ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲು ಸೇರಿದ್ದು, ದಿನದಿಂದ ದಿನಕ್ಕೆ ಅವರಿಗೆ ಸಂಕಷ್ಟ ಹೆಚ್ಚಾಗುತ್ತಿದೆ. ಇದೀಗ ಪೊಲೀಸರು 4000 ಪುಟಗಳ ಚಾರ್ಜ್ಶೀಟ್ ರೆಡಿ ಮಾಡಿದ್ದಾರೆ. ಕೊಲೆ ಕೇಸ್ನಲ್ಲಿ ಈವರೆಗೂ ದರ್ಶನ್ A-2 ಆರೋಪಿಯಾಗಿದ್ದರು. ನಟಿ ಪವಿತ್ರಾ ಗೌಡ A-1 ಆಗಿದ್ದರು. ಆದರೆ ಈಗ ಬೆಂಗಳೂರು ಪೊಲೀಸರು ಚಾರ್ಜ್ಶೀಟ್ ಸಲ್ಲಿಸಲು ಮುಂದಾಗಿದ್ದು, ಸಾಕ್ಷ್ಯಗಳನ್ನು ಆಧರಿಸಿ ದರ್ಶನ್ ಅವರನ್ನು A-1 ಮಾಡುವುದು ಬಹುತೇಕ ಫಿಕ್ಸ್ ಆಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಫಾರಿನ್ ಪೊಲೀಸರನ್ನೂ ಮೀರಿಸುವಂತೆ ತನಿಖೆ ನಡೆಸುತ್ತಿದ್ದಾರೆ. ಪ್ರತಿ ಮೂವ್ಮೆಂಟನ್ನೂ ಆಳವಾಗಿ ಅವಲೋಕಿಸಿದ್ದು, ಬೆಂಗಳೂರು ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಮಾಡಿದ್ದಾರೆ. ಸ್ಕಾಟ್ಲೆಂಡ್ ಪೊಲೀಸ್ ಸ್ಟೈಲ್ನಲ್ಲಿ ಪ್ರತಿ ಹೆಜ್ಜೆ ಬಗ್ಗೆಯೂ ವಿಸ್ತೃತವಾಗಿ ತನಿಖೆ ನಡೆಸಿದ್ದಾರೆ. ತನಿಖೆ ವೇಳೆ ಇಡೀ ಕೃತ್ಯದ ಸೂತ್ರಧಾರ ದರ್ಶನ್ ಎಂಬುದು ಬೆಳಕಿಗೆ ಬಂದಿದೆ. ಪೊಲೀಸರು ಪ್ರತಿ ವಿಚಾರಕ್ಕೂ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದಾರೆ. ಹೀಗಾಗಿ ಈಗ ಪೊಲೀಸರು ಬೃಹತ್ ಚಾರ್ಜ್ಶೀಟ್ ರೆಡಿ ಮಾಡಿದ್ದಾರೆ.
ಕಾಮಾಕ್ಷಿಪಾಳ್ಯ ಪೊಲೀಸರು 4000 ಪುಟಗಳ ಚಾರ್ಜ್ ಶೀಟ್ ರೆಡಿ ಮಾಡಿದ್ದು, ಕೆಲ ದಿನಗಳಲ್ಲೇ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಆರೋಪಿಗಳು ಹಾಗೂ ಕೃತ್ಯಕ್ಕೆ ಸಂಬಂಧಿಸಿದ ಇಂಚಿಂಚೂ ಮಾಹಿತಿ ಉಲ್ಲೇಖವಾಗಿದ್ದು, ಸೆಪ್ಟೆಂಬರ್ 5ರೊಳಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಲು ನಿರ್ಧರಿಸಲಿದ್ದಾರೆ. ಸೆಪ್ಟೆಂಬರ್ 10ಕ್ಕೆ ದರ್ಶನ್ ಆಂಡ್ ಗ್ಯಾಂಗ್ ಬಂಧಿಸಿ 90 ದಿನವಾಗುತ್ತೆ. ಪೊಲೀಸರಿಂದ ಅಂತಿಮ ಹಂತದ ಪರಿಶೀಲನೆ, ದಾಖಲೆಗಳ ಕ್ರೋಢಿಕರಣವಾಗುತ್ತಿದೆ.
ಇದನ್ನೂ ಓದಿ : ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಆರೋಪಿ ಪವಿತ್ರಾ ಗೌಡಗೆ ಜೈಲಾ.. ಬೇಲಾ? – ಇಂದು ತೀರ್ಪು ಪ್ರಕಟ..!