ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಅಂತಿಮ ಹಂತ ತಲುಪಿದ್ದು, ನಾಳೆಯೇ ಪೊಲೀಸರು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಲಿದ್ದಾರೆ. ಇದರಿಂದಾಗಿ ದರ್ಶನ್ಗೆ ಆತಂಕ ಶುರುವಾಗಿದ್ದು, ಬಳ್ಳಾರಿ ಜೈಲಿನಲ್ಲಿ ಟಿವಿ ಬೇಕು ಎಂದು ಜೈಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಸರ್ಜಿಕಲ್ ಚೇರ್ ಕೊಟ್ಟ ನಂತರ ದರ್ಶನ್ ಈಗ ಟಿವಿಗೆ ಬೇಡಿಕೆ ಇಟ್ಟಿದ್ದಾರೆ. ಜೈಲಿಗೆ ಬಂದಾಗ ದರ್ಶನ್ ನನಗೆ ಟಿವಿ ಬೇಡ ಅಂತಾ ಹೇಳಿದ್ದರು, ಇದೀಗ ದಿಢೀರ್ ಅಂತಾ ಟಿವಿ ಬೇಕು ಎನ್ನುತ್ತಿದ್ದಾರೆ. ಚಾರ್ಜ್ಶೀಟ್ ಸಲ್ಲಿಸಲು ಬೆಂಗಳೂರು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದು, ನಾಳೆ ದರ್ಶನ್ ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದೆ. ಹೀಗಾಗಿ ದರ್ಶನ್ಗೆ ಟೆನ್ಷನ್ ಶುರುವಾಗಿದೆ. ಚಾರ್ಜ್ಶೀಟ್ ಸಲ್ಲಿಕೆಯಾಗಿ ಅಪರಾಧಿ ಎಂದು ಸಾಬೀತಾದರೆ ದರ್ಶನ್ಗೆ ಬಳ್ಳಾರಿ ಜೈಲೂಟ ಫಿಕ್ಸ್ ಆಗಲಿದೆ. ಹೀಗಾಗಿ ಚಾಲೆಂಜ್ಸ್ಟಾರ್ಗೆ ಚಾರ್ಜ್ಶೀಟ್ ದೊಡ್ಡ ಚಾಲೆಂಜ್ ಆಗಿದೆ. ಇದೆಲ್ಲದರ ಬೆಳವಣಿಗೆ ತಿಳಿಯಲು ದರ್ಶನ್ ಟಿವಿ ಬೇಕು ಎಂದು ಮನವಿ ಮಾಡಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಿಂದಾಸ್ ಜೀವನ ನಡೆಸುತ್ತಿದ್ದ ದರ್ಶನ್ಗೆ ಈಗ ಜೊತೆಗಾರರು ಯಾರು ಇಲ್ಲದಂತಾಗಿದೆ. ಕುಟುಂಬಸ್ಥರು ಆಪ್ತರೂ ಕೂಡ ಪದೇ ಪದೇ ಜೈಲಿನ ಕಡೆಗೆ ಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದರ್ಶನ್ಗೆ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ.
ಇದನ್ನೂ ಓದಿ : ಬಿಜೆಪಿ ಶಾಸಕ ಸುರೇಶ್ ಕುಮಾರ್ಗೆ ಅನಾರೋಗ್ಯ – ಐಸಿಯುನಲ್ಲಿ ಚಿಕಿತ್ಸೆ..!