಾಗುತ್ತದೆ. ಅದಕ್ಕಾಗಿ ದರ್ಶನ್ ಅವರನ್ನು ವಶಕ್ಕೆ ಪಡೆಯಲೂಬಹುದು. ಒಂದು ವೇಳೆ ರೇಣುಕಾಸ್ವಾಮಿ ಕೇಸ್ನಲ್ಲಿ ದರ್ಶನ್ಗೆ ಜಾಮೀನು ಸಿಕ್ಕರೂ ಹಣಕ್ಕೆ ಸಂಬಂಧಿಸಿದ ಕೇಸ್ನಲ್ಲಿ ಜೈಲು ವಾಸ ಮುಂದುವರಿಯಬಹುದು.
ಈಗಾಗಲೇ ದರ್ಶನ್ ಗ್ಯಾಂಗ್ನ ಮೂರು ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಕಾರ್ತಿಕ್ (ಎ15), ಕೇಶವಮೂರ್ತಿ (ಎ16), ನಿಖಿಲ್ ನಾಯಕ್ (ಎ17) ಜಾಮೀನು ಪಡೆದು ಸದ್ಯಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ : ಮುಡಾ ಹಗರಣ.. ಸಿಎಂ ಸಿದ್ದುಗೆ ಇಂದೇ ನಿರ್ಣಾಯಕ ದಿನ – ರಾಜ್ಯಪಾಲರ ಆದೇಶ ಎತ್ತಿ ಹಿಡಿಯುತ್ತಾ ಹೈಕೋರ್ಟ್?